ಫಾರ್ ರಿಜಿಸ್ಟ್ರೇಷನ್ ಸಿನಿಮಾ ತಂಡ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ. ಈ ಬೆನ್ನಲ್ಲೇ ಈಗ ಮೊತ್ತೊಂದು ಹೊಸ ಸುದ್ದಿಯನ್ನ ನೀಡಿದೆ.
ಹೌದು, ಫಾರ್ REGN ಚಿತ್ರದ ನಿರ್ದೇಶಕ ನವೀನ್ ದ್ವಾರಕನಾಥ್ ಅವರು ಹಿಂದಿನ ಜನಪ್ರಿಯ 'ಕೌನ್ ಬನೇಗಾ ಕರೋಡಪತಿ' ಶೋ ನಡೆಸಿಕೊಡುವ ಬಾಲಿವುಡ್ ದಿಗ್ಗಜ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಫಾರ್ REGN ಚಿತ್ರದ ಕುರಿತು ಮಾತನಾಡಿ, ಆಶೀರ್ವಾದ ಪಡೆದುಕೊಂಡಿದ್ದು ನನ್ನ ಜೀವನದ ಅತ್ಯಂತ ಸಂತೋಷದ ದಿನ ಎಂದು ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ.
ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಈ ಚಿತ್ರದಲ್ಲಿ ನಟಿಸಿದೆ. ಖ್ಯಾತ ಖಳನಟ ರವಿಶಂಕರ್, ಹಿರಿಯ ನಟ ರಮೇಶ್ ಭಟ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ತುಳು ನಟ ಉಮೇಶ್ ಮಿಜಾರ್, ಮುಂಬೈ ನಟಿ ಶ್ರದ್ಧಾ ಸಾಲಿಯಾನ್, ತಬಲಾ ನಾಣಿ ಚಿತ್ರದಲ್ಲಿ ಇದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿರೋ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.