ETV Bharat / sitara

ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ 'ಹೀರೋ' ಸಿನಿಮಾ - hero movie actor

ಇದೇ ಭಾನುವಾರ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಹೀರೋ ಸಿನಿಮಾ ಪ್ರಸಾರವಾಗಲಿದೆ. ಕೊರೊನಾ ಕಾಲದಲ್ಲಿ ಮನೆಯಲ್ಲೇ ಕುಳಿತು ಬೇಸರವಾಗಿರುವ ನಿಮಗೆ ಈ ಸಿನಿಮಾ ಮನರಂಜನೆ ನೀಡಲಿದೆ.

hero movie telecast in coming sunday
ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ 'ಹೀರೋ' ಸಿನಿಮಾ
author img

By

Published : May 5, 2021, 7:57 PM IST

ರಿಷಬ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಮುಖ್ಯಭೂಮಿಕೆಯಲ್ಲಿ ಇತ್ತೀಚೆಗೆ ತೆರೆಕಂಡ 'ಹೀರೋ' ಸಿನಿಮಾ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಮಗಳು ಜಾನಕಿ ಧಾರಾವಾಹಿಯ ನಾಯಕಿ ಗಾನವಿ ಮೊದಲ ಬಾರಿಗೆ 'ಹೀರೋ' ಸಿನಿಮಾ‌ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದು, ಸಿನಿಮಾ ಹಾಗೂ ಅವರ ನಟನೆ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದಿದ್ದವು.

ಕಳೆದ ಬಾರಿಯ ಲಾಕ್​ಡೌನ್ ಆದಾಗ ತಮ್ಮ ಸೀಮಿತ ಸ್ನೇಹಿತರ ಸಹಾಯದೊಂದಿಗೆ ರಿಷಬ್ ಶೆಟ್ಟಿ ಈ ಸಿನಿಮಾ ನಿರ್ಮಿಸಿದ್ದರು. ಮಾರ್ಚ್ 5 ರಂದು ಬಿಡುಗಡೆಯಾಗಿ ಥಿಯೇಟರ್​ನಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ಈಗ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ರಿಷಬ್ ಶೆಟ್ಟಿ ನಾಯಕನಾಗಿರುವ ಈ ಸಿನಿಮಾಗೆ ಮೊಟ್ಟ ಮೊದಲ ಬಾರಿಗೆ ಭರತ್ ರಾಜ್ ನಿರ್ದೇಶನ ಮಾಡಿದ್ದಾರೆ. ಲಾಕ್​ಡೌನ್ ನಂತರ ಸಿನಿಮಾ ಶೂಟಿಂಗ್ ನಡೆದಿದೆ. ಇದ್ದ ವಿರಳ ಸಿಬ್ಬಂದಿಯಿಂದಲೇ ಚಿತ್ರತಂಡ ಚಿತ್ರೀಕರಣ ಪೂರೈಸಿತ್ತು.

ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮೂರು ಹಾಡುಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಬೆಲ್ ಬಾಟಮ್ ನಂತರ ಪೂರ್ಣ ಪ್ರಮಾಣದ ನಾಯಕನಾಗಿ ಈ ಸಿನಿಮಾ‌ ಮೂಲಕ ಕಾಣಿಸಿಕೊಂಡಿದ್ದಾರೆ.

ಇದೇ ಭಾನುವಾರ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಹೀರೋ ಸಿನಿಮಾ ಪ್ರಸಾರವಾಗಲಿದೆ. ಕೊರೊನಾ ಕಾಲದಲ್ಲಿ ಮನೆಯಲ್ಲೇ ಕುಳಿತು ಬೇಸರವಾಗಿರುವ ನಿಮಗೆ ಈ ಸಿನಿಮಾ ಮನರಂಜನೆ ನೀಡಲಿದೆ.

ರಿಷಬ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಮುಖ್ಯಭೂಮಿಕೆಯಲ್ಲಿ ಇತ್ತೀಚೆಗೆ ತೆರೆಕಂಡ 'ಹೀರೋ' ಸಿನಿಮಾ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಮಗಳು ಜಾನಕಿ ಧಾರಾವಾಹಿಯ ನಾಯಕಿ ಗಾನವಿ ಮೊದಲ ಬಾರಿಗೆ 'ಹೀರೋ' ಸಿನಿಮಾ‌ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದು, ಸಿನಿಮಾ ಹಾಗೂ ಅವರ ನಟನೆ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದಿದ್ದವು.

ಕಳೆದ ಬಾರಿಯ ಲಾಕ್​ಡೌನ್ ಆದಾಗ ತಮ್ಮ ಸೀಮಿತ ಸ್ನೇಹಿತರ ಸಹಾಯದೊಂದಿಗೆ ರಿಷಬ್ ಶೆಟ್ಟಿ ಈ ಸಿನಿಮಾ ನಿರ್ಮಿಸಿದ್ದರು. ಮಾರ್ಚ್ 5 ರಂದು ಬಿಡುಗಡೆಯಾಗಿ ಥಿಯೇಟರ್​ನಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ಈಗ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ರಿಷಬ್ ಶೆಟ್ಟಿ ನಾಯಕನಾಗಿರುವ ಈ ಸಿನಿಮಾಗೆ ಮೊಟ್ಟ ಮೊದಲ ಬಾರಿಗೆ ಭರತ್ ರಾಜ್ ನಿರ್ದೇಶನ ಮಾಡಿದ್ದಾರೆ. ಲಾಕ್​ಡೌನ್ ನಂತರ ಸಿನಿಮಾ ಶೂಟಿಂಗ್ ನಡೆದಿದೆ. ಇದ್ದ ವಿರಳ ಸಿಬ್ಬಂದಿಯಿಂದಲೇ ಚಿತ್ರತಂಡ ಚಿತ್ರೀಕರಣ ಪೂರೈಸಿತ್ತು.

ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮೂರು ಹಾಡುಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಬೆಲ್ ಬಾಟಮ್ ನಂತರ ಪೂರ್ಣ ಪ್ರಮಾಣದ ನಾಯಕನಾಗಿ ಈ ಸಿನಿಮಾ‌ ಮೂಲಕ ಕಾಣಿಸಿಕೊಂಡಿದ್ದಾರೆ.

ಇದೇ ಭಾನುವಾರ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಹೀರೋ ಸಿನಿಮಾ ಪ್ರಸಾರವಾಗಲಿದೆ. ಕೊರೊನಾ ಕಾಲದಲ್ಲಿ ಮನೆಯಲ್ಲೇ ಕುಳಿತು ಬೇಸರವಾಗಿರುವ ನಿಮಗೆ ಈ ಸಿನಿಮಾ ಮನರಂಜನೆ ನೀಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.