ಬೆಂಗಳೂರು: ಇನ್ಮುಂದೆ ಉಪ್ಪಿ ಫೌಂಡೇಶನ್‌ಗೆ ಹಣ ಮತ್ತು ಯಾವುದೇ ಕೊಡುಗೆಯನ್ನು ಸ್ವೀಕರಿಸುವುದಿಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
![ಇನ್ಮುಂದೆ ಉಪ್ಪಿ ಫೌಂಡೇಶನ್‌ಗೆ ಫಂಡ್ ಸ್ವೀಕರಿಸುವುದಿಲ್ಲ ಎಂದ ಉಪೇಂದ್ರ](https://etvbharatimages.akamaized.net/etvbharat/prod-images/12017600_thum.jpg)
ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಚಿತ್ರರಂಗದ ನಟ - ನಟಿಯರು ಮಾತ್ರ ಅಲ್ಲ. ಸಾರ್ವಜನಿಕರೂ ತಮ್ಮ ಕೈಲಾದ ಹಣವನ್ನು ಉಪ್ಪಿ ಫೌಂಡೇಶನ್‌ಗೆ ದೇಣಿಗೆ ನೀಡಿದ್ದರು. ಎಷ್ಟೋ ಜನ ಅಕ್ಕಿ, ಬೇಳೆ ಸೇರಿದಂತೆ ದಿನಸಿಯನ್ನೂ ಉಪ್ಪಿ ಫೌಂಡೇಶನ್‌ಗೆ ಕೊಡುಗೆಯಾಗಿ ನೀಡಿದ್ದರು. ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಉಪೇಂದ್ರ ದಿನಸಿ ಕಿಟ್‌ಗಳನ್ನು ಕೊಂಡುಕೊಂಡರು. ಜೊತೆಗೆ ಅದೇ ಹಣದಲ್ಲಿ ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿಸಿದ್ದರು.
ಇಲ್ಲಿಯವರೆಗೂ ನಾವು ಯಾರನ್ನೂ ಕೇಳದಿದ್ದರೂ ತುಂಬಾ ಹೃದಯವಂತರು ನಮ್ಮ ಮೂಲಕ ವಿತರಣೆಯಾಗಲೆಂದು ದಿನಸಿ, ಹಣ್ಣು - ತರಕಾರಿಗಳು ಮುಂತಾದವುಗಳನ್ನು ಕೊಟ್ಟಿದ್ದಾರೆ. ನಮ್ಮ ಉಪ್ಪಿ ಫೌಂಡೇಶನ್ ಚಾರಿಟಬಲ್ ಟ್ರಸ್ಟ್‌ಗೆ ಧನ ಸಹಾಯ ಮಾಡಿದ್ದಾರೆ. ಅವುಗಳೆಲ್ಲವನ್ನು ಸೂಕ್ತವಾಗಿ ಬೇರೆ ಬೇರೆ ಕಡೆ ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗಿದೆ. ಸಹೃದಯತೆ ಮೆರೆದಂತಹ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು ಎಂದಿದ್ದಾರೆ.
ಇನ್ನು ಮುಂದೆ ತಾವುಗಳು ಯಾರಿಗಾದರೂ ಸಹಾಯ ಮಾಡಬೇಕು ಎಂದರೆ ನಿಮ್ಮ ಸುತ್ತಮುತ್ತ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ನೇರವಾಗಿ ನೀವೇ ಸಹಾಯ ಮಾಡಿ. ಇಲ್ಲಿಯವರೆಗೂ ಉಪ್ಪಿ ಫೌಂಡೇಶನ್‌ಗೆ ಉಪೇಂದ್ರ ಅವರ ಹಣ, ನಿಮ್ಮೆಲ್ಲರಿಂದ ಬಂದಂತಹ ಹಣ ಅದರ ಖರ್ಚು ಮತ್ತು ಎಲ್ಲ ಅಕೌಂಟ್ಸ್ ಸ್ಟೇಟ್ಮೆಂಟ್ಸ್ ಮಾಹಿತಿಗಳನ್ನು ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ ಎಂದು ಉಪ್ಪಿ ಫೌಂಡೇಶನ್ ಪರವಾಗಿ ಉಪೇಂದ್ರ ಪೋಸ್ಟ್ ಮಾಡಿದ್ದಾರೆ.
ವ್ಯಾಕ್ಸಿನ್ ಮೊದಲ ಡೋಸ್ ಪಡೆದ ರಾಷ್ಟ್ರಗಳಲ್ಲಿ ಅಮೆರಿಕಾ ಹಿಂದಿಕ್ಕಿದ ಭಾರತ!