ETV Bharat / sitara

ಒಂದು ಸಿನಿಮಾ ಟೀಸರ್​​​ ಏನೆಲ್ಲಾ ಮಾಡುತ್ತೆ ನೋಡಿ...! - Madagaja Telugu dubbing

ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬದಂದು ಬಿಡುಗಡೆಯಾದ ಟೀಸರ್​​ಗೆ ಎಲ್ಲೆಡೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈದೀಗ ತೆಲುಗಿನಿಂದ ಕೂಡಾ ಆಫರ್ ಬಂದಿದ್ದು ತೆಲುಗಿಗೆ ಕೂಡಾ ಈ ಸಿನಿಮಾ ಡಬ್ಬಿಂಗ್ ಆಗುತ್ತಿದೆ.

Madagaja movie teaser
ರೋರಿಂಗ್ ಸ್ಟಾರ್ ಶ್ರೀಮುರಳಿ
author img

By

Published : Dec 26, 2020, 8:36 AM IST

Updated : Dec 26, 2020, 8:59 AM IST

'ಮದಗಜ' ಚಿತ್ರತಂಡದಿಂದ ಕ್ರಿಸ್​​​​ಮಸ್​​​ಗೆ ಸಿಹಿ ಸಮಾಚಾರ ಇದೆ ಎಂದು ನಿರ್ದೇಶಕ ಮಹೇಶ್ ಗೌಡ ಹೇಳಿಕೊಂಡಿದ್ದರು. ಅದರಂತೆ ನಿನ್ನೆ ಚಿತ್ರತಂಡದಿಂದ ಸುದ್ದಿ ಹೊರಬಿದ್ದಿದ್ದು, ಈ ಸಿನಿಮಾ ತೆಲುಗಿಗೆ ಡಬ್ ಆಗುತ್ತಿದೆ ಎಂಬ ಮಾಹಿತಿ ನೀಡಿದೆ. ಶ್ರೀಮುರಳಿ ಅಭಿನಯದ ಚಿತ್ರವೊಂದು ತೆಲುಗಿಗೆ ಡಬ್ ಆಗುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಅವರ 'ರಥಾವರ' ಸಿನಿಮಾ ಕೂಡಾ ತೆಲುಗಿಗೆ ಡಬ್ ಆಗಿತ್ತು. ಇದೀಗ 'ಮದಗಜ' ಸಿನಿಮಾ ಕೂಡಾ ಡಬ್ ಆಗುತ್ತಿದೆ.

  • " class="align-text-top noRightClick twitterSection" data="">

ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಎಂದು ಹೇಳಲಾಗಿದ್ದ 'ಮದಗಜ', ಇದ್ದಕ್ಕಿದ್ದಂತೆ ತೆಲುಗಿಗೆ ಡಬ್ ಆಗುತ್ತಿರುವುದೇಕೆ ಎಂಬ ಪ್ರಶ್ನೆ ಬರುವುದು ಸಹಜ. ಚಿತ್ರತಂಡದವರಿಗೂ ಚಿತ್ರವನ್ನು ತೆಲುಗಿಗೆ ಡಬ್ ಮಾಡುವ ಯಾವ ಯೋಚನೆಯೂ ಇರಲಿಲ್ಲವಂತೆ. ಆದರೆ, ಕಳೆದ ವಾರ ಶ್ರೀಮುರಳಿ ಹುಟ್ಟುಹಬ್ಬದ ಸಂದರ್ಭದಲ್ಲಿ 'ಮದಗಜ' ಚಿತ್ರದ ಟೀಸರ್ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ತೆಲುಗು ಚಿತ್ರರಂಗದಿಂದಲೂ ಚಿತ್ರವನ್ನು ಡಬ್ ಮಾಡುವ ಆಫರ್ ಬಂತಂತೆ. ಇದನ್ನು ಬಳಸಿಕೊಳ್ಳಲು ನಿರ್ಧರಿಸಿದ ಚಿತ್ರತಂಡ, ಚಿತ್ರವನ್ನು ತೆಲುಗಿಗೆ ಡಬ್ ಮಾಡಲು ಹೊರಟಿದೆ.

ಇದನ್ನೂ ಓದಿ: Photos: ಕ್ರಿಸ್‌ಮಸ್‌ ಸಂಭ್ರಮದಲ್ಲಿ ಮಿಂದೆದ್ದ ಮೆಗಾ ಕುಟುಂಬ

ಇದರ ಮೊದಲ ಹಂತವಾಗಿ 2021ರ ಜನವರಿ 1 ಹೊಸ ವರ್ಷದಂದು ಚಿತ್ರದ ಟೀಸರ್ ಬೆಳಗ್ಗೆ ಆನಂದ್ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ ತೆಲುಗು ಟೀಸರ್ ಬಿಡುಗಡೆಯಾಗುತ್ತಿದೆ. ಕನ್ನಡದ ಟೀಸರ್​​​​ಗೆ ಶ್ರೀಮುರಳಿ ಅವರೇ ಧ್ವನಿ ನೀಡಿದ್ದರು. ಇದೀಗ ತೆಲುಗು ಟೀಸರ್​​​​​ಗೂ ಅವರೇ ಧ್ವನಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಮೊದಲ ಹಂತ ಅಷ್ಟೇ, ಬೇರೆ ಭಾಷೆಗಳಿಂದಲೂ ಚಿತ್ರವನ್ನು ಡಬ್ ಮಾಡುವುದಕ್ಕೆ ಬೇಡಿಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರವು ಇನ್ನಷ್ಟು ಭಾಷೆಗಳಿಗೆ ಡಬ್ ಆದರೆ ಆಶ್ಚರ್ಯವಿಲ್ಲ. 'ಮದಗಜ' ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದು ಇವರೊಂದಿಗೆ ಜಗಪತಿ ಬಾಬು, ಶಿವರಾಜ್ ಕೆ.ಆರ್. ಪೇಟೆ, ಚಿಕ್ಕಣ್ಣ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರವನ್ನು ಮಹೇಶ್ ಗೌಡ ನಿರ್ದೇಶಿಸಿದರೆ, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

Last Updated : Dec 26, 2020, 8:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.