ಬಾಲಿವುಡ್ನಲ್ಲಿ ಗಾಸಿಪ್ ಸುದ್ದಿಗಳಿಗೇನು ಕೊರತೆಯೇ ಇಲ್ಲ ಬಿಡಿ. ಈ ಹಿಂದೆ ಗೌಹರ್ ಖಾನ್ ಮತ್ತು ಜೈದ್ ದರ್ಬಾರ್ ನಡುವೆ ಪ್ರೇಮವಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ನಂತರ ಪ್ರತಿಕ್ರಿಯಿಸಿದ್ದ ಗೌಹರ್ ಖಾನ್ ನಮ್ಮ ನಡುವೆ ಆ ರೀತಿಯ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು.
ಇದೀಗ ಮತ್ತೆ ಇವರ ಬಗ್ಗೆ ಮಾತುಗಳು ಶುರುವಾಗಿವೆ. ಇದಕ್ಕೆ ಕಾರಣ ಜೈದ್ ದರ್ಬಾರ್ ಹುಟ್ಟುಹಬ್ಬಕ್ಕೆ ಗೌಹರ್ ಖಾನ್ ವಿಶ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಹ್ಯಾಪಿ ಬರ್ತ್ ಡೇ. ಜೈದ್ ದಾರ್ಬಾರ್ ನಿಮಗೆ ಎಲ್ಲ ಸಂತೋಷ, ಆರೋಗ್ಯ, ಸಂಪತ್ತು ಮತ್ತು ಯಶಸ್ಸು ಸಿಗಲಿ. ಮುಂದೆ ನೀವು ಅದ್ಭುತ ವರ್ಷವನ್ನು ಹೊಂದಿದ್ದೀರಿ. ನೀವು ನನ್ನನ್ನು ಗೋಳಾಡಿಸಿದಾಗ ನಿಮ್ಮ ಕತ್ತು ಹಿಸುಕುವ ಹಾಗೆ ಅನ್ನಿಸುತ್ತದೆ ಎಂದು ತಮಾಷೆಯಾಗಿ ಬರೆದು ಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ನು ಗೌಹರ್ ಖಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಜೈದ್ ದರ್ಬಾರ್ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ಫೋಸ್ಟ್ ಮಾಡಿದ್ದಾರೆ. ಜೈದ್ ದರ್ಬಾರ್ ಬಾಲಿವುಡ್ನ ಸಂಯೋಜಕ ಇಸ್ಮಾಯಿಲ್ ದರ್ಬಾರ್ ಅವರ ಮಗ. ಇವರೂ ನೃತ್ಯ ಸಂಯೋಜನೆಯಲ್ಲಿ ಹೆಸರು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಗೌಹರ್ ಮತ್ತು ಜೈದ್ ನವೆಂಬರ್‌ನಲ್ಲಿ ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದ್ರೆ ಗೌಹರ್ ಖಾನ್ ಈ ಸುದ್ದಿ ಸುಳ್ಳು ಎಂದು ಖಾಸಗಿ ವಾಹಿನಿಯ ಸಮದರ್ಶನದಲ್ಲಿ ಹೇಳಿದ್ದರು.