ಕನ್ನಡದ ಜನಪ್ರಿಯ ಹಿರಿಯ ಗಾಯಕ ಎಸ್.ಪಿ .ಬಾಲಸುಬ್ರಹ್ಮಣ್ಯಂ ನಮ್ಮನ್ನಗಲಿ 5 ತಿಂಗಳಾಗುತ್ತಾ ಬಂತು. ಸಾವಿರಾರು ಗೀತೆಗಳಿಗೆ ದನಿಯಾಗಿ, ಮಧುರ ಹಾಡುಗಳಿಂದ ಸಂಗೀತ ಪ್ರಿಯರ ಮನರಂಜಿಸಿದ್ದ ಎಸ್.ಪಿ.ಬಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ.
ಎಸ್.ಪಿ.ಬಿ ದೈಹಿಕವಾಗಿ ನಮ್ಮಿಂದ ದೂರವಾಗಿದ್ದಾರೆ ನಿಜ. ಆದರೆ ಅವರು ಮಾನಸಿಕವಾಗಿ ಸದಾ ಕಾಲ ನಮ್ಮೊಂದಿಗೆ ಇರುತ್ತಾರೆ. ಇಂತಹ ಗಾನ ಗಾರುಡಿಗನನ್ನು ವಿಶೇಷ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರರಂಗ, ಸಂಗೀತಗಾರರು ಸ್ಮರಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಎದೆ ತುಂಬಿ ಹಾಡುವೆನು ಎಂಬ ವಿಶೇಷ ಕಾರ್ಯಕ್ರಮ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 7-30 ಕ್ಕೆ ಪ್ರಸಾರವಾಗಲಿದೆ.
- " class="align-text-top noRightClick twitterSection" data="
">
ಇನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ಎಸ್.ಪಿ.ಬಿ ಪುತ್ರ ಎಸ್.ಪಿ. ಚರಣ್ ಕೂಡ ಭಾಗವಹಿಸಲಿದ್ದು "ಅಪ್ಪನಿಲ್ಲದೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಚರಣ್ ಹಾಡುತ್ತಿದ್ದೇನೆ" ಎಂದು ಹೇಳಿದ್ದು ಎಸ್ಪಿಬಿ ಅಭಿಮಾನಿಗಳನ್ನು ಭಾವನಾತ್ಮಕರನ್ನಾಗಿಸಿದೆ.
ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಕಾರ್ಯಕ್ರಮದಲ್ಲಿ ರವಿಚಂದ್ರನ್, ಹಂಸಲೇಖ, ಶ್ರೀನಾಥ್, ಗುರುಕಿರಣ್, ವಿನಯಾ ಪ್ರಸಾದ, ಎಸ್ ಪಿ ಶೈಲಜಾ, ಕೆ. ಕಲ್ಯಾಣ್, ಅನುರಾಧಾ ಭಟ್, ಮನೋಮೂರ್ತಿ, ರಾಕ್ ಲೈನ್ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದಾರೆ.
- " class="align-text-top noRightClick twitterSection" data="
">
15ಕ್ಕೂ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್ .ಪಿ.ಬಿ ಅವರು ಕನ್ನಡ ಚಿತ್ರರಂಗದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಗಾಯನ ಮಾತ್ರವಲ್ಲದೇ ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದ ಅವರ ಬಗ್ಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ದಿಗ್ಗಜರು ಅನೇಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.