ಚೆಂದವಳ್ಳಿ ತೋಟ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಹಿರಿಯ ನಟಿ ತಾರಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ದೈವ ಭಕ್ತೆಯಾಗಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಇಂದು ಜನ್ಮದಿನವನ್ನು ಕಾಕ್ಸ್ ಟೌನ್ನ ಗಂಗಮ್ಮ ದೇವಾಲಯದಲ್ಲಿ ಗಂಗಮ್ಮನಿಗೆ ಪೂಜೆ ಸಲ್ಲಿಸಿ ಪೌರ ಕಾರ್ಮಿಕರು ಹಾಗೂ ಶವ ಸಂಸ್ಕಾರ ಸಿಬ್ಬಂದಿಯೊಂದಿಗೆ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅಲ್ಲದೆ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಪೌರ ಕಾರ್ಮಿಕರು ಹಾಗೂ ರುಧ್ರ ಭೂಮಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ಬಟ್ಟೆ, ಊಟ ವಿತರಿಸಿದರು.
ನಟಿ ತಾರಾ ವರಮಹಾಲಕ್ಷ್ಮಿ ಹಬ್ಬ, ಸಂಕ್ರಾಂತಿ ಹಬ್ಬದಂದು ಸಹ ಗಂಗಮ್ಮನ ದೇವಾಲಯಕ್ಕೆ ಭೇಟಿ ಕೊಡುತ್ತಾರೆ.