ETV Bharat / sitara

ಸ್ಯಾಂಡಲ್​ವುಡ್ ಡ್ರಗ್ಸ್​​​​ ಪ್ರಕರಣ; 12 ಆರೋಪಿಗಳ ವಿರುದ್ಧ ದಾಖಲಾದ FIR ಮಾಹಿತಿ ಇಲ್ಲಿದೆ

author img

By

Published : Sep 5, 2020, 8:51 PM IST

ಚಂದನವನದ ಡ್ರಗ್ಸ್​​​ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್​ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಅಧಿಕೃತವಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಡ್ರಗ್ಸ್​​ ಸರಬರಾಜು ಮಾಡುತ್ತಿದ್ದ ಕಾರಣಕ್ಕಾಗಿ ನಟಿ ರಾಗಿಣಿ ದ್ವಿವೇದಿ ಸೇರಿದಂತೆ 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

sandalwood drug scandal case
ರಾಗಿಣಿ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​​​ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾದಕ ದ್ರವ್ಯ ಜಾಲದ ಜಾಡು ಹಿಡಿದ ಸಿಸಿಬಿ ಪೊಲೀಸರು, ರಾಗಿಣಿ ದ್ವಿವೇದಿ ಆಪ್ತ ರವಿ ಶಂಕರ್ ಹೇಳಿಕೆಯ ಆಧಾರದ ಮೇಲೆ 12 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಸದ್ಯ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್​ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಅಧಿಕೃತವಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

FIR details of sandalwood drug scandal case
FIR ಪ್ರತಿ-1

FIR ಪ್ರತಿ-2

FIR ಪ್ರತಿ-3

ದೂರನ್ನು ಸಿಸಿಬಿ ಎಸಿಪಿ ಗೌತಮ್ ನೀಡಿದ್ದು, ದೂರಿನಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪಾರ್ಟಿ ಮಾಡಿ, ಆರೋಪಿಗಳು ಡ್ರಗ್ಸ್​​ ಸರಬರಾಜು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇ‌ನ್ನು ಡ್ರಗ್ಸ್​, ಪೆಡ್ಲರ್​ಗಳ ಮೂಲಕ ಪಾರ್ಟಿಗೆ ಬರುತ್ತಿತ್ತು. ಉದ್ಯಮಿಗಳು, ಸೆಲೆಬ್ರಿಟಿ, ನಟ-ನಟಿಯರು, ಡಿಜೆಗಳು, ಸಾಫ್ಟ್​ವೇರ್ ಉದ್ಯೋಗಿಗಳಿಗೆ ಡ್ರಗ್ಸ್​​ ಸರಬರಾಜು ಮಾಡುತ್ತಿದ್ದ ಕಾರಣ ಶಿವ ಪ್ರಕಾಶ್, ನಟಿ‌ ರಾಗಿಣಿ, ವಿರೇನ್ ಕನ್ನಾ, ಪ್ರಶಾಂತ್ ರಾಂಕಾ, ವೈಭವ್ ಜೈನ್, ಆದಿತ್ಯ ಆಳ್ವಾ, ಲೂಮ್ ಪೆಪ್ಪರ್, ಪ್ರಶಾಂತ್ ರಾಜ್, ಅಶ್ವಿನ್, ಅಭಿಸ್ವಾಮಿ, ರಾಹುಲ್ ಹಾಗೂ ವಿನಯ್ ವಿರುದ್ದ ಎಫ್​ಐಆರ್ ದಾಖಲಾಗಿದೆ. ಕಾಟನ್ ಪೇಟೆಯಲ್ಲಿ ದಾಖಲಾದ ಕೇಸ್ ಸಂಬಂಧವೇ ನಟಿ ರಾಗಿಣಿ ಬಂಧನವಾಗಿದೆ ಎಂದು ಸಂದೀಪ್​ ಪಾಟೀಲ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.