ಬೆಂಗಳೂರು : ಈ ಸಿನಿಮಾ ಎಂಬ ಅದೃಷ್ಟದ ಪ್ರಪಂಚದಲ್ಲಿ ಯಾವ ನಟ, ಯಾವ ನಿರ್ದೇಶಕನಿಗೆ ಅದೃಷ್ಟ ಖುಲಾಯಿಸುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಇದೀಗ ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಫೆ.16ರಂದು ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ನಿರ್ದೇಶಕನಿಗೂ ಇತರೆ ಭಾಷೆಯ ಸಿನಿಮಾದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್‌ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ.
ಈ ಮೆಚ್ಚುಗೆ ಫ್ಯಾಮಿಲಿ ಪ್ಯಾಕ್ ಸಿನಿಮಾವನ್ನ ನಿರ್ದೇಶನ ಮಾಡಿರೋ ನಿರ್ದೇಶಕ ಅರ್ಜುನ್ ಕುಮಾರ್ ಅವಕಾಶ ಸುರಿಮಳೆ ಆಗುತ್ತಿದೆ. ಕೇವಲ ಕನ್ನಡಿಗರು ಮಾತ್ರವಲ್ಲ, ಸೌತ್ ಸಿನಿ ಇಂಡಸ್ಟ್ರಿಯ ಹಲವು ದಿಗ್ಗಜರಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ.
ನಾಯಕನಾಗಿ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾಕ್ಕೆ ತಮಿಳಿನ ರಜನಿಕಾಂತ್ ಅವರ ಪಿಆರ್ಒ ಆಗಿರುವ ರಿಯಾಜ್ ಕೆ ಅಹ್ಮದ್ ಅವರು ಗುಡ್ ಜಾಬ್ ಅರ್ಜುನ್ ಕುಮಾರ್ ಮತ್ತು ಪಿಆರ್ಕೆ ಸಂಸ್ಥೆ ಆಯ್ಕೆಯೂ ಅಷ್ಟೇ ಚೆನ್ನಾಗಿದೆ ಎನ್ನುವ ಮೂಲಕ ತಂಡದ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.
ಬಾಹುಬಲಿ ಮತ್ತು ಆರ್ಆರ್ಆರ್ ಸಿನಿಮಾ ತಂಡದ ಜತೆ ಗುರುತಿಸಿಕೊಂಡಿರುವ ವಂಶಿ ಕಾಕಾ ಮಜವಾದ ಸ್ಕ್ರಿಪ್ಟ್ ಮತ್ತು ಅದನ್ನು ಹೇಳಿರುವ ರೀತಿಯೂ ಅಷ್ಟೇ ಸರಳವಾಗಿದೆ ಎಂದಿದ್ದಾರೆ. ಸೌತ್ ಸಿನಿ ದುನಿಯಾದ ಇನ್ಫೂಯೆನ್ಸರ್ ರಮೇಶ್ ಬಾಲ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಅರ್ಜುನ್ ಕುಮಾರ್ ಒಂದೊಳ್ಳೆ ಮನರಂಜನಾತ್ಮಕ ಚಿತ್ರವನ್ನೇ ನೀಡಿದ್ದಾರೆ ಎಂದಿದ್ದಾರೆ.
ಇದಷ್ಟೇ ಅಲ್ಲ, ಅಲ್ಲು ಅರ್ಜುನ್ ಒಡೆತನದ ಆಹಾ ಓಟಿಟಿ ಮೀಡಿಯಾದ ಪ್ರಣೀತಾ ಸಿನಿಮಾ ನೋಡಿ, ಸ್ವತಃ ನಿರ್ದೇಶಕರನ್ನೇ ಹೈದರಾಬಾದ್ಗೆ ಆಹ್ವಾನ ನೀಡಿದ್ದಾರೆ. ವಿಜಯ್ ದೇವರಕೊಂಡ ಅವರ ಪಿಆರ್ಒ ಆಗಿರುವ ಸುರೇಶ್ ಕೊಂಡ, ತೆಲುಗಿನಲ್ಲಿಯೂ ಈ ಸಿನಿಮಾ ಮಾಡುವಂತೆ, ಇಲ್ಲಿನ ಮಾರುಕಟ್ಟೆಗೆ ಈ ಥರದ ಸಿನಿಮಾಗಳಿಗೆ ಬೇಡಿಕೆ ಇವೆ ಎಂದಿದ್ದಾರೆ.
ತೆಲುಗು ನಿರ್ಮಾಣ ಸಂಸ್ಥೆಗಳಿಂದ ಅವಕಾಶ : ಈವರೆಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ ಆಗಿವೆ. ಆದರೆ, ಸಿನಿಮಾದ ಜತೆಗೆ ನಿರ್ದೇಶಕರಿಗೆ ಈ ಮಟ್ಟದ ಮೆಚ್ಚುಗೆ ಸಿಕ್ಕಿರಲಿಲ್ಲ. ಇದೀಗ ಫ್ಯಾಮಿಲಿ ಪ್ಯಾಕ್ ಚಿತ್ರದಿಂದ ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಬೇರೆ ಬೇರೆ ಇಂಡಸ್ಟ್ರಿಯವರೂ ಗುರುತಿಸುತ್ತಿದ್ದಾರೆ. ವಿಶೇಷ ಏನೆಂದರೆ, ತೆಲುಗಿನ ಎರಡು ಚಿತ್ರ ನಿರ್ಮಾಣ ಸಂಸ್ಥೆಗಳು ಅರ್ಜುನ್ಗೆ ಸಿನಿಮಾ ಅವಕಾಶವನ್ನೂ ನೀಡಿವೆಯಂತೆ.
ಅರ್ಜುನ್ ಏನೆನ್ನುತ್ತಾರೆ?: ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, ಮಾತುಕತೆಗಳು ನಡೆಯುತ್ತಿವೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಈಗಲೇ ಅದೆಲ್ಲವನ್ನು ನಾನು ರಿವೀಲ್ ಮಾಡುವುದಿಲ್ಲ. ಸದ್ಯ ಪಿಆರ್ಕೆ ಸಂಸ್ಥೆ ವತಿಯಿಂದ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಖುಷಿಯ ವಿಚಾರ ಎಂಬುದು ಅವರ ಮಾತು.
ಶೀರ್ಷಿಕೆ ನೋಡಿ ಇದೊಂದು ಡಬಲ್ ಮೀನಿಂಗ್ ಇರುವಂತಹ ಸಿನಿಮಾ ಎದೆನಿಸಬಹುದು. ಆದರೆ, ಇದೊಂದು ಪಕ್ಕಾ ಕೌಟುಂಬಿಕ ಸಿನಿಮಾ ಎಂದು ತಂಡ ಹೇಳಿಕೊಂಡಿದೆ.
ಇದನ್ನೂ ಓದಿ: 'ಪ್ಯಾರ್ ತೋ ಹೋನಾ ಹಿ ಥಾ'... ವಿವಾಹ ವಾರ್ಷಿಕೋತ್ಸವಕ್ಕೆ ಕಾಜೋಲ್‌ಗೆ ಅಜಯ್ ದೇವಗನ್ ಸ್ಪೆಷಲ್ ವಿಶ್