ಮುಂಬೈ (ಮಹಾರಾಷ್ಟ್ರ): ನಟ ಗುರ್ಮೀತ್ ಚೌಧರಿ ಮತ್ತು ಡೆಬಿನಾ ಬೊನರ್ಜಿ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಬುಧವಾರ ಘೋಷಿಸಿದ್ದಾರೆ.
2011 ರಲ್ಲಿ ವಿವಾಹವಾದ ದಂಪತಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ತಾವಿಬ್ಬರು ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಟು ಬಿಕಮಿಂಗ್ 3. ಚೌಧರಿ ಜೂನಿಯರ್ ಕಮಿಂಗ್. ಸೀಕಿಂಗ್ ಯುವರ್ ಬ್ಲೆಸ್ಸಿಂಗ್ಸ್.# ಪೇರೆಂಟ್ಸ್ಟೋಬ್# ಗುರ್ಬಿನಾ, ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಉದ್ಯಮದ ಹಲವಾರು ಸ್ನೇಹಿತರು, ಮೌನಿ ರಾಯ್, ಕರಿಷ್ಮಾ ಶರ್ಮಾ, ಗೌಹರ್ ಖಾನ್ ಮತ್ತು ಮಹಿ ವಿಜ್ ಸೇರಿದಂತೆ ಇತರರು ಅವರನ್ನು ಅಭಿನಂದಿಸಿದ್ದಾರೆ.
ಖತ್ರೋನ್ ಕೆ ಖಿಲಾಡಿ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚೌಧರಿ ಅವರು ಖಾಮೋಶಿಯಾನ್ ಮತ್ತು ಜೆಪಿ ದತ್ತಾ ಅವರ ಪಲ್ಟನ್‌ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಓದಿ: ಇನ್‍ಲೈನ್ ಸ್ಕೇಟಿಂಗ್‍ನಲ್ಲಿ ಗಿನ್ನೆಸ್ ದಾಖಲೆ ಬರೆದ ಹುಬ್ಬಳ್ಳಿಯ ಬಾಲಕಿ