ನವದೆಹಲಿ : ದೀಪಿಕಾ ಪಡುಕೋಣೆ ಅಭಿನಯದ ‘ಚಪಾಕ್’ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಈ ಬೆನ್ನಲ್ಲೇ ಫಾಕ್ಸ್ ಸ್ಟಾರ್ ಸ್ಟುಡಿಯೊದ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ತಯಾರಕರು ಮತ್ತು ನಿರ್ದೇಶಕರು ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮೀ ಅಗರವಾಲ್ ಪರ ವಕೀಲೆ ಅಪರ್ಣಾ ಭಟ್ ಅವರ ಬೇಡಿಕೆಕೆ ಮನ್ನಣೆ ನೀಡುವಂತೆ ನಿರ್ದೇಶಿಸಿದೆ.
ಜನವರಿ 15 ರೊಳಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಲನಚಿತ್ರ ಸ್ಲೈಡ್‌ಗಳಲ್ಲಿ ಬದಲಾವಣೆಗಳನ್ನು ಮಾಡಬೇಕು ಎಂದು ನ್ಯಾ.ಪ್ರತಿಭಾ.ಎಮ್ ಸಿಂಗ್ ಆದೇಶಿಸಿದರು. ಫಾಕ್ಸ್ ಸ್ಟಾರ್ ಸ್ಟುಡಿಯೊದ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಾಲಯ ಈ ಆದೇಶವನ್ನು ನೀಡಿದೆ. ಲಕ್ಷ್ಮೀ ಅಗರವಾಲ್ ಪರ ವಕೀಲೆ ಹಂಚಿಕೊಂಡ ವಿಚಾರಗಳಿಗಾಗಿ ಅಪರ್ಣಾ ಭಟ್ ಅವರಿಗೆ ಮನ್ನಣೆ ನೀಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.