ETV Bharat / sitara

11ನೇ ದಿನಕ್ಕೆ ಪುನೀತ್ ರಾಜ್​​​​​ಕುಮಾರ್ ವೈಕುಂಠ ಸಮಾರಾಧನೆ.. 12ನೇ ದಿನ ಅಭಿಮಾನಿಗಳಿಗೆ ಅನ್ನದಾನ - ಪಾರ್ವತಮ್ಮ ರಾಜ್​​ಕುಮಾರ್​

ನವೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದಿಂದ ಪ್ಯಾಲೇಸ್ ಗ್ರೌಂಡ್​ನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೂ ಮೊದಲು ಅಭಿಮಾನಿಗಳಿಗಾಗಿ ಕಾರ್ಯಕ್ರಮ ಏರ್ಪಡಿಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

program-held-in-palace-ground-for-puneeth-fans-at-12th-day
11ನೇ ದಿನಕ್ಕೆ ಪುನೀತ್ ರಾಜ್​​​​​ಕುಮಾರ್ ವೈಕುಂಠ ಸಮಾರಾಧನೆ
author img

By

Published : Nov 4, 2021, 12:16 PM IST

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪುನೀತ್ ರಾಜ್‍ಕುಮಾರ್ ಮರೆಯಾಗಿ ಇಂದಿಗೆ 7 ದಿನಗಳು ಕಳೆದಿವೆ. 5ನೇ ದಿನಕ್ಕೆ ರಾಜ್ ಕುಟುಂಬದಿಂದ ಹಾಲು-ತುಪ್ಪ ಕಾರ್ಯಕ್ರಮ ನೆರವೇರಿಸಲಾಗಿತ್ತು.

11ನೇ ದಿನಕ್ಕೆ ಪುನೀತ್ ರಾಜ್‍ಕುಮಾರ್ ವೈಕುಂಠ ಸಮಾರಾಧನೆ ಕಾರ್ಯಕ್ರಮ ನೆರವೇರಿಸಲು ಕುಟುಂಬ ವರ್ಗ ತೀರ್ಮಾನಿಸಿದೆ. ಬಳಿಕ 12ನೇ ದಿನದಿಂದು ಅಭಿಮಾನಿಗಳಿಗಾಗಿ ಪ್ಯಾಲೇಸ್ ಗ್ರೌಂಡ್​​ನಲ್ಲಿ ಕಾರ್ಯಕ್ರಮ ಏರ್ಪಡಿಸಲು ಕುಟುಂಬಸ್ಥರು ನಿರ್ಧರಿಸಿದ್ದೇವೆ ಎಂದು ಪಾರ್ವತಮ್ಮ ರಾಜ್​​ಕುಮಾರ್​ ಸಹೋದರ ಹಾಗೂ ನಿರ್ಮಾಪಕ ಚಿನ್ನೇಗೌಡ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್​ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಅಭಿಮಾನಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತದೆ. ನವೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದಿಂದ ಪ್ಯಾಲೇಸ್ ಗ್ರೌಂಡ್​ನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ನವೆಂಬರ್​​​ 16ಕ್ಕೆ ‘ಪುನೀತ್​ ನಮನ’ ಕಾರ್ಯಕ್ರಮ…

ETV Bharat Logo

Copyright © 2025 Ushodaya Enterprises Pvt. Ltd., All Rights Reserved.