ETV Bharat / sitara

ಮತ್ತೆ ಸುದ್ದಿಯಲ್ಲಿರುವ 'ಬ್ರಹ್ಮಗಂಟು' ಖ್ಯಾತಿಯ ಗುಂಡಮ್ಮ...! - Gundamma in Gurthunda Seethakalam

ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ 'ಲವ್​ ಮಾಕ್​​ಟೇಲ್​​​' ತೆಲುಗಿನಲ್ಲಿ ರೀಮೇಕ್ ಆಗುತ್ತಿದ್ದು ಚಿತ್ರೀಕರಣ ಭರದಿಂದ ಸಾಗಿದೆ. ತೆಲುಗಿನ 'ಗುರ್ತುಂದಾ ಶೀತಕಾಲಂ' ಚಿತ್ರದಲ್ಲಿ ಕನ್ನಡ ನಟಿ ಗೀತಾ ಭಾರತಿ ಭಟ್ ನಟಿಸಿದ್ದಾರೆ. ತಮನ್ನಾ ಜೊತೆ ನಟಿಸುವ ಅವಕಾಶ ದೊರೆತಿದ್ದಕ್ಕೆ ಗೀತಾ ಸಂತೋಷ ವ್ಯಕ್ತಪಡಿಸಿದ್ದಾರೆ.

Geeta Bharati bha
ಗೀತಾಭಾರತಿ ಭಟ್
author img

By

Published : Feb 16, 2021, 1:15 PM IST

ಗೀತಾಭಾರತಿ ಭಟ್ ಕಿರುತೆರೆ ವೀಕ್ಷಕರಿಗೆ ಬಹಳ ಪರಿಚಿತ ಹೆಸರು. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿ ಗೀತಾ ಆಗಿ ಮೋಡಿ ಮಾಡುತ್ತಿರುವ ಗೀತಾಭಾರತಿ ಭಟ್ ಬಿಗ್​​​ಬಾಸ್​ ಸೀಸನ್ 8 ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇದರ ಜೊತೆಗೆ ವ್ಯಾಲೆಂಟೈನ್ಸ್ ಡೇ ದಿನ ಬಿಡುಗಡೆಯಾದ ಸ್ವೀಟೂ ಮ್ಯೂಸಿಕ್ ವಿಡಿಯೋದಲ್ಲಿ ಗೀತಭಾರತಿ ಭಟ್ ನಟಿಸಿದ್ದರು. ಇದೀಗ ಅವರು ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.

Gurthunda Seethakalam
'ಗುರ್ತುಂದಾ ಶೀತಕಾಲಂ' ಚಿತ್ರದಲ್ಲಿ ತಮನ್ನಾ, ಸತ್ಯದೇವ್

ಇಷ್ಟು ದಿನಗಳ ಕಾಲ ತಮ್ಮ ನಟನೆಯಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ಸೆಳೆದಿದ್ದ ಗೀತಾಭಾರತಿ ಭಟ್ ಇದೀಗ ತೆಲುಗು ಪ್ರೇಕ್ಷಕರನ್ನು ಮೋಡಿ ಮಾಡಲು ಹೊರಟಿದ್ದಾರೆ. ಗೀತಾಭಾರತಿ ಭಟ್ ಮೊದಲ ಬಾರಿಗೆ ಟಾಲಿವುಡ್​​​​ಗೆ ಕಾಲಿರಿಸಿದ್ದಾರೆ. ಕೃಷ್ಣ ನಿರ್ದೇಶಿಸಿ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿರುವ 'ಲವ್ ಮಾಕ್​ಟೇಲ್' ತೆಲುಗಿಗೆ ರೀಮೇಕ್ ಆಗುತ್ತಿರುವುದು ತಿಳಿದ ವಿಚಾರ. ತಮನ್ನಾ ಹಾಗೂ ಸತ್ಯದೇವ್ ಅಭಿನಯದ ಈ ಸಿನಿಮಾಗೆ 'ಗುರ್ತುಂದಾ ಶೀತಕಾಲಂ' ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ತೆಲುಗಿನಲ್ಲಿ ನಾಗಶೇಖರ್ ನಿರ್ದೇಶಿಸುತ್ತಿದ್ದು ಕನ್ನಡದಲ್ಲಿ ಗೀತಾ ನಟಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಕೂಡಾ ಅವರೇ ನಿಭಾಯಿಸಿದ್ದಾರೆ.

Geeta Bharati bhat
ಗೀತಾ ಭಾರತಿ ಭಟ್

ಇದನ್ನೂ ಓದಿ: ಬುರ್ಜ್ ಖಲೀಫಾ ಅಲ್ಲ, ಸ್ಪೇಸ್​​​​​​​ನಲ್ಲಿ ರಿಲೀಸ್ ಆಯ್ತು 'ಹಾಸ್ಟೆಲ್ ಹುಡುಗರು' ಟೀಸರ್​​​​​​​...!

ತೆಲುಗಿನಲ್ಲಿ ತಾವು ನಟಿಸಿರುವ ವಿಚಾರದ ಬಗ್ಗೆ ಮಾತನಾಡಿರುವ ಗೀತಾ, "ತಮನ್ನಾ ಜೊತೆ ನಟಿಸಿರುವುದು ನಿಜಕ್ಕೂ ನನಗೆ ಖುಷಿ ತಂದಿದೆ. ಆಕೆ ಎಂದಿಗೂ ಸ್ಟಾರ್​​​ನಂತೆ ನಡೆದುಕೊಳ್ಳಲಿಲ್ಲ. ನನಗೆ ತೆಲುಗು ಮಾತನಾಡಲು ಬರುವುದಿಲ್ಲ. ಈ ವಿಚಾರ ತಿಳಿದ ತಮನ್ನಾ ನನಗೆ ಸಹಾಯ ಮಾಡಿದರು. ತಮನ್ನಾ ಜೊತೆ ಇಡೀ ಚಿತ್ರತಂಡವೇ ನನಗೆ ಬಹಳ ಸಪೋರ್ಟ್ ಮಾಡಿದೆ. ನನ್ನ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಈ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿದ್ದು ನನಗೆ ಬಹಳ ಸಂತೋಷವಾಗಿದೆ" ಎಂದು ಗೀತಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.