ಹೃದಯಾಘಾತದಿಂದ ನಿನ್ನೆ ನಿಧನರಾದ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆಯನ್ನು ಇಂದು ಕನಕಪುರದ ನೆಲಗುಳಿ ಬಳಿ ಇರುವ ಧ್ರುವ ಸರ್ಜಾ ಫಾರ್ಮ್ ಹೌಸ್ನಲ್ಲಿ ನೆರವೇರಿಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.
ನೆಲಗುಳಿ ಫಾರ್ಮ್ ಹೌಸ್ ಚಿರುಗೆ ನೆಚ್ಚಿನ ಸ್ಥಳವಾಗಿತ್ತು. ಶೂಟಿಂಗ್ ಇಲ್ಲದ ವೇಳೆ ತಮ್ಮನ ಫಾರ್ಮ್ ಹೌಸ್ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಹಾಗಾಗಿ ಅಣ್ಣನ ನೆಚ್ಚಿನ ಜಾಗದಲ್ಲೇ ಅಂತ್ಯಕ್ರಿಯೆ ಮಾಡಲು ಸಹೋದರ ಧ್ರುವ ಸರ್ಜಾ ತೀರ್ಮಾನಿಸಿದ್ದಾರೆ ಎಂದು ಸರ್ಜಾ ಕುಟುಂಬದ ಆಪ್ತರಾದ ಶಿವಾರ್ಜುನ್ ತಿಳಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರವನ್ನು ಕೆ.ಆರ್. ರಸ್ತೆಯ ನಿವಾಸದಲ್ಲಿ ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.