ETV Bharat / sitara

ರಾಣಾ ದಗ್ಗುಬಾಟಿ ಅಭಿನಯದ 'ಮಿಷನ್ ಫ್ರಂಟ್​ ಲೈನ್' ಡಿಸ್ಕವರಿ ಪ್ಲಸ್​ನಲ್ಲಿ ಜ.21 ರಿಂದ ಪ್ರಸಾರ

author img

By

Published : Jan 18, 2021, 7:09 PM IST

ರಾಣಾ ದಗ್ಗುಬಾಟಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಶೋ 'ಮಿಷನ್ ಫ್ರಂಟ್ ಲೈನ್' ಡಿಸ್ಕವರಿ ಪ್ಲಸ್ ನಲ್ಲಿ ಜನವರಿ 21 ರಿಂದ ಪ್ರಸಾರವಾಗಲಿದೆ.

Rana Daggubati
ರಾಣಾ ದಗ್ಗುಬಾಟಿ

ಬೆಂಗಳೂರು: ಭಾರತವು 72ನೇ ಗಣರಾಜ್ಯೋತ್ಸವವನ್ನು ಆಚರಿಸಲು ಸಜ್ಜಾಗುತ್ತಿದ್ದು, ಭಾರತದ ಮೊದಲ ಮತ್ತು ಪ್ರಮುಖ ನೈಜ-ಜೀವನ ಮನರಂಜನೆ ಮತ್ತು ಕಲಿಕೆಯ ಅಪ್ಲಿಕೇಶನ್ ಆದ ಡಿಸ್ಕವರಿ ಪ್ಲಸ್ 2021ರ ಜನವರಿ 21 ರಂದು 'ಮಿಷನ್ ಫ್ರಂಟ್​ಲೈನ್' ಎಂಬ ಬಹು ನಿರೀಕ್ಷಿತ ಶೋ ಆರಂಭಿಸಲು ಸಿದ್ಧವಾಗಿದೆ.

ಹಲವು ಪ್ರಶಸ್ತಿಗಳಿಗೆ ಭಾಜನರಾದ ನಟ ಮತ್ತು ನಿರ್ಮಾಪಕ ರಾಣಾ ದಗ್ಗುಬಾಟಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿರುವ 'ಮಿಷನ್ ಫ್ರಂಟ್​ಲೈನ್​' ಶೋ ದೇಶವನ್ನು ಸುರಕ್ಷಿತವಾಗಿಡಲು ಗಡಿಯಲ್ಲಿ ಹೋರಾಡುವ ಗಡಿ ಭದ್ರತಾ ಪಡೆ, ನಮ್ಮ ಕದನ ವೀರರ ಜೀವನ ಸಾಧನೆಯನ್ನು ತೋರಿಸಲಿದೆ.

Rana Daggubati
ರಾಣಾ ದಗ್ಗುಬಾಟಿ

ಈ ವಿಶೇಷ ಸಂಚಿಕೆಯಲ್ಲಿ, ರಾಣಾ ದಗ್ಗುಬಾಟಿ ಅವರು ಬಿಎಸ್ಎಫ್ ಜವಾನರ ಕಷ್ಟದ ಜೀವನಕ್ಕೆ ನೇರ ಸಾಕ್ಷಿಯಾಗಲಿದ್ದಾರೆ. ಈ ಷೋಗಾಗಿ ನಟ ದಗ್ಗುಬಾಟಿ ಜೈಸಲ್ಮೇರ್‌ನ ಮುರಾರ್ ಪೋಸ್ಟ್​ನಲ್ಲಿ ಗಡಿ ಯೋಧರೊಂದಿಗೆ ತಂಗಿದ್ದಾರೆ. ಅಲ್ಲದೇ ಗಡಿಭಾಗದಲ್ಲಿ ಸೈನಿಕರು ಎದುರಿಸುವ ಕಷ್ಟಗಳನ್ನು ಅವರೊಂದಿಗೆ ಇದ್ದು ಅನುಭವ ಪಡೆದುಕೊಂಡಿದ್ದಾರೆ.

Rana Daggubati
ರಾಣಾ ದಗ್ಗುಬಾಟಿ

"ಜೈಸಲ್ಮೇರ್‌ನ ನನ್ನ ಅನುಭವಗಳ ಪ್ರಕಾರ, 'ಮಿಷನ್ ಫ್ರಂಟ್‌ಲೈನ್' ಆ ಯೋಧರ ಛಲ ಮತ್ತು ಚೈತನ್ಯಕ್ಕೆ ಗೌರವ ನೀಡುವ ಕಾರ್ಯಕ್ರಮವಾಗಿದ್ದು, ಬಹುತೇಕ ಸಂದರ್ಭದಲ್ಲಿ ಈ ಯೋಧರ ಸೇವೆಯನ್ನು ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಈ ಶೋ ಮೂಲಕ ಸ್ಫೂರ್ತಿಯನ್ನು ಪಡೆಯುವುದು ಮತ್ತು ರಕ್ಷಣಾ ಪಡೆಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಇದರ ಉದ್ದೇಶವಾಗಿದೆ'' ಎಂದು ಜೈಸಲ್ಮೇರ್ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಡಿಸ್ಕವರಿ ಪ್ಲಸ್ ಕುರಿತು: ‘ಡಿಸ್ಕವರಿ +’ ಎನ್ನುವುದು ಅತ್ಯಾಕರ್ಷಕ ಹೊಸ ಡಿ 2 ಸಿ ಸ್ಟ್ರೀಮಿಂಗ್ ಅಪ್ಲಿಕೇಶನ್‌. ಇದು ಪ್ರೀಮಿಯಂ ನೈಜ-ಜೀವನ ಮನರಂಜನೆಯನ್ನು ನೀಡುವ ವಿಭಿನ್ನ ಅಪ್ಲಿಕೇಶನ್ ಆಗಿದೆ. ವಾರ್ಷಿಕವಾಗಿ 299 ರೂಪಾಯಿಗಳ ಪರಿಚಯಾತ್ಮಕ ಕೊಡುಗೆಯೊಂದಿಗೆ ಸ್ಪರ್ಧಾತ್ಮಕವಾಗಿ ಬೆಲೆಯಿರಿಸಲಾಗಿರುವ ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಭಾರತಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ನಿರ್ದಿಷ್ಟವಾದ ಭಂಡಾರವನ್ನು ಸಂಗ್ರಹಿಸಲಾಗಿದೆ.

ಡಿಸ್ಕವರಿ ಪ್ಲಸ್ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬಂಗಾಳಿ ಮತ್ತು ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ವಿಜ್ಞಾನ, ಸಾಹಸ, ಆಹಾರ ಮತ್ತು ಜೀವನಶೈಲಿ ಸೇರಿದಂತೆ 40ಕ್ಕೂ ಅಧಿಕ ಪ್ರಕಾರಗಳಲ್ಲಿ ಸಾವಿರಾರು ಗಂಟೆಗಳ ವಿಶೇಷ ವಿಷಯವನ್ನು ಪ್ರೇಕ್ಷಕರಿಗೆ ನೀಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.