ETV Bharat / sitara

500 ಕೋಟಿ ರೂ. ಬಜೆಟ್ ನಲ್ಲಿ ಕನ್ನಡ ಸಿನಿಮಾ! ಆಸ್ಕರ್ ಪ್ರಶಸ್ತಿ ವಿಜೇತ ಈ ಚಿತ್ರಕ್ಕೆ ಡೈರೆಕ್ಟರ್​? - high budget kannada movie

ಗಾಯಕ, ಸಂಗೀತ ನಿರ್ದೇಶಕ ಗಾನ ಶ್ರವಣ್ ಸ್ವಾಮೀಜಿ, ಬರೋಬ್ಬರಿ 400 ರಿಂದ 500 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​​ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದ್ದು, ಅದಿತಿ ಸಹ ನಿರ್ಮಾಪಕಿ ಆಗಿದ್ದಾರೆ.

high budget movie will come in kannada industry
500 ಕೋಟಿ ರೂಪಾಯಿ ಬಜೆಟ್​​ನಲ್ಲಿ ನಿರ್ಮಾಣವಾಗಲಿದೆಯಾ ಕನ್ನಡ ಸಿನೆಮಾ?
author img

By

Published : Aug 14, 2021, 11:13 AM IST

ಕೆಜಿಎಫ್ ಸಿನಿಮಾ ಮೂಲಕ ಈಗ ಕನ್ನಡ ಚಿತ್ರರಂಗವು ಬೇರೆ ಭಾಷೆಯ ಸಿನಿಮಾಗಳು ಮತ್ತು ಇಂಡಸ್ಟ್ರಿಗಿಂತ ಏನೂ ಕಮ್ಮಿ ಇಲ್ಲ ಎಂಬುದು ಸಾಬೀತಾಗಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಇದರ ಬೆನ್ನಲ್ಲೇ, ಗಾಯಕ, ಸಂಗೀತ ನಿರ್ದೇಶಕ ಗಾನ ಶ್ರವಣ್ ಸ್ವಾಮೀಜಿ, ಬರೋಬ್ಬರಿ 400 ರಿಂದ 500 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​​ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದ್ದು, ಅದಿತಿ ಸಹ ನಿರ್ಮಾಪಕಿ ಆಗಿದ್ದಾರೆ.

ಹೈ ಬಜೆಟ್​ ಸಿನಿಮಾ ಕುರಿತು ಪ್ರತಿಕ್ರಿಯೆ

ಕ್ರಿಷ್ಣರಾಜ- 4 :

ಈ ಬಗ್ಗೆ ಮಾತನಾಡಿದ ಗಾನ ಶ್ರವಣ್ ಸ್ವಾಮೀಜಿ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಸೇರಿ 6 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್​ ಇದೆ. ಮೈಸೂರಿನಲ್ಲಿ 640 ಎಕರೆ ಜಮೀನು ತೆಗೆದುಕೊಂಡು ಸೆಟ್ ಹಾಕಿ ಸಿನಿಮಾ ಶೂಟ್ ಮಾಡುವ ಯೋಜನೆಯಿದೆ. ಈ ಬಹು ಕೋಟಿ ವೆಚ್ಚದ ಸಿನಿಮಾ ನಿರ್ದೇಶನವನ್ನು ಟಾಲಿವುಡ್ ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿಯಂತಹ ನಿರ್ದೇಶಕರ ಕೈಯಲ್ಲಿ ಮಾಡಿಸುವ ಆಸೆಯಿದೆ. ಇಲ್ಲಾ ಅಂದರೆ ಹಾಲಿವುಡ್ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕರನ್ನು ಕರೆತರುವ ಪ್ರಯತ್ನವಿದೆ. ಕನ್ನಡದ ದೊಡ್ಡ ಸ್ಟಾರ್ ನಟರು, ತೆಲುಗು, ತಮಿಳು, ಹಿಂದಿ ಹಾಗು ಇಂಗ್ಲಿಷ್ ಸ್ಟಾರ್ ನಟರು ಚಿತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗೆ ಕ್ರಿಷ್ಣರಾಜ- 4 ಎಂದು ಟೈಟಲ್ ಇಡಲಾಗಿದೆ ಎಂದು ತಿಳಿಸಿದರು. ಇದೊಂದು ಐತಿಹಾಸಿಕ ಕಥೆಯಾಗಿದ್ದು, ಗಾನ ಶ್ರವಣ್ ಸ್ವಾಮೀಜಿ ನಾಲ್ಕು ವರ್ಷದ ಹಿಂದೆಯೇ ಈ ಸಿನಿಮಾದ ಕಥೆಯನ್ನು ಬರೆದಿದ್ದಾರಂತೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ನ 'ಅರಗಿಣಿ'​ಗೆ ಹುಟ್ಟುಹಬ್ಬದ ಸಂಭ್ರಮ

ಇದರ ಜೊತೆಗೆ ಈ ಸಿನಿಮಾದ ಸಹ ನಿರ್ಮಾಪಕಿ ಅದಿತಿ ಮಾತನಾಡಿ, ಕ್ರಿಷ್ಣರಾಜ- 4 ಅಂದರೆ ಇದು ರಾಜನ ಕಥೆ. ನಾಲ್ಕು ಕಾಲಘಟ್ಟದಲ್ಲಿ ನಡೆಯುವ ಕಥೆ. ಈ ಸಿನಿಮಾವನ್ನು ಬರೋಬ್ಬರಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಅಂತ ಹೇಳಿದರು. ಮುಂದಿನ ದಿನಗಳಲ್ಲಿ ಕನ್ನಡದ, ತೆಲುಗು, ತಮಿಳು, ಹಿಂದಿ ಹಾಗು ಇಂಗ್ಲಿಷ್ ಸೇರಿದಂತೆ ಯಾವ ಯಾವ ದೊಡ್ಡ ಸ್ಟಾರ್​ ಈ ಸಿನಿಮಾಗೆ ಹೀರೋ ಆಗ್ತಾರೆ, ನಾಯಕಿಯರು, ಯಾರೆಲ್ಲಾ ಈ ಸಿನಿಮಾದಲ್ಲಿ ಇರುತ್ತಾರೆ ಅನ್ನೋದನ್ನು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಗಾನ ಶ್ರವಣ್ ಸ್ವಾಮೀಜಿ:

ಗಾನ ಶ್ರವಣ್ ಸ್ವಾಮೀಜಿ ಅಂದರೆ, ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದ ಸ್ವಾಮೀಜಿಯೇ ಈ ಗಾನ ಶ್ರವಣ್ ಸ್ವಾಮೀಜಿ. ಈಗ ಸಿನಿಮಾ ಸಾಹಸಕ್ಕೆ ಕೈ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.