ETV Bharat / sitara

ಹೌರಾಬ್ರಿಡ್ಜ್​​ ಚಿತ್ರದ ಟೈಟಲ್​ ಚೇಂಜ್​​​... ದೇವಕಿಯಾದಳು ಪ್ರಿಯಾಂಕಾ ಉಪೇಂದ್ರ - ಬುದ್ಧಿವಂತ

ನಟಿ ಪ್ರಿಯಾಂಕಾ ಉಪೇಂದ್ರ ಮಮ್ಮಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದರು. ಇದೇ ಚಿತ್ರದ ನಿರ್ದೇಶಕ ಲೋಹಿತ್ ಜತೆ ಹೌರಾ ಬ್ರಿಡ್ಜ್​ ಚಿತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಟೈಟಲ್ ದೇವಕಿಯಾಗಿ ಬದಲಾಗಿದೆ.

ಹೌರಾಬ್ರಿಡ್ಜ್​ ಟೈಟಲ್ ಚೇಂಜ್​
author img

By

Published : Mar 12, 2019, 11:20 AM IST

Updated : Mar 12, 2019, 11:29 AM IST

ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯ ಹೌರಾ ಬ್ರಿಡ್ಜ್​ ಕಳೆದ ಒಂದೂವರೆ ವರ್ಷದ ಹಿಂದೆಯೇ ಸೆಟ್ಟೇರಿತ್ತು. ಕೋಲ್ಕತ್ತಾ ಸೇರಿದಂತೆ ಹಲವೆಡೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಟೈಟಲ್ ಈಗ ಬದಲಾಗಿದೆ. ಈ ಸಿನಿಮಾಗೆ 'ದೇವಕಿ' ಎಂದು ಮರುನಾಮಕರಣ ಮಾಡಲಾಗಿದೆ.

Upendra 1
ಹೌರಾಬ್ರಿಡ್ಜ್​ ಟೈಟಲ್ ಚೇಂಜ್​

ಈ ದೇವಕಿ ಸಿನಿಮಾದ ಮತ್ತೊಂದು ಆಕರ್ಷಣೆ ಅಂದ್ರೆ ಪ್ರಿಯಾಂಕಾ ಅವರ ಪುತ್ರಿ ಐಶ್ವರ್ಯ ಈ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು. ಅಮ್ಮ ಮಗಳು ಈ ಚಿತ್ರದಲ್ಲಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

Upendra 1
ಹೌರಾಬ್ರಿಡ್ಜ್​ ಟೈಟಲ್ ಚೇಂಜ್​

ಇನ್ನು 'ಮಮ್ಮಿ ಸೇವ್​ ಮೀ' ಚಿತ್ರದ ಬಳಿಕ ನಿರ್ದೇಶಕ ಲೋಹಿತ್​ ಜತೆ ಪ್ರಿಯಾಂಕಾ ಈ ಚಿತ್ರದಲ್ಲಿ ಒಂದಾಗಿದ್ದಾರೆ. ನುರಿತ ಛಾಯಾಗ್ರಾಹಕ ಹೆಚ್​​​.ಸಿ. ವೇಣು ಮತ್ತೆ ಲೋಹಿತ್ ಅವರ ಜೊತೆಯಾಗಿದ್ದಾರೆ. ಕೋಲ್ಕತ್ತಾದ ಮನಮೋಹಕ ದೃಶ್ಯಗಳನ್ನು ಸೆರೆ ಹಿಡಿದ್ದಾರೆ.

ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಒದಗಿಸಿದ್ದಾರೆ. ಕಿಶೋರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಕನ್ನಡ, ತಮಿಳು ಭಾಷೆಗಳಲ್ಲಿ ತಯಾರಾಗುತ್ತಿದೆ. ರವಿಶ್ ಮತ್ತು ಅಕ್ಷಯ್ ಬಂಡವಾಳ ಹಾಕಿರುವ ಈ ಚಿತ್ರವನ್ನು ಬೆಂಗಾಲಿ, ತೆಲುಗು ಹಾಗೂ ಇನ್ನಿತರ ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

---------- Forwarded message ---------
From: pravi akki <praviakki@gmail.com>
Date: Tue, Mar 12, 2019, 8:38 AM
Subject: Fwd: PRIYANKA UPENDRA AND DAUGHTER AISHWARAYA IN ONE FILM
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Tue, Mar 12, 2019, 7:34 AM
Subject: PRIYANKA UPENDRA AND DAUGHTER AISHWARAYA IN ONE FILM
To: pravi akki <praviakki@gmail.com>, <praveen.akki@etvbharath.com>, EenaduIndia kannada <kannadadesk@gmail.com>

ಪ್ರಿಯಾಂಕ ಉಪೇಂದ್ರ ದೇವಕಿ – ಉಪೇಂದ್ರ ಮಗಳು ಐಶ್ವರ್ಯ ಅಮ್ಮನ ಜೊತೆ

ಗಮನಾರ್ಹವಾದ ಪಾತ್ರಗಳನ್ನೇ ಸೆಕಂಡ್ ಇನ್ನಿಂಗ್ಸ್ ಅಲ್ಲಿ ಪ್ರಿಯಾಂಕ ಉಪೇಂದ್ರ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮಮ್ಮಿ ಸಿನಿಮಾ ಇಂದ ಅವರ ಆಯ್ಕೆ ಬಗ್ಗೆ ಹೆಚ್ಚು ಗಮನ ಹರಿಸಲು ಶುರು ಆಯಿತು ಅಂತಲೇ ಹೇಳಬಹುದು. ನಾಯಕಿ ಇಂದ ಪ್ರಮುಖ ಪಾತ್ರದ ಚಿತ್ರಗಳಿಗೆ ಕನ್ನಡಲ್ಲಿ ತೊಡಗಿಕೊಂಡಿರುವ ಪ್ರಿಯಾಂಕ ಉಪೇಂದ್ರ ಈಗ ಮತ್ತೆ ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ಜೊತೆ ಚಿತ್ರೀಕರಣ ಬಹುತೇಕ ಅವರ ತಾಯ್ನಾಡಾದ ಕೊಲ್ಕತ್ತದಲ್ಲಿಯೇ ಹೌರಾ ಬ್ರಿಡ್ಜ್ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿತ್ತು. ಚಿತ್ರಕ್ಕೆ ಹೌರಾ ಬ್ರಿಡ್ಜ್ ಅಂತಲೂ ಆರಂಭದಲ್ಲಿ ನಾಮಕರಣ ಆಗಿತ್ತು.

ಈಗ ಹೊರ ಬಂದಿರುವ ಸುದ್ದಿ ಏನಪ್ಪಾ ಅಂದರೆ ಪ್ರಿಯಾಂಕ ಉಪೇಂದ್ರ ಅವರನ್ನು ಎರಡನೇ ಬಾರಿ ನಿರ್ದೇಶನ ಮಾಡಿರುವ ಲೋಹಿತ್ ಚಿತ್ರಕ್ಕೆ ದೇವಕಿ ಎಂದು ಮರು ನಾಮಕರಣ ಮಾಡಿದ್ದಾರೆ.

ಈ ದೇವಕಿ ಸಿನಿಮಾದ ಮತ್ತೊಂದು ಆಕರ್ಷಣೆ ಅಂದರೆ ಉಪೇಂದ್ರ ಹಾಗೂ ಪ್ರಿಯಾಂಕ ಅವರ ಪುತ್ರಿ ಐಶ್ವರ್ಯ ಈ ಚಿತ್ರ ರಂಗಕ್ಕೆ ಪದಾರ್ಪಣೆ ಆಗಿದೆ. ನುರಿತ ಛಾಯಾಗ್ರಾಹಕ ಎಚ್ ಸಿ ವೇಣು ಮತ್ತೆ ಲೋಹಿತ್ ಅವರ ಜೊತೆಯಾಗಿದ್ದಾರೆ. ಕೊಲ್ಕತ್ತದ ಮನಮೋಹಕ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ನೋಬಿನ್ ಪಾಲ್ ಸಂಗೀತ ಒದಗಿಸಿದ್ದಾರೆ. ಕಿಶೋರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನೂ ಕನ್ನಡ, ತಮಿಳು ಭಾಷೆಗಳಲ್ಲಿ ತಯಾರಿ ಆಗುತ್ತಿದೆ. ರವಿಶ್ ಮತ್ತು ಅಕ್ಷಯ್ ಬಂಡವಾಳ ಹಾಕಿರುವ ಈ ಚಿತ್ರ ಬೆಂಗಾಲಿ, ತೆಲುಗು ಹಾಗೂ ಇನ್ನಿತರ ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. 

Last Updated : Mar 12, 2019, 11:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.