ETV Bharat / sitara

ರಾಜ್ಯೋತ್ಸವ ನಿಮಿತ್ತ ಇಂದು ತೆರೆಗೆ ಬಂದಿವೆ 4 ಕನ್ನಡ ಸಿನಿಮಾಗಳು - ನವೆಂಬರ್ 1 ರಂದು ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ

ಇಂದು ರಾಜ್ಯಾದ್ಯಂತ ಜನತೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು 4 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. 'ರಂಗನಾಯಕಿ' , ದಂಡುಪಾಳ್ಯಂ, ಸಿ++ ಹಾಗೂ 'ಸ್ಟಾರ್ ಕನ್ನಡಿಗ' ಸೇರಿ ನಾಲ್ಕು ಸಿನಿಮಾಗಳು ಇಂದು ತೆರೆ ಕಾಣುತ್ತಿವೆ.

ರಂಗನಾಯಕಿ
author img

By

Published : Nov 1, 2019, 1:04 PM IST

ರಂಗನಾಯಕಿ

Ranganayaki movie release on november 1st,ನವೆಂಬರ್ 1 ರಂದು ರಂಗನಾಯಕಿ ಸಿನಿಮಾ ಬಿಡುಗಡೆ
ರಂಗನಾಯಕಿ

ಟೈಟಲ್ ಹಾಗೂ ಪೋಸ್ಟರ್​​​ನಿಂದ ಕುತೂಹಲ ಮೂಡಿಸಿದ್ದ ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಈಗಾಗಲೇ ಇಂಡಿಯನ್ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿರುವ ಸಿನಿಮಾ. ಈ ಸಿನಿಮಾ, ಗೋವಾದಲ್ಲಿ ನವೆಂಬರ್ 20 ರಿಂದ 28 ವರೆಗೆ ನಡೆಯಲಿರುವ 50 ನೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್​​ನಲ್ಲಿ ಪ್ರದರ್ಶನವಾಗಲಿದೆ. ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಸಮಾಜ ಯಾವ ರೀತಿ ನೋಡುತ್ತದೆ. ಆಕೆ ಎಲ್ಲವನ್ನೂ ಎದುರಿಸಿ ಮುಂದೆ ಹೇಗೆ ಬದುಕುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್​, ಶಿವರಾಮಣ್ಣ, ಸುಚೇಂದ್ರ ಪ್ರಸಾದ್​​, ಶ್ರುತಿ ನಾಯಕ್​​ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಎಸ್​​​​.ವಿ. ಎಂಟರ್​​​ಟೈನ್ಮೆಂಟ್ ಅಡಿ ಎಸ್​​.ವಿ. ನಾರಾಯಣ್​​ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಖದ್ರಿ ಮಣಿಕಾಂತ್ ಸಂಗೀತ, ರಾಕೇಶ್ ಛಾಯಾಗ್ರಹಣ, ನವೀನ್ ಕೃಷ್ಣ ಸಂಭಾಷಣೆ ಇದೆ.

ಸ್ಟಾರ್ ಕನ್ನಡಿಗ

Star Kannadiga
ಸ್ಟಾರ್ ಕನ್ನಡಿಗ

ಕರ್ನಾಟಕದಲ್ಲಿ ಕನ್ನಡಿಗನೇ ಸ್ಟಾರ್ ಹಾಗೂ ಸಾರ್ವಭೌಮ ಎಂಬ ಅಂಶ ಹೊತ್ತ ‘ಸ್ಟಾರ್ ಕನ್ನಡಿಗ’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಚನ್ನವೀರ, ಅರುಣ್, ಭೈರವ ಎಂಬ ಮೂವರು ಆಟೋ ಚಾಲಕರು ಹಾಗೂ ಹರೀಶ್ ಜೋಗಿ ಎಂಬ ಕ್ಯಾಬ್ ಚಾಲಕ ಸೇರಿ ನಿರ್ಮಿಸಿರುವ ಸಿನಿಮಾ ಇದು. ಮಂಜುನಾಥ್ ಪಿಕ್ಚರ್ಸ್ ಬ್ಯಾನರ್ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ನಾಯಕ ಹಾಗೂ ನಿರ್ದೇಶಕ ಮಂಜುನಾಥ್, ಕನ್ನಡದ ಮೇಲಿನ ಪ್ರೀತಿಯನ್ನು ಚಿತ್ರದಲ್ಲಿ ತೋರ್ಪಡಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕನಕಪುರ ಸುತ್ತ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಶಾಲಿನಿ ಭಟ್, ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ. ರಾಕ್​​ಲೈನ್​ ಸುಧಾಕರ್ ಹೊರತುಪಡಿಸಿ ಚಿತ್ರದಲ್ಲಿ ನಟಿಸಿರುವ ಎಲ್ಲರೂ ಹೊಸಬರೇ. ಕಿರಣ್, ರೋಹಿತ್, ಕೆವಿನ್, ಹರೀಶ್, ಮೋಹನ್, ಎಂ ನಾಗಭೂಷಣ್, ಕೋಬ್ರಾ ನಾಗರಾಜ್ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಫ್ರಾನ್ಸಿಸ್ ಹಾಗೂ ಪ್ರತಾಪ್ ನೃತ್ಯ, ಮಹಾದೇವ ಛಾಯಾಗ್ರಹಣ, ಶಿವಕುಮಾರಸ್ವಾಮಿ ಸಂಕಲನ, ಪವನ್ ಪಾರ್ಥ ಹಿನ್ನೆಲೆ ಸಂಗೀತ ಈ ಚಿತ್ರಕ್ಕೆ ಇದೆ.

ದಂಡುಪಾಳ್ಯಮ್ 4

Dandupalyam release on november 1st, ಕನ್ನಡ ರಾಜ್ಯೋತ್ಸವದಂದು ದಂಡುಪಾಳ್ಯಂ ತೆರೆಗೆ
ದಂಡುಪಾಳ್ಯಂ 4 (ಧೂಮಪಾನ ಆರೋಗ್ಯಕ್ಕೆ ಹಾನಿಕರ)

ದಂಡುಪಾಳ್ಯ ಸೀರೀಸ್ ಅಡಿಯಲ್ಲಿ ತಯಾರಾಗಿರುವ ಚಿತ್ರ ಈ ಬಾರಿ ‘ದಂಡುಪಾಳ್ಯಮ್’ ಆಗಿದೆ. ಇದು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ಕೂಡಾ ಬಿಡುಗಡೆಯಾಗುತ್ತಿದೆ. ವೆಂಕಟ್ ನಿರ್ಮಾಣದಲ್ಲಿ ಕೆ.ಟಿ. ನಾಯಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಶೀರ್ಷಿಕೆ ಕೆಳಗೆ ‘ಕ್ರೈಂ ಮುಂದುವರೆಯುವುದು’ ಎಂದು ಬರೆಯಲಾಗಿದೆ. ಸುಮನ್ ರಂಗನಾಥ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆರ್​​​​. ಗಿರಿ ಛಾಯಾಗ್ರಹಣ, ಬೆನಕ ರಾಜು ಸಂಗೀತ ನೀಡಿರುವ ಈ ಚಿತ್ರದಲ್ಲಿ ತೆಲುಗು ನಟಿ ಮುಮೈತ್ ಖಾನ್ ಕೂಡಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿ + +

C++
ಸಿ++

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳು ಸಾಕಷ್ಟು ತಯಾರಾಗುತ್ತಿವೆ. ಅದರಲ್ಲಿ ಬ್ಲೂ ಎಲಿಫೆಂಟ್ ಸಿನಿಮಾಸ್ ನಿರ್ಮಾಣದ ‘ಸಿ ++’ ಸಿನಿಮಾ ಕೂಡಾ ಒಂದು. ಸುರೇಶ್ ಲಿಯೋನ್ ರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲಿ ಕೂಡಾ ನಟಿಸಿದ್ದಾರೆ. ಸ್ವೀಡನ್ ದೇಶದ ಬೋಬರ್ಗ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಂದೀಪ್ ಹಂಚಿನ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ ಸಿನಿಮಾಗಿದೆ. ಸುರೇಶ್ ಲಿಯೋನ್ ರೇ, ನಾಗೇಂದ್ರ ಅರಸ್, ವಿರಾಜ್ ವಿಸ್ಮಿತ್, ವಿಶು ವೀರ್, ಆದರ್ಶ್ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ.

ಈ ವಾರ ರಾಜ್ಯೋತ್ಸವ ಅಂಗವಾಗಿ 4 ಕನ್ನಡ ಸಿನಿಮಗಳು

ಕನ್ನಡ ರಾಜ್ಯೋತ್ಸವದ ದಿವಸ – ನೊವೆಂಬರ್ 1 ಶುಕ್ರವಾರ ರಂಗನಾಯಕಿ – ವಾಲ್ಯುಮ್ 1 ವರ್ಜೀನಿಟಿ ಜೊತೆಗೆ ದಂಡುಪಾಳ್ಯಮ್ 4, ಸಿ +++ ಹಾಗೂ ಸ್ಟಾರ್ ಕನ್ನಡಿಗ ಸಿನಿಮಗಳು ಬಿಡುಗಡೆ ಆಗುತ್ತಿದೆ.

ಈ ನಾಲ್ಕು ಸಿನಿಮಾಗಳಲ್ಲಿ ಸಂಪೂರ್ಣ ಹೊಸ ತಂಡದ ಸಿನಿಮಗಳು ಅಂದರೆ ಸ್ಟಾರ್ ಕನ್ನಡಿಗ – ಆಟೋ ಚಾಲಕರು ಮತ್ತು ಕ್ಯಾಬ್ ಡ್ರೈವರ್ ನಿರ್ಮಾಪಕರು, ಮತ್ತು ಸಿ ++ ಒಂದು ಕುತೂಹಲ ಭರಿತ ಚಿತ್ರದಲ್ಲಿ ಕಥೆಯೇ ಜೀವಾಳ ಸುರೇಶ್ ಲಿಯೋನ್ ರೇ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.

ರಂಗನಾಯಕಿ – ಈಗಾಗಲೇ ಇಂಡಿಯನ್ ಪನೋರಮ ವಿಭಾಗಕ್ಕೆ ಆಯ್ಕೆ ಆಗಿರುವ ಸಿನಿಮಾ (50 ನೇ ಅಂತರ ರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ – ಗೋವ ನವೆಂಬರ್ 20 ರಿಂದ 28) ದಯಾಳ್ ಪದ್ಮನಾಭನ್ ಅವರ ಮತ್ತೊಂದು ಸಾಮಾಜಿಕ ಕಳಕಳಿ ಇರುವ ಸಿನಿಮಾ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ತಾನು ಯಾವ ರೀತಿ ಸೇಡನ್ನು ತೀರಿಸಿಕೊಳ್ಳಬೇಕು ಎಂಬುದು ಇಲ್ಲಿ ಕಥಾ ವಸ್ತು. ದಯಾಳ್ ಪದ್ಮನಾಭನ್ ಕಾಲ್ಪನಿಕವಾಗಿ ರಂಗನಾಯಕಿ ಮೂಲಕ ಮಾಡಿಸಿದ್ದಾರೆ. ಅದಿತಿ ಪ್ರಭುದೇವ, ಎಂ ಜಿ ಶ್ರೀನಿವಾಸ್, ತ್ರಿವಿಕ್ರಮ್, ಶಿವರಾಮಣ್ಣ, ಸುಚೆಂದ್ರ ಪ್ರಸಾದ್, ಶ್ರುತಿ ನಾಯಕ್ ಹಾಗೂ ಇತರರು ಅಭಿನಯಿಸಿದ್ದಾರೆ.

ಎಸ್ ವಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಎಸ್ ವಿ ನಾರಾಯಣ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಖದ್ರಿ ಮಣಿಕಾಂತ್ ಸಂಗೀತ, ರಾಕೇಶ್ ಛಾಯಾಗ್ರಾಹಕರು. ನವೀನ್ ಕೃಷ್ಣ ಈ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದಾರೆ.

 ‘ಸ್ಟಾರ್ ಕನ್ನಡಿಗ

ಕರ್ನಾಟಕದಲ್ಲಿ ಕನ್ನಡಿಗನೆ ಸ್ಟಾರ್ ಹಾಗೂ ಸಾರ್ವಭೌಮ ಎಂಬ ಅಂಶ ಹೊತ್ತ ಸ್ಟಾರ್ ಕನ್ನಡಿಗ ಕನ್ನಡ ಚಿತ್ರ ಕನ್ನಡ ರಾಜ್ಯೋತ್ಸವ ದಿವಸದಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದ ನಿರ್ಮಾಪಕರುಗಳು ಮೂರು ಆಟೋ ಚಾಲಕರು ಹಾಗೂ ಒಬ್ಬ ಕಾರು ಚಾಲಕ. ಇದು ಮಂಜುನಾಥ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಆಗಿದೆ.

ಮೂವರು ಆಟೋ ಚಾಲಕರು ಚನ್ನವೀರ, ಅರುಣ್, ಭೈರವ ಜೊತೆ ಕ್ಯಾಬ್ ಚಲ್ಲಕ ಹರೀಶ್ ಜೋಗಿ ತಾವು ಕಷ್ಟ ಪಟ್ಟು ದುಡಿದಿದ್ದ ಹಣವನನ್ನು ಈ ಚಿತ್ರಕ್ಕಾಗಿ ತೊಡಗಿಸಿದ್ದಾರೆ.

ನಾಯಕ ಹಾಗೂ ನಿರ್ದೇಶಕ ಮಂಜುನಾಥ್ ಕನ್ನಡದ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕನಕಪುರ ಸುತ್ತ ಐದು ಹಾಡುಗಳೊಂದಿಗೆ ಚಿತ್ರ ತಯಾರಿಸಿದ್ದಾರೆ. ಇಲ್ಲಿ ಐದು ಹುಡುಗರು ಗುಂಪೊಂದು ಸ್ನೇಹ, ಪ್ರೀತಿ, ವಿಶ್ವಾಸ ಜೊತೆಗೆ ಕೆಲವು ಅನಿರೀಕ್ಷಿತ ತಿರುವುಗಳನ್ನು ಸಹ ಚಿತ್ರ ಸ್ಟಾರ್ ಕನ್ನಡಿಗ ಒಳಗೊಂಡಿದೆ.

ಶಾಲಿನಿ ಭಟ್ ಚಿತ್ರದ ಕಥಾ ನಾಯಕಿ. ರಾಕ್ ಲೈನ್ ಸುಧಾಕರ್ ಅವರೊಬ್ಬರೆ ಚಿರ ಪರಿಚಿತ ವ್ಯಕ್ತಿ ತಾರಾಗಣದಲ್ಲಿ. ಕಿರಣ್, ರೋಹಿತ್, ಕೆವಿನ್, ಹರೀಶ್, ಮೋಹನ್, ಎಂ ನಾಗಭೂಷಣ್, ಕೋಬ್ರಾ ನಾಗರಾಜ್ ಹಾಗೂ ಇತರರು ಇದ್ದಾರೆ.

ಫ್ರಾನ್ಸಿಸ್ ಹಾಗೂ ಪ್ರತಾಪ್ ನೃತ್ಯ, ಮಹಾದೇವ ಛಾಯಾಗ್ರಹಣ, ಶಿವಕುಮಾರಸ್ವಾಮಿ ಸಂಕಲನ, ಪವನ್ ಪಾರ್ಥ ಹಿನ್ನಲೆ ಸಂಗೀತ ಈ ಚಿತ್ರಕ್ಕೆ ನೀಡಿದ್ದಾರೆ.

ದಂಡುಪಾಳ್ಯಮ್ 4 – ಮತ್ತೆ ದಂಡುಪಾಳ್ಯ ಸೀರೀಸ್ ಅಡಿಯಲ್ಲಿ ತಯಾರಾಗಿರುವ ಚಿತ್ರ ಈ ಭಾರಿ ದಂಡುಪಾಳ್ಯಮ್ ಆಗಿದೆ. ಇದು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ಸಹ ಬಿಡುಗಡೆಗೆ ಸಿದ್ದವಾಗಿದೆ. ಕೆ ಟಿ ನಾಯಕ್ ನಿರ್ದೇಶನ, ವೆಂಕಟ್ ನಿರ್ಮಾಣದ ಚಿತ್ರದ ಶೀರ್ಷಿಕೆ ಕೆಳಗೆ ಕ್ರೈಂ ಮುಂದುವರೆಯುವುದು ಎಂದು ಹೇಳಲಾಗಿದೆ. ಇಲ್ಲಿಯೂ ಸಹ ಒಂದು ವಿಕೃತ ಮನೋಭಾವ ಇರುವ ಗ್ಯಾಂಗ್ ಆಮಯಕರನ್ನು ಬಲಿ ತೆಗೆದುಕೊಳ್ಳುವುದಿದೆ.

ಆರ್ ಗಿರಿ ಛಾಯಾಗ್ರಹಣ, ಬೆನಕ ರಾಜು ಸಂಗೀತ ಒದಗಿಸಿರುವ ಈ ಚಿತ್ರದಲ್ಲಿ ಸುಮನ್ ರಂಗನಾಥ್ ಮುಖ್ಯ ಪಾತ್ರದ ಜೊತೆಗೆ ಮುಮೈತ್ ಖಾನ್ ಅವರ ಐಟೆಮ್ ಹಾಡು ಕೂಡ ಇದೆ.

ಸಿ + + ಇದೆ ಶುಕ್ರವಾರ

ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳು ಹಲವಾರು ಬರುತ್ತಿವೆ. ಅದರಲ್ಲಿ ಬ್ಲೂ ಎಲಿಫೆಂಟ್ ಸಿನಿಮಾಸ್ ಸಿ ++ ಚಿತ್ರ ಸಹ ಒಂದಾಗಿದೆ.

ಸುರೇಶ್ ಲಿಯೋನ್ ರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ಮುಖ್ಯ ಪಾತ್ರ ಸಹ ಮಾಡಿದ್ದಾರೆ. ಸ್ವೀಡನ್ ದೇಶದ ಬೋಬರ್ಗ್ ಸಂಗೀತ ನೀಡಿದ್ದಾರೆ. ಸಂದೀಪ್ ಹಂಚಿನ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನವಿದೆ.

ತಾರಾಗಣದಲ್ಲಿ ಸುರೇಶ್ ಲಿಯೋನ್ ರೇ, ನಾಗೇಂದ್ರ ಅರಸ್, ವಿರಾಜ್ ವಿಸ್ಮಿತ್, ವಿಶು ವೀರ್, ಆದರ್ಶ್ ಹಾಗೂ ಇತರರು ಇದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.