ಇಂದು ಕನ್ನಡದ ಟಾಪ್ ಹೀರೋ ಚಿರಂಜೀವಿ ಸರ್ಜಾ ಮತ್ತು ಹೀರೋಯಿನ್ ಪ್ರಣಿತಾ ಸುಭಾಷ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಪ್ರಣಿತಾ ಸರಳವಾಗಿ ರಾಗಿಗುಡ್ಡದ ಸ್ಲಂ ನಿವಾಸಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸ್ಲಂ ನಿವಾಸಿಗಳ ಜೊತೆ ಕೇಕ್ ಕಟ್ ಮಾಡಿ ಮಕ್ಕಳಿಗೆ ಕೇಕ್ ತಿನ್ನಿಸುವ ಮೂಲಕ ಸಂಭ್ರಮಿಸಿದರು.
ಪೊಲೀಸ್ ಸಿಬ್ಬಂದಿಗೆ ಪ್ರಣಿತಾ ಫೌಂಡೇಷನ್ ವತಿಯಿಂದ ಸನ್ಮಾನ ಮಾಡಿ ಗಿಡಗಳನ್ನು ಕೊಟ್ಟು ಪರಿಸರ ಬೆಳೆಸುವ ಕಾರ್ಯಕ್ಕೆ ಕೈ ಅವರು ಇದೇ ವೇಳೆ ಕೈಜೋಡಿಸಿದ್ರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಣಿತಾ, ಕಳೆದ ವರ್ಷ ನನ್ನ ಹುಟ್ಟುಹಬ್ಬಕ್ಕೆ ನಮ್ಮ ಫೌಂಡೇಶನ್ ಮೂಲಕ ಹಾಸನದಲ್ಲಿ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲಾಗಿತ್ತು. ಈ ಬಾರಿ ಬಡವರಿಗಾಗಿ ಉಚಿತ ಅರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಡಿದ್ದು ಮುಂದಿನ ದಿನಗಳಲ್ಲಿ ತಮ್ಮ ಸಂಸ್ಥೆಯ ಮೂಲಕ ಅನೇಕ ಸಮಾಜ ಮುಖಿ ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಚಿರಂಜೀವಿ ಸರ್ಜಾ ಕೂಡ ತಮ್ಮ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದು, ಚಿರುಗೆ ಮಡದಿ ಮೇಘನಾ ರಾಜ್ ಇನ್ಸ್ಟಾಗ್ರಾಮ್ ಮೂಲಕ ವಿಶ್ ಮಾಡಿದ್ದಾರೆ. ಅರ್ಜುನ್ ಸರ್ಜಾ ಅಳಿಯನಾದ ಚಿರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಚಿರು, ಸಂಹಾರ, ಗಂಡೆದೆ, ವಾಯುಪುತ್ರ, ವರದ ನಾಯಕ, ಸಿಂಗ ಸಿನಿಮಾಗಳಲ್ಲಿ ನಾಯಕ ನಟನಾಗಿ ತೆರೆಯ ಮೇಲೆ ಮಿಂಚಿದ್ದಾರೆ. ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಚಿರು 36ರ ಸಂಭ್ರಮದಲ್ಲಿದ್ದಾರೆ.
- " class="align-text-top noRightClick twitterSection" data="
">