ETV Bharat / sitara

ಅಶ್ಲೀಲ ಫೋಟೋಶೂಟ್​​: ಮಾದಕ ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್

ನಟಿ ಪೂನಂ ಪಾಂಡೆ ಗೋವಾದಲ್ಲಿ ಮಾಡಿರುವ ವಿಡಿಯೋ ಚಿತ್ರೀಕರಣವೊಂದು ಗೋವಾದಲ್ಲಿ ಕೋಲಾಹಲ ಸೃಷ್ಟಿಸಿದೆ. ಇಲ್ಲಿನ ಚಾಪೋಲಿ ಅಣೆಕಟ್ಟೆ ಬಳಿ ಉನ್ಮಾದ ಹೆಚ್ಚಿಸುವಂತ ಪೂನಂ ಪಾಂಡೆ ಫೋಟೋಶೂಟ್​ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಕೆಲವೇ ದಿನಗಳ ನಂತರ ಗೋವಾ ಪೊಲೀಸ್​ ಠಾಣೆಯಲ್ಲಿ ಆಕೆಯ ವಿರುದ್ಧ ದೂರು ದಾಖಲಾಗಿದೆ.

poonam pandey vilgar video shoot
ಮಾದಕ ನಟಿ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್
author img

By

Published : Nov 4, 2020, 5:56 PM IST

ಪಣಜಿ: ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ್ದಕ್ಕಾಗಿ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಗೋವಾದಲ್ಲಿ ದೂರು ದಾಖಲಾಗಿದೆ.

ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪಂಕಜ್ ಕುಮಾರ್ ಸಿಂಗ್, ದಕ್ಷಿಣ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇನ್ನೂ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಗೋವಾ ಫಾರ್ವರ್ಡ್ ಪಕ್ಷದ ಮಹಿಳಾ ವಿಭಾಗವು ದಕ್ಷಿಣ ಗೋವಾ ಎಸ್‌ಪಿಗೆ ನಟಿ ಪೂನಂ ಪಾಂಡೆ ವಿರುದ್ಧ ದೂರು ನೀಡಿದೆ.

ವೀಡಿಯೊ ಶೂಟಿಂಗ್ ನಡೆದಿರುವ ಸ್ಥಳ ಅತ್ಯಂತ ಸುರಕ್ಷಿತ ಹಾಗೂ ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಹೇಗೆ ಹಗಲು ಹೊತ್ತಿನಲ್ಲಿ ಈ ರೀತಿ ಶೂಟಿಂಗ್​ ನಡೆಯುತ್ತದೆ? ಎಂದು ಪ್ರತಿಪಕ್ಷ ಪ್ರಶ್ನಿಸಿದ್ದು, ಇದು ಗುಪ್ತಚರ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಹೀಗಾಗಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ.

ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡಿದವರ ವಿರುದ್ಧ ತಕ್ಷಣವೆ ತನಿಖೆ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗೋವಾದ ಪ್ರತಿಪಕ್ಷ ನಾಯಕರೊಬ್ಬರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.