ಕೊರೊನಾದಿಂದಾಗಿ ಕೂಲಿ ಕಾರ್ಮಿಕರು, ಜನ ಸಾಮಾನ್ಯರು ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ತಂತ್ರಜ್ಞರು ಹಾಗೂ ಹಿರಿಯ ಪೋಷಕ ಕಲಾವಿದರು ಕೂಡ ಇದರಿಂದ ಹೊರತಾಗಿಲ್ಲ. ಇಂತಹ ಸಮಯದಲ್ಲಿ ಉಪೇಂದ್ರ, ಸುದೀಪ್, ರಾಗಿಣಿ, ಸೇರಿದಂತೆ ಸಾಕಷ್ಟು ಸಿನಿಮಾ ತಾರೆಯರು, ಕಷ್ಟದಲ್ಲಿರುವ ಪೋಷಕ ಕಲಾವಿದರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್, ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್ ಹಾಗೂ ತೇಜು ಮಸಾಲೆ ಅವರ ಸಹಯೋಗದಲ್ಲಿ, 100ಕ್ಕೂ ಹೆಚ್ಚು ಪೋಷಕ ಕಲಾವಿದರಿಗೆ ಫುಡ್ ಕಿಟ್ಗಳನ್ನ ವಿತರಿಸಲಾಗಿದೆ.
ಹಿರಿಯ ಕಲಾವಿದ ಬಿರಾದಾರ್ ಸೇರಿದಂತೆ ಸಾಕಷ್ಟು ಪೋಷಕ ಕಲಾವಿದರಿಗೆ ದಿನಸಿ ಕಿಟ್ ನೀಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಪೋಷಕ ಕಲಾವಿದರು, ಈ ಕೊರೊನಾ ನಮ್ಮ ಜೀವನವನ್ನು ಕಸಿದುಕೊಂಡಿದೆ. ನಮ್ಮ ಸಹಾಯಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಎಂದರು.