ETV Bharat / sitara

ಪ್ರಶಾಂತ್ ನೀಲ್ ಟ್ವೀಟ್ ನೋಡಿ ಥ್ರಿಲ್ ಆದ ಅಭಿಮಾನಿಗಳು...ಟ್ವೀಟ್​​​ನಲ್ಲಿ ಅಂಥದ್ದೇನಿದೆ...?

author img

By

Published : Jan 29, 2021, 11:03 AM IST

ಇಂದು ಸಂಜೆ 6.32ಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್​​-2 ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟ್ಟರ್​​​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಶಾಂತ್ ನೀಲ್, "ನಿಮಗೆ ನೀಡಲಾದ ಭರವಸೆಯನ್ನು ಉಳಿಸಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದಾರೆ.

Prashant neel tweet
ಪ್ರಶಾಂತ್ ನೀಲ್ ಟ್ವೀಟ್

ಜನವರಿ 8 ರಂದು ಯಶ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾದ ಕೆಜಿಎಫ್​​​-2 ಟೀಸರ್ ಭಾರತೀಯ ಚಿತ್ರರಂಗದ ಇತರ ಸಿನಿಮಾಗಳ ದಾಖಲೆಯನ್ನು ಮುರಿದಿರುವುದು ತಿಳಿದ ವಿಚಾರ. ಟೀಸರ್ ನೋಡಿದವರು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅದರಂತೆ ಇಂದು ಸಂಜೆ ಕೆಜಿಎಫ್​​​​​​-2 ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು.

ಇದನ್ನೂ ಓದಿ: 'ಕಪಿಲ್​ ಶರ್ಮಾ ಶೋ' ತಾತ್ಕಾಲಿಕವಾಗಿ ಸ್ಥಗಿತ: ಕಾರಣ ಇಲ್ಲಿದೆ ಓದಿ

'ಕೆಜಿಎಫ್​​-2' ನಿರ್ದೇಶಕ ಪ್ರಶಾಂತ್ ನೀಲ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಟ್ವೀಟ್ ಮಾಡಿದ್ದು "ಇಂದು ಸಂಜೆ 6.32 ಕ್ಕೆ ಕೆಜಿಎಫ್​​​-2 ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ. ಕೆಜಿಎಫ್-2 ದೃಶ್ಯದ ಫೋಟೋವೊಂದನ್ನು ಹಂಚಿಕೊಂಡಿರುವ ಪ್ರಶಾಂತ್ ನೀಲ್ "ಇಂದು ಸಂಜೆ 6.32ಕ್ಕೆ ಮೊದಲೇ ಹೇಳಿದ ಮಾತನ್ನು ಉಳಿಸಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್, ಹೊಂಬಾಳೆ ಫಿಲ್ಮ್ಸ್​, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಕ್ಯಾಮರಾಮನ್ ಭುವನ್ ಗೌಡ, ತೆಲುಗಿನ ವರಾಹಿ ಸಿನಿಮಾ ಹಾಗೂ ಇನ್ನಿತರರಿಗೆ ಈ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಈಗಾಗಲೇ ಕೆಜಿಎಫ್-2 ಸಿನಿಮಾ ವಿತರಣೆ ಹಕ್ಕುಗಳು ಆಯಾ ಭಾಷೆಗಳಿಗೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಈಗ ಪ್ರಶಾಂತ್ ನೀಲ್ ಟ್ವೀಟ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದು ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿದುಕೊಳ್ಳಲು ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.