ETV Bharat / sitara

‘5 ಅಡಿ 7 ಅಂಗುಲ’ ಸಿನಿಮಾಗೆ ಸಖತ್​​​ ರೆಸ್ಪಾನ್ಸ್:​​​ ಚಿತ್ರತಂಡ ಫುಲ್ ಖುಷ್​ - ‘5 ಅಡಿ 7 ಅಂಗುಲ’ ಸಿನಿಮಾಗೆ ಸಖತ್​ ರೇಸ್ಪಾನ್ಸ್​ ಚಿತ್ರ ತಂಡ ಫುಲ್ ಖುಷ್​

ನಿತ್ಯಾನಂದ ಪ್ರಭು ಅವರು ಮೊದಲ ಬಾರಿ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ಸಿನಿಮಾ ಇದು. 150 ಆಸನಗಳಿಗೆ ಟಿಕೆಟ್ ನೀಡಿದರೆ 140 ಆಸನಗಳು ಭರ್ತಿ ಆಗುತ್ತಿವೆ ಎಂಬುದು ಒಂದು ಕಡೆ ಖುಷಿ. ಆದರೆ ನಿತ್ಯಾನಂದ ಪ್ರಭು ಅವರಿಗೆ ಬೇಡಿಕೆ ಹೆಚ್ಚಾಗುತ್ತಿರುವುದರ ಬಗ್ಗೆ ಸಂತೋಷ ಇದೆಯಂತೆ.

Great response to 5 ADI 7 ANGULA cinema
‘5 ಅಡಿ 7 ಅಂಗುಲ’ ಸಿನಿಮಾಗೆ ಸಖತ್​ ರೇಸ್ಪಾನ್ಸ್​ ಚಿತ್ರ ತಂಡ ಫುಲ್ ಖುಷ್​
author img

By

Published : Oct 26, 2020, 9:03 AM IST

‘5 ಅಡಿ 7 ಅಂಗುಲ’ ಸಿನಿಮಾ ರೀ ರೀಲಿಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿತ್ಯಾನಂದ ಪ್ರಭು ಅವರು ಮೊದಲ ಬಾರಿ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ಸಿನಿಮಾ ಇದು. 150 ಆಸನಗಳಿಗೆ ಟಿಕೆಟ್ ನೀಡಿದರೆ 140 ಆಸನಗಳು ಭರ್ತಿ ಆಗುತ್ತಿವೆ ಎಂಬುದು ಒಂದು ಕಡೆ ಖುಷಿ. ಆದರೆ ನಿತ್ಯಾನಂದ ಪ್ರಭು ಅವರಿಗೆ ಬೇಡಿಕೆ ಹೆಚ್ಚಾಗುತ್ತಿರುವುದರ ಬಗ್ಗೆ ಸಂತೋಷ ಇದೆಯಂತೆ.

‘5 ಅಡಿ 7 ಅಂಗುಲ’ ಮಾರ್ಚ್ 13 , 2020ರಂದು ಬಿಡುಗಡೆ ಆದಾಗ 38 ಚಿತ್ರಮಂದಿರಗಳಲ್ಲಿ ಕೇವಲ ಮೂರು ಪ್ರದರ್ಶನ ಕಂಡಿತ್ತು. ನಂತರ ಲಾಕ್​​ಡೌನ್​ನಿಂದ ಚಿತ್ರಮಂದಿರಗಳನ್ನು ಮುಚ್ಚಿದ್ದರಿಂದ ಚಿತ್ರ ಪ್ರದರ್ಶನ ಸ್ಥಗಿತಗೊಂಡಿತ್ತು. ಈಗ ಅಕ್ಟೋಬರ್ 16ರಂದು ಈ ಸಿನಿಮಾ ಮತ್ತೆ ರೀ ರೀಲಿಸ್​ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ ಎರಡು ಪ್ರದರ್ಶನದಿಂದ ಮೂರು ಪ್ರದರ್ಶನ ನೀಡಿದೆ. ಅಕ್ಟೋಬರ್ 16ರಂದು ನಿರ್ದೇಶಕ ಹಾಗೂ ನಿರ್ಮಾಪಕ ನಿತ್ಯಾನಂದ ಪ್ರಭು ಅವರು ಚಿತ್ರಮಂದಿರದ ಗೇಟ್ ಬಳಿ ಅವರ ತಂಡದೊಂದಿಗೆ ನಿಂತಿರುವಾಗ, ಸಿನಿಮಾ ನೋಡಿದ ಒಬ್ಬ ಪ್ರೇಕ್ಷಕ ಕಲಾವಿದರನ್ನು ಗಮನಿಸಿ ಅವರ ಅಭಿನಯಕ್ಕೆ ಶುಭಾಶಯ ತಿಳಿಸಿ, ನಂತರ ನಿರ್ದೇಶಕರಿಗೆ ಪ್ರೇಕ್ಷಕ ತನ್ನ ಜೇಬಿನಿಂದ 100 ರೂಪಾಯಿ ತೆಗೆದು ನಿಮ್ಮ ಚಿತ್ರ ‘ಡಬಲ್ ಟಿಕೆಟ್’ ಹಣಕ್ಕೆ ಅರ್ಹ ಎಂದನಂತೆ. ಇದನ್ನು ಕೇಳಿದ ನಿತ್ಯಾನಂದ ಪ್ರಭು ಅವರಿಗೆ ತುಂಬಾ ಖುಷಿಯಾತಂತೆ. ಆತನಿಗೆ ಧನ್ಯವಾದ ತಿಳಿಸಿ ಆತ ನೀಡಲು ಬಂದ 100 ರೂಪಾಯಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ. ಕೆಲವು ಪ್ರೇಕ್ಷಕರು ‘ಯೂ ಟರ್ನ್, ರಂಗಿ ತರಂಗ’ ಸಿನಿಮಾಗಳಿಗೆ ಈ ಸಿನಿಮಾವನ್ನು ಹೊಲಿಸಿದ್ದಾರಂತೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೋರಿದ ಪ್ರೋತ್ಸಾಹಕ್ಕೆ ಸಹ ನಿರ್ದೇಶಕ ನಿತ್ಯಾನಂದ ಪ್ರಭು ಧನ್ಯವಾದ ತಿಳಿಸಿದ್ದಾರೆ. ಕಳೆದ ವಾರ ಮಾಧ್ಯಮದವರಿಗೆ ಒಂದು ಪ್ರೀಮಿಯರ್ ಶೋ ಏರ್ಪಾಡು ಮಾಡಿದ್ದಾಗ ಒಳ್ಳೆಯ ಅಭಿಪ್ರಾಯ ಸಂಗ್ರಹವಾಗಿದಯಂತೆ.

ಈ ಚಿತ್ರದಲ್ಲಿ ಅಧಿತಿ, ಭುವನ್ ಹಾಗೂ ರಾಸಿಕ್ ಕುಮಾರ್ ನಟಿಸಿದ್ದಾರೆ. ಆರ್.ಎಸ್.ನಾರಾಯಣ್ ಸಂಗೀತ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.