ಖ್ಯಾತ ತಮಿಳು ಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ನಟ ಜೆ.ಮಹೇಂದ್ರನ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮೂತ್ರ ಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಮಾರ್ಚ್ 27 ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ರಜನಿ , ಮುಲ್ಲುಂ ಮಲರೂಮ್, ಉಥಿರಿ ಪೂಕ್ಕಲ್, ನಂಜಜೈ ಕಿಲಿಯೆ, ಜಾನಿ ಮತ್ತು ನಂದಲು ಚಿತ್ರಗಳನ್ನ ನಿರ್ದೇಶಿಸಿದ್ದಾರೆ. ಅಲ್ಲದೆ ಇತ್ತೀಚಿನ ಪೆಟ್ಟ, ಸೀತಾಕತಿ, ತೇರಿ ಮತ್ತು ಬೂಮೆರಾಂಗ್ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಸಹ ಅಭಿನಯಿಸಿದ್ದರು.
ರಜನಿಕಾಂತ್ ಅವರಿಗೆ ಸೂಪರ್ಸ್ಟಾರ್ ಹೆಸರು ಬರಲು ಇವರ ಪಾತ್ರವು ಬಹು ಮುಖ್ಯವಾಗಿತ್ತಂತೆ. ಇಂಥ ನಟ, ನಿರ್ದೇಶಕನ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.