ಡ್ರಗ್ಸ್ ಮಾಫಿಯಾ ಅನ್ನೋದು ಬಹಳ ಗಂಭೀರ ವಿಷಯ. ಇದಕ್ಕೆ ಅಂಡರ್ ವರ್ಲ್ಡ್ ಕನೆಕ್ಷನ್ ಇದೆ. ಇದು ಎಲ್ಲಾ ದೇಶಗಳಲ್ಲೂ ಇರುವಂತಹ ಗಂಭೀರ ವಿಷಯ ಎಂದು ಭುವನ ಸುಂದರಿ ಭವ್ಯಗೌಡ ಹೇಳಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಎದ್ದಿರುವ ಮಾದಕ ನಶೆಯ ಬಗ್ಗೆ ಮಾತನಾಡಿದ ಅವರು, ನಾನು ಮುಂಬೈ ಮೂಲದ ಒಂದು ಕಂಪನಿಗೆ ರಾಯಭಾರಿಯಾಗಿ ಭಾರತಕ್ಕೆ ಬರುವ ಮಾದಕ ವಸ್ತುಗಳ ವಿರುದ್ಧವಾಗಿ ಕೆಲಸ ಮಾಡಿದ್ದೇನೆ. ಆದ್ದರಿಂದ ನನಗೆ ಇದರ ಬಗ್ಗೆ ಅರಿವಿದೆ. ತುಂಬಾ ಜನ ಡ್ರಗ್ಸ್ ತಗೋತಾರೆ. ಇದು ಬಹಳ ನೋವಿನ ವಿಚಾರ.
ತಂದೆ-ತಾಯಿ ಮಕ್ಕಳನ್ನು ಪ್ರೀತಿಯಿಂದ ಬೆಳೆಸಿರುತ್ತಾರೆ. ಆದರೆ, ಮಕ್ಕಳು ಅಡ್ಡದಾರಿ ಹಿಡಿದು ಇಂತಹ ಕೆಲಸ ಮಾಡುತ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆ ಇವೆ ಎಂದರು. ನಾನು ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಅಲ್ಲಿ ಡ್ರಗ್ಸ್ ಅನ್ನೋದು ಹೆಮ್ಮರವಾಗಿ ಬೆಳೆದಿದೆ.
ಆದರೆ, ನನಗೆ ಚಿತ್ರರಂಗದಲ್ಲಿ ಡ್ರಗ್ಸ್ ಇರುವ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ನಾನು ಫ್ಯಾಷನ್ ಲೋಕದಲ್ಲಿ ಇದ್ರೂ ಸಹ ಸಿಗರೇಟ್ ಸೇದಲ್ಲ, ಪಾರ್ಟಿಗಳಿಗೂ ಹೋಗಲ್ಲ. ಆದರೆ, ಶಾಲಾ ಮಕ್ಕಳಿಗೆ ಸುಲಭವಾಗಿ ಡ್ರಗ್ಸ್ ಸಿಗುತ್ತಿದೆ ಅನ್ನೋದು ಬಹಳ ನೋವಿನ ಸಂಗತಿ ಎಂದು ಭವ್ಯಗೌಡ ಕಳವಳ ವ್ಯಕ್ತಪಡಿಸಿದರು.