ETV Bharat / sitara

ಲವ್ಲಿ ಸ್ಟಾರ್​ ಪ್ರೇಮ್ ‘ಪ್ರೇಮಂ ಪೂಜ್ಯಂ’ಗೆ ಮನಸೋತ ಸ್ಯಾಂಡಲ್​ವುಡ್​ ಮಂದಿ - ಬೃಂದಾ ಆಚಾರ್ಯ

ಲವ್ಲಿ ಸ್ಟಾರ್​ ಪ್ರೇಮ್ (Lovely Star Prem​) ಅಭಿನಯದ ‘ಪ್ರೇಮಂ ಪೂಜ್ಯಂ’ (Premam Poojyam) ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಇಂದು (ನ.12) ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್​ವುಡ್ ನಟರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ..

ಪ್ರೇಮಂ ಪೂಜ್ಯಂ
ಪ್ರೇಮಂ ಪೂಜ್ಯಂ
author img

By

Published : Nov 12, 2021, 2:34 PM IST

ಲವ್ಲಿ ಸ್ಟಾರ್​ ಪ್ರೇಮ್ (Lovely Star Prem​), ಬೃಂದಾ ಆಚಾರ್ಯ (Brinda Acharya), ಐಂದ್ರಿತಾ ರೇ ಮುಖ್ಯಭೂಮಿಕೆಯಲ್ಲಿ ಕಾಣಿಸಿರುವ ‘ಪ್ರೇಮಂ ಪೂಜ್ಯಂ’ (Premam Poojyam) ಚಿತ್ರ ಬಿಡುಗಡೆಯಾಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.

ಇಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಪ್ರೇಮಂ ಪೂಜ್ಯಂ' (Premam Poojyam) ಸಿನಿಮಾ ಬಿಡುಗಡೆ ಆಗಿದೆ. ನಟ ಶರಣ್, ಚಂದ್ರಮುಖಿ ಪ್ರಾಣಸಖಿ ಭಾವನಾ, ನಿರ್ದೇಶಕ ತರುಣ್ ಸುಧೀರ್, ನಟಿ ಕಾರುಣ್ಯಾ ರಾಮ್ , ಹಾಸ್ಯ ಕಲಾವಿದರಾದ ಶಿವರಾಜ್ ಕೆ. ಆರ್ ಪೇಟೆ, ಜಿ ಗೋವಿಂದರಾಜು, ಧರ್ಮಣ್ಣ, ನಟಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ, ನಿರ್ದೇಶಕ ಮಹೇಶ್ ಕುಮಾರ್ ಸೇರಿ ಸಾಕಷ್ಟು ಸಿನಿಮಾ ತಾರೆಯರು ಈ ಸಿನಿಮಾವನ್ನು ನೋಡಿ ಮೆಚ್ಚಿದ್ದಾರೆ.

ಸಿನಿಮಾ ನೋಡಿದ ಬಳಿಕ ಅಭಿಪ್ರಾಯ ಹಂಚಿಕೊಂಡ ನಟ‌ ಶರಣ್ ಹಾಗೂ ನಿರ್ದೇಶಕ ತರುಣ್ ಸುಧೀರ್, ಗೆಳೆಯ ಪ್ರೇಮ್ ಮತ್ತು ವೈದ್ಯನ ಪಾತ್ರದ ಮೇಕ್ ಓವರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗಕ್ಕೆ ಇಂತಹ ಸಿನಿಮಾಗಳು ಬೇಕು.

ಇದು ಪ್ರೇಮ್ ಅವರ 25ನೇ ಚಿತ್ರವಾಗಿದೆ. ಮುದ್ದಾದ ಲವ್ ಸ್ಟೋರಿ ಜೊತೆಗೆ ಟೆಕ್ನಿಕಲ್ ಸಿನಿಮಾ. ಲವ್ಲಿ ಸ್ಟಾರ್​ ಪ್ರೇಮ್ (Lovely Star Prem​) ಜೊತೆಗೆ ಕ್ಯಾಮೆರಾಮ್ಯಾನ್ ನವೀನ್ ಕುಮಾರ್ ಕೂಡ ಈ ಚಿತ್ರದ ಹೀರೊ ಅಂತಾ ಕೊಂಡಾಡಿದರು.

ಪ್ರೇಮಂ ಪೂಜ್ಯಂ ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ಸ್ಯಾಂಡಲ್​ವುಡ್​ ಮಂದಿ

ಬೃಂದಾ ಆಚಾರ್ಯ ಮಾತ್ರವಲ್ಲದೆ ಐಂದ್ರಿತಾ ರೇ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪ್ರೇಮ್ ಸ್ನೇಹಿತನ ಪಾತ್ರದಲ್ಲಿ ಮಾಸ್ಟರ್ ಆನಂದ್ ಮಿಂಚಿದ್ದಾರೆ.

ಜೊತೆಗೆ ಸಾಧುಕೋಕಿಲ, ಅವಿನಾಶ್, ಮಾಳವಿಕಾ, ನಾಗಭರಣ ಸೇರಿದಂತೆ ಅನೇಕ ತಾರೆಯರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಕ್ಯಾಮೆರಾಮ್ಯಾನ್ ಆಗಿ ನವೀನ್ ಕುಮಾರ್ ಕೆಲಸ ಮಾಡಿದ್ದು, ಸಿನಿಮಾದಲ್ಲಿ ಬೆಂಗಳೂರು ಹಾಗೂ ವಿಯೇಟ್ನಾಂ ಅನ್ನು ಬಹಳ ಅದ್ಭುತವಾಗಿ ತೋರಿಸಲಾಗಿದೆ.

ವೃತ್ತಿಯಲ್ಲಿ ಡಾಕ್ಟರ್ ಆಗಿರುವ ರಾಘವೇಂದ್ರ ಬಿ.ಎಸ್. ಈ ಸಿನಿಮಾವನ್ನು ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ, ಕಥೆ, ಚಿತ್ರಕಥೆ ಬರೆದು ಚೊಚ್ಚಲ ಚಿತ್ರದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ‌‌.

ಕೆದಂಬಾಡಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ 'ಪ್ರೇಮ ಪೂಜ್ಯಂ' ಚಿತ್ರಕ್ಕೆ ಡಾ. ರಕ್ಷಿತ್‌ ಕೆಡಂಬಾಡಿ, ಡಾ. ರಾಜಕುಮಾರ್‌ ಜಾನಕಿರಾಮನ್‌, ಮನೋಜ್‌ ಕೃಷ್ಣನ್‌ ಅದ್ಧೂರಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.