ನಿರ್ಮಾಪಕ ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಅವರ ಬ್ಯಾನರ್ನಡಿ ಜಂಟಿಯಾಗಿ ನಿರ್ಮಿಸುತ್ತಿರುವ 'ಗೀತಾ'ಚಿತ್ರಕ್ಕೆ ಮನಾಲಿ, ಕೋಲ್ಕತ್ತಾ, ಮೈಸೂರು, ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಗಣಿ ಜತೆ ಸಾನ್ವಿ, ಪಾರ್ವತಿ ಅರುಣ್, ಪ್ರಯಾಗ ಮಾರ್ಟಿನ್, ಸುಧಾರಾಣಿ, ದೇವರಾಜ್, ಅಚ್ಯುತ್, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ.
'ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರದ ಸಹ ನಿರ್ದೇಶಕ, ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನುಪ್ ರೂಬೆನ್ಸ್ ಸಂಗೀತ, ಶ್ರೀಶ ಕುಂದ್ರಳ್ಳಿ ಅವರ ಛಾಯಾಗ್ರಹಣವಿದೆ.
ಇನ್ನು, 1981ರಲ್ಲಿ ಶಂಕರ್ ನಾಗ್ ಹಾಗೂ ಪದ್ಮಾವತಿ ರಾವ್ ಅಭಿನಯದ ಗೀತಾ ಸಿನಿಮಾ ಬಂದಿತ್ತು. ಇದೇ ಟೈಟಲ್ನ್ನು ಗಣೇಶ್ ನಟನೆಯ ಚಿತ್ರಕ್ಕೆ ಮರುಬಳಕೆ ಮಾಡಿಕೊಳ್ಳಲಾಗಿದೆ.