ETV Bharat / sitara

ಹುಬ್ಬಳ್ಳಿ ಚೆಲುವೆಗೆ ಕ್ರೇಜಿಸ್ಟಾರ್​ ಪುತ್ರನೊಂದಿಗೆ ನಟಿಸುವ ಅವಕಾಶ: ಹೇಗಿದೆ ಗೊತ್ತಾ ಸಿದ್ಧತೆ? - ಕೀರ್ತಿ ಕಲಕೇರಿ

ಸ್ಯಾಂಡಲ್​ವುಡ್​​​​ ನಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಸಿಗುವುದೇ ವಿರಳ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿ ಹುಡುಗಿಯೊಬ್ಬರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರನ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದು, ಭರವಸೆ‌ಯ ನಟಿಯಾಗುವ ಕನಸು ಕಂಡಿದ್ದಾಳೆ.‌

keerti kalakeri
ಕೀರ್ತಿ ಕಲಕೇರಿ
author img

By

Published : Jun 14, 2020, 1:20 PM IST

ಹುಬ್ಬಳ್ಳಿ: ಸ್ಯಾಂಡಲ್​ವುಡ್‌ನಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಸಿಗುವುದೇ ವಿರಳ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯ ರಮೇಶ್ ಕಲಕೇರಿ ಹಾಗೂ ಅಶ್ವಿನಿ ರಮೇಶ್ ದಂಪತಿಯ ಮುದ್ದಿನ ಮಗಳು ಕೀರ್ತಿ ಕಲಕೇರಿ ಚಂದನವನದಲ್ಲಿ ತನ್ನದೇ ಛಾಪು ಮೂಡಿಸಲು ರೆಡಿಯಾಗಿದ್ದಾಳೆ.

ಕೀರ್ತಿ ಕಲಕೇರಿ

ವಿ.ರವಿಚಂದ್ರನ್ ಅವರ‌ ಪುತ್ರ ಮನೋರಂಜನ್ ನಾಯಕ ನಟನಾಗಿರುವ "ಪ್ರಾರಂಭ" ಎನ್ನುವ ಕನ್ನಡ ಚಲನಚಿತ್ರದ ಮೂಲಕ ಸ್ಯಾಂಡಲ್​​ವುಡ್​​ಗೆ ಪದಾರ್ಪಣೆ ಮಾಡುತ್ತಿದ್ದು ಹೀರೋಯಿನ್ ಆಗಲು ಬೇಕಾದ ಎಲ್ಲಾ ತಯಾರಿ ಕೂಡ ಮಾಡಿಕೊಂಡಿದ್ದಾಳೆ.

ಜಿಮ್​ನಲ್ಲಿ ಬೆವರಿಳಿಸೋದು ಮಾತ್ರ ಅಲ್ಲದೇ ಡಯಟ್​ ಕೂಡಾ ಮಾಡುತ್ತಿರುವ ಈಕೆ ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿದ್ದಾಳೆ. ಈಗಾಗಲೇ ಪ್ರಾರಂಭ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆ ಬಾಕಿ ಇದೆ. ಮುಂದಿನ ತಿಂಗಳಿನಲ್ಲಿ ಚಿತ್ರ ಬಿಡುಗಡೆಗೊಳ್ಳುವ ನಿರೀಕ್ಷೆ ಇದ್ದು, ಇದರಿಂದ ಉತ್ತರ ಕರ್ನಾಟಕದ ಪ್ರತಿಭೆಯನ್ನ ಕೆಲವೇ ದಿನಗಳಲ್ಲಿ ಕಣ್ತುಂಬಿಕೊಳ್ಳಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.