ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದ ವೇದಿಕೆಯಲ್ಲಿ ನಾದಬ್ರಹ್ಮ ಹಂಸಲೇಖ ಅವರು, ಹೆಣ್ಣು ಮಗುವಿಗೆ 'ಕನ್ನಡ' ಎಂದು ನಾಮಕರಣ ಮಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಈ ಬಾರಿಯ ಅನುಬಂಧ ಕಾರ್ಯಕ್ರಮಕ್ಕೆ ಬೆಳಗಾವಿಯ ಕನ್ನಡತಿ ಧಾರಾವಾಹಿಯ ಅಭಿಮಾನಿ ದಂಪತಿ ತಮ್ಮ ಮುದ್ದಾದ ಮಗುವಿನೊಂದಿಗೆ ಆಗಮಿಸಿದ್ದರು.
ಈ ವೇಳೆ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಬೇಕೆಂದು ಕೇಳಿಕೊಂಡಿದ್ದು, ಹಂಸಲೇಖ ಅವರು ಮಗುವಿಗೆ 'ಕನ್ನಡ' ಎಂದು ಹೆಸರಿಟ್ಟಿದ್ದಾರೆ. ಹೆಸರಿಟ್ಟ ಬಳಿಕ ಇದು ಇಡೀ ಕನ್ನಡನಾಡು ಆನಂದಭಾಷ್ಪ ಸುರಿಸುವಂತಹ ಸಂದರ್ಭ ಎಂದು ಹಂಸಲೇಖ ಹೇಳಿದ್ದಾರೆ.
ರಂಜನಿ ರಾಘವನ್ ಹಾಗೂ ಕಿರಣ್ ರಾಜ್ ಅವರು ಮುಖ್ಯಭೂಮಿಕೆಯಲ್ಲಿರುವ ಕನ್ನಡತಿ ಧಾರಾವಾಹಿಯು ಉತ್ತಮವಾಗಿ ಮೂಡಿಬರುತ್ತಿದೆ.