ETV Bharat / sitara

ಹೊಸ ವರ್ಷಕ್ಕೆ ಬೆಳ್ಳಿ ತೆರೆ ಮೇಲೆ 'ಅಬ್ಬರ' ತೋರಲಿದ್ದಾನೆ ಡೈನಾಮಿಕ್ ಪ್ರಿನ್ಸ್! - ಪ್ರಜ್ವಲ್ ದೇವರಾಜ್ ಹೊಸ ಚಿತ್ರ

ಅಬ್ಬರ ಚಿತ್ರದಲ್ಲಿ ಮೂರು ಶೇಡ್​ನಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳುತ್ತಿದ್ದು, ರಾಜಶ್ರೀ ಪೊನ್ನಪ್ಪ, ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಎಂಬ ಮೂರು ಜನ ನಾಯಕಿಯರು ಈ ಜಂಟಲ್ ಮ್ಯಾನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.‌

Abbara
ಅಬ್ಬರ
author img

By

Published : Dec 14, 2020, 10:11 PM IST

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಸಿನಿಮಾಗಳನ್ನ ಮಾಡಿ, ಪೈಸಾ ವಸೂಲು ಹೀರೋ ಅಂತಾ ಕರೆಯಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್ ಸದ್ಯ ಇನ್ಸ್‌ಪೆಕ್ಟರ್ ವಿಕ್ರಂ ಹಾಗೂ ಅರ್ಜುನ್ ಗೌಡ ಸಿನಿಮಾಗಳನ್ನ ಮುಗಿಸಿದ್ದಾರೆ. ಹೊಸ ವರ್ಷಕ್ಕೆ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಲಿವೆ.

ಅಬ್ಬರ ಚಿತ್ರತಂಡದ ಮಾತು

ಕೆಲ‌ ದಿನಗಳ‌ ಹಿಂದೆ ವೀರಂ ಸಿನಿಮಾದ ಮುಹೂರ್ತ ಮುಗಿಸಿದ್ದ ಪ್ರಜ್ವಲ್ ಇದೀಗ ಅಬ್ಬರ ಎಂಬ ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ. ಟೈಸನ್, ಕ್ರ್ಯಾಕ್, ರಾಜಮಾರ್ತಂಡ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ನಿರ್ದೇಶಕ, ಕೆ ರಾಮ್ ನಾರಾಯಣ್ ಅಬ್ಬರ ಚಿತ್ರದ ಸೂತ್ರಧಾರ.

ಇನ್ನು ಅಬ್ಬರ ಚಿತ್ರದಲ್ಲಿ ಮೂರು ಶೇಡ್​ನಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳುತ್ತಿದ್ದು, ರಾಜಶ್ರೀ ಪೊನ್ನಪ್ಪ, ಲೇಖಾ ಚಂದ್ರ, ನಿಮಿಕಾ ರತ್ನಾಕರ್ ಎಂಬ ಮೂರು ಜನ ನಾಯಕಿಯರು ಈ ಜಂಟಲ್ ಮ್ಯಾನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.‌ ದುಷ್ಟನ ಸಂಹಾರ ಮಾಡಲು ಭಗವಂತ ಹೇಗೆ ಹಲವು ಅವತಾರಗಳಲ್ಲಿ ಬಂದು ಎದುರಾಳಿಯನ್ನ ಸಂಹರಿಸುತ್ತಾನೆ ಅನ್ನೋದು ಅಬ್ಬರ ಸಿನಿಮಾದ ಕಥೆ.

ಪ್ರಜ್ವಲ್ ದೇವರಾಜ್​ಗೆ ಅಬ್ಬರ ಸಿನಿಮಾದ ಪಾತ್ರ ಖುಷಿ ಕೊಟ್ಟಿದೆಯಂತೆ. ಇನ್ನು ಗ್ಲಾಮರ್ ಪಾತ್ರದಲ್ಲಿ ಗಮನ‌ ಸೆಳೆಯುತ್ತಿದ್ದ ರಾಜಶ್ರೀ ಪೊನ್ನಪ್ಪ ಟ್ರೆಡಿಶನಲ್ ಹುಡುಗಿಯಾಗಿ ಚಿತ್ರದಲ್ಲಿ ಕಾಣ್ತಾರಂತೆ. ಹಾಗೇ ನಿಮಿಕಾ ಈ ಚಿತ್ರದಲ್ಲಿ ಬೋಲ್ಡ್ ಕ್ಯಾರೆಕ್ಟರ್ ಅಂತೆ, ಲೇಖಾ ಚಂದ್ರಗೆ ವೈದ್ಯೆ ಪಾತ್ರವಂತೆ.

ಇದನ್ನೂ ಓದಿ: ಅತಿ ಹೆಚ್ಚು ಟ್ವೀಟ್​ ಮಾಡಲಾದ ಚಿತ್ರಗಳ ಪೈಕಿ 'ಕೆಜಿಎಫ್​​ ಚಾಪ್ಟರ್-​2'ಗೆ ಒಂಬತ್ತನೇ ಸ್ಥಾನ

ನಿರ್ದೇಶಕ ಕೆ.ರಾಮ್ ನಾರಾಯಣ್ ಹೇಳುವ ,ಪ್ರೀತಿ, ಫ್ಯಾಮಿಲಿ ಸೆಂಟಿಮೆಂಟ್, ಆಕ್ಷನ್ ಹೀಗೆ ಎಲ್ಲಾ ಎಲಿಮೆಟ್ಸ್ ಇರುವ ಪಕ್ಕಾ ಎಂಟರ್​ಟೈನರ್ ಸಿನಿಮಾ ಅಂತಾರೆ‌. ಪ್ರಜ್ವಲ್ ದೇವರಾಜ್, ಮೂರು ಜನ ನಾಯಕಿಯರು, ಹಾಗೂ ಖಳ‌ ನಟ ರವಿಶಂಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶೋಭಾ ರಾಜ್, ಕೋಟೆ ಪ್ರಭಾಕರ್, ವಿಕ್ಟರಿ ವಾಸು, ವಿಜಯ್ ಚೆಂಡೂರ್ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ.

ನಿರ್ಮಾಪಕ ಬಸವರಾಜ್ ಮಂಚಯ್ಯ, ಅಬ್ಬರ ಸಿನಿಮಾ ಯಶಸ್ಸು ಕಾಣುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ. ಜೆ.ಕೆ ಗಣೇಶ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು, ಯೋಗರಾಜ್ ಭಟ್, ವಿಜಯ್ ಭರಮಸಾಗರ್, ಹಾಗು ರಾಮ್ ನಾರಾಯಣ್ ಬರೆದಿರುವ ಸಾಹಿತ್ಯಕ್ಕೆ, ರವಿ ಬಸ್ರೂರ್ ಬಹಳ ಅದ್ಭುತವಾದ ಮ್ಯೂಸಿಕ್ ನೀಡಿದ್ದಾರೆ. ಸದ್ಯ ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿರೋ ಅಬ್ಬರ ಸಿನಿಮಾ, ಪ್ರಜ್ವಲ್ ದೇವರಾಜ್ ಇನ್ಸ್​ಪೆಕ್ಟರ್ ವಿಕ್ರಂ ಹಾಗು ಅರ್ಜುನ್ ಗೌಡ ಸಿನಿಮಾಗಳು ತೆರೆ ಕಂಡ ಬಳಿಕ ಅಬ್ಬರ ಬೆಳ್ಳೆ ತೆರೆ ಮೇಲೆ ಅಬ್ಬರಿಸೋಕ್ಕೆ ರೆಡಿಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.