ಬೆಂಗಳೂರು : ಮಾಡೆಲಿಂಗ್ ಅಂದ್ರೆ ಅದು ಕೇವಲ ತರಬೇತಿ ಪಡೆದಿರುವ ಅಥವಾ ಅವಿವಾಹಿತ ರೂಪದರ್ಶಿಯರು ಮಾತ್ರ ಭಾಗವಹಿಸಬಹುದು ಎಂದು ಬಹುತೇಕ ಮಹಿಳೆಯರು ಭಾವಿಸಿರುತ್ತಾರೆ. ಆದ್ರೆ ಇಲ್ಲೊಬ್ಬರು ಈ ಎಲ್ಲಾ ಮಿತಿಗಳನ್ನ ಮೀರಿ ವಿವಾಹಿತ ಮಹಿಳೆಯರಿಗಂತಲೇ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ಮುಂದಿನ ತಿಂಗಳು ಅಂದರೆ ಫೆ.21ಕ್ಕೆ ಮಿಸೆಸ್ ಸೌತ್ ಇಂಡಿಯಾ ಆಡಿಷನ್ ಹಮ್ಮಿಕೊಳ್ಳಲಾಗಿದೆ. 2021ರ ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್ ಸ್ಪರ್ಧೆಗೆ ಆಡಿಷನ್ ನಡೆಯಲಿದೆ. ವಸಂತನಗರದ ಖಾಸಗಿ ಹೋಟೆಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಆಡಿಷನ್ ನಡೆಸಲಾಗುತ್ತದೆ.
ಆಯೋಜಕಿ ನಂದಿನಿ ನಾಗರಾಜ್ ಏರ್ಪಡಿಸಿರುವ ಆಡಿಷನ್‍ನಲ್ಲಿ 18 ರಿಂದ 55 ವರ್ಷದೊಳಗಿನ ಮಹಿಳೆಯರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆಡಿಷನ್‍ನಲ್ಲಿ ಆಯ್ಕೆಯಾದವರು ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಲ್ಲಿ ಗೆದ್ದ ಸ್ಪರ್ಧಿಗಳು ಸಿಂಗಪೂರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ನಮ್ಮ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಆಡಿಷನ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9901755163ಗೆ ಕರೆ ಮಾಡಬಹುದು.