ETV Bharat / sitara

'ದಿಯಾ' ಹೀರೋ ಜೊತೆ ನಟಿಸುತ್ತಿದ್ದಾರೆ 'ಲವ್ ಮಾಕ್‌ಟೈಲ್' ನಿಧಿಮಾ - ಚಿತ್ರೀಕರಣ ಶುರು ಮಾಡಿದ ಫಾರ್ ರಿಜಿಸ್ಟ್ರೇಷನ್

'ಲವ್ ಮಾಕ್‌ಟೈಲ್' ಸಿನಿಮಾದಲ್ಲಿ ನಿಧಿಮಾ ಆಗಿ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ ಮಿಲನ ನಾಗರಾಜ್, ಪೃಥ್ವಿ ಅಂಬಾರ್ ಜೋಡಿಯಾಗುತ್ತಿದ್ದಾರೆ. 'ಫಾರ್ ರಿಜಿಸ್ಟ್ರೇಷನ್' ಚಿತ್ರದ ಮುಹೂರ್ತ ವಸಂತನಗರದಲ್ಲಿರೋ ಅಂಬಾಭವಾನಿ ದೇವಸ್ಥಾನದಲ್ಲಿ ನೆರವೇರಿದೆ.

Registration kannada movie shooting start
'ದಿಯಾ' ಹೀರೋ ಜೊತೆ ನಟಿಸುತ್ತಿದ್ದಾಳೆ 'ಲವ್ ಮಾಕ್ ಟೈಲ್' ನಿಧಿಮಾ
author img

By

Published : Dec 11, 2020, 5:05 PM IST

ಕನ್ನಡ ಚಿತ್ರರಂಗದಲ್ಲಿ ರಿಲೀಸ್ ಆಗೋದಿಕ್ಕೆ ಸಾಲು ಸಾಲು ಸಿನಿಮಾಗಳು ರೆಡಿಯಾಗಿದ್ರೆ, ಸಿನಿಮಾ ಬಿಡುಗಡೆ ಆಗದ ಟೈಮಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ಫಾರ್ ರಿಜಿಸ್ಟ್ರೇಷನ್' ಎಂಬ ಟೈಟಲ್ ಹೊಂದಿರುವ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ.

ಮತ್ತೊಂದು ಕುತೂಹಲಕಾರಿ ವಿಷ್ಯ ಏನಪ್ಪಾ ಅಂದ್ರೆ, 'ಲವ್ ಮಾಕ್‌ಟೈಲ್' ಸಿನಿಮಾದಲ್ಲಿ ನಿಧಿಮಾ ಆಗಿ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ ಮಿಲನ ನಾಗರಾಜ್ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಅವರಿಗೆ ಜೋಡಿಯಾಗುತ್ತಿದ್ದಾರೆ. ಚಿತ್ರದ ಮುಹೂರ್ತ ವಸಂತನಗರದಲ್ಲಿರೋ ಅಂಬಾಭವಾನಿ ದೇವಸ್ಥಾನದಲ್ಲಿ ನೆರವೇರಿದೆ.

'ದಿಯಾ' ಹೀರೋ ಜೊತೆ ನಟಿಸುತ್ತಿದ್ದಾರೆ 'ಲವ್ ಮಾಕ್ ಟೈಲ್' ನಿಧಿಮಾ

ಓದಿ : 'ವಿರುಷ್ಕಾ' ವಿವಾಹ ವಾರ್ಷಿಕೋತ್ಸವ: ಇಬ್ಬರೂ ಶೇರ್‌ ಮಾಡಿರುವ ಫೋಟೋಸ್‌ ನೋಡಿ..

ಪೃಥ್ವಿ ಹಾಗು ಮಿಲನ ನಾಗರಾಜ್ ಅಲ್ಲದೇ ಸುಧಾರಾಣಿ, ತಬಲ ನಾಣಿ, ಸುಧಾ ಬೆಳವಡಿ, ಬಾಬು ಹಿರಣ್ಣಯ್ಯ, ರಘು ರಾಮನಕೊಪ್ಪ, ನಿರ್ದೇಶಕ ನವೀನ್ ದ್ವಾರಕನಾಥ್ ಸೇರಿದಂತೆ ಗಣ್ಯರು ಫಾರ್ ರಿಜಿಸ್ಟ್ರೇಷನ್ ಸಿನಿಮಾದ ಪೂಜೆಗೆ ಸಾಕ್ಷಿಯಾದರು.

ಇದೊಂದು ರೊಮ್ಯಾಂಟಿಕ್ ಕಥೆ ಆಧರಿಸಿರುವ ಸಿನಿಮಾವಾಗಿದ್ದು, ಪೃಥ್ವಿ ಅಂಬಾರ್ ಹಾಗು ಮಿಲನ ನಾಗರಾಜ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಬಲ ನಾಣಿ ಹಾಗು ಸುಧಾರಾಣಿ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರಂತೆ. ಸುಧಾರಾಣಿ ಪೂರ್ತಿ ಕಥೆ ಕೇಳಿ ಈ ಸಿನಿಮಾವನ್ನು ಒಪ್ಪಿಕೊಂಡ್ರಂತೆ. ಈಗಾಗ್ಲೇ ಕಿರುಚಿತ್ರ ನಿರ್ದೇಶನ ಮಾಡಿ ಅನುಭವ ಹೊಂದಿರುವ ನವೀನ್ ದ್ವಾರಕನಾಥ್ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ವಿವೇಕ್ ಛಾಯಾಗ್ರಹಣ ಹಾಗು ಹರೀಶ್ ಆರ್. ಸಂಗೀತ ನಿರ್ದೇಶನ ಫಾರ್ ರಿಜಿಸ್ಟ್ರೇಷನ್ ಚಿತ್ರಕ್ಕಿದೆ. ನಿಶ್ಚಲ್ ಫಿಲಂಸ್ ಲಾಂಛನದಡಿಯಲ್ಲಿ ನವೀನ್ ರಾವ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇಂದು ಸೆಟ್ಟೇರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾ ತಂಡ, ಬೆಂಗಳೂರು ಮತ್ತು ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.