ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ರಿಷಬ್ ಶೆಟ್ಟಿ ನಟನೆಯ 'ಹೀರೊ' ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ರಿಷಬ್ ಶೆಟ್ಟಿಯ ನಟನೆ ಹಾಗೂ ಅವರ ಪಾತ್ರ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಚಿತ್ರದಲ್ಲಿ ರಾಮಾಯಣ ಕಾಲದ ಲಂಕೆ, ಅಶೋಕವನ ಎಂಬ ಪದಗಳು ಪದೇ ಪದೆ ಕೇಳಿ ಬರುತ್ತವೆ. ಅಲ್ಲದೆ ರಕ್ತದೋಕುಳಿ, ಪ್ರೇಮ-ಸರಸ, ಹಾಸ್ಯ, ಆಕ್ಷನ್ ಎಲ್ಲವೂ ಇದ್ದು, ಚಿತ್ರದಲ್ಲಿ ರಿಷಬ್ ಹೀರೋನಾ?ವಿಲನ್ನಾ? ಎಂಬುದರ ಬಗ್ಗೆ ಟ್ವಿಸ್ಟ್ ಇದೆ.
ಸಿನಿಮಾ ಚಿತ್ರೀಕರಣ ಕೇವಲ ಸೀಮಿತ ಪ್ರದೇಶದಲ್ಲಿ ನಡೆದಿದ್ದು, ಹೀರೋ ಚಿತ್ರದ ಶೂಟಿಂಗ್ ಅನ್ನು ಲಾಕ್ಡೌನ್ ವೇಳೆಯಲ್ಲಿ ಮಾಡಲಾಗಿದೆ. ಭರತ್ ರಾಜ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ರಿಷಬ್ ಶೆಟ್ಟಿಯೇ ಬಂಡವಾಳ ಹಾಕಿದ್ದಾರೆ. ರಿಷಬ್ಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಇನ್ನು ಶೆಟ್ರು ಈಗಾಗಲೇ 'ಗರುಡ ಗಮನ ವೃಷಭ ವಾಹನ', 'ಹರಿಕತೆ ಅಲ್ಲ ಗಿರಿಕತೆ', 'ಬೆಲ್ ಬಾಟಂ 2' ಸಿನಿಮಾದ ಚಿತ್ರೀಕರಣಗಳಲ್ಲಿ ಬ್ಯುಸಿ ಇದ್ದಾರೆ. ಇವುಗಳ ನಡುವೆ ಕಿರಿಕ್ ಪಾರ್ಟಿ 2 ಸಿನಿಮಾ ನಿರ್ದೇಶಿಸಲಿದ್ದಾರೆ.
- " class="align-text-top noRightClick twitterSection" data="">