ETV Bharat / sitara

'ಫಾರ್ ರಿಜಿಸ್ಟ್ರೇಷನ್' ಚಿತ್ರದ ಮೂಲಕ ಸ್ಯಾಂಡಲ್​​​​ವುಡ್​​ನಲ್ಲಿ ರಿಜಿಸ್ಟರ್ ಆಗಲು ಹೊರಟ ತಂಡ - Latest updates about For Registration

ಸ್ಯಾಂಡಲ್​​ವುಡ್​​ನಲ್ಲಿ 'ಫಾರ್ ರಿಜಿಸ್ಟ್ರೇಷನ್' ಎಂಬ ಹೊಸ ಚಿತ್ರವೊಂದು ತಯಾರಾಗುತ್ತಿದೆ. ನವೀನ್ ದ್ವಾರಕನಾಥ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.

For Registration movie will start soon
'ಫಾರ್ ರಿಜಿಸ್ಟ್ರೇಷನ್'
author img

By

Published : Jun 12, 2020, 4:26 PM IST

ಬಹಳಷ್ಟು ಜನರು ತಾವು ಇಷ್ಟ ಪಡುವ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಳ್ಳಲು ಬಹಳ ಸರ್ಕಸ್ ಮಾಡುತ್ತಾರೆ. ಆದರೆ ಇಲ್ಲೊಂದು ತಂಡ 'ಫಾರ್ ರಿಜಿಸ್ಟ್ರೇಷನ್' ಎಂದು ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುತ್ತಿದೆ.

For Registration movie will start soon
ಪೃಥ್ವಿ ಅಂಬರ್

ಕಿರುಚಿತ್ರಗಳನ್ನು ಮಾಡಿ ಅನುಭವ ಇರುವ ಸಾಫ್ಟ್​​ವೇರ್ ಉದ್ಯೋಗಿ ನವೀನ್ ದ್ವಾರಕನಾಥ್ ಎಂಬುವವರು ಸಿ.ಆರ್​. ಸಿಂಹ ಅವರೊಂದಿಗೆ ಕೂಡಾ ಕೆಲಸ ಮಾಡಿ ಅನುಭವ ಇರುವವರು. ಈಗ ಅವರು ‘ಫಾರ್ ರಿಜಿಸ್ಟ್ರೇಷನ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದು ಸಾಂಸಾರಿಕ ಹಾಗೂ ಕಾಮಿಡಿ ಸಿನಿಮಾ ಎಂದು ನವೀನ್ ಹೇಳುತ್ತಾರೆ. ಚಿತ್ರಕ್ಕೆ ನವೀನ್ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದಲ್ಲಿ 'ದಿಯಾ' ಖ್ಯಾತಿಯ ಚಿತ್ರದ ಪೃಥ್ವಿ ಅಂಬರ್, ತಬಲಾ ನಾಣಿ ಹಾಗೂ ಖ್ಯಾತ ತುಳು ನಟರೊಬ್ಬರು ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಶೀರ್ಷಿಕೆ ಗೀತೆ ಬರೆದಿದ್ದಾರೆ. ನಿರ್ದೇಶಕ ನವೀನ್ ಸ್ನೇಹಿತ ನವೀನ್ ರಾವ್ ನಿಶ್ಚಲ್ ಈ ಚಿತ್ರಕ್ಕೆ ಹಣ ಹೂಡಲು ಮುಂದಾಗಿದ್ದಾರೆ. ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.