ನೀವೆಲ್ಲರೂ ಮನುಷ್ಯರು ಹಾಡು ಹೇಳಿರುವುದನ್ನು ಕೇಳಿದ್ದೀರಿ. ಆದ್ರೆ ನೀವು ನಾಯಿ ಹಾಡೇಳಿರುವುದನ್ನು ಕೇಳಿದ್ದೀರಾ?. ಈ ಸ್ಟೋರಿ ನೋಡಿದ ಮೇಲೆ ನಿಜವಾಗಿಯೂ ನೀವು ಆಶ್ಚರ್ಯ ಪಡಲೇ ಬೇಕು. ಯಾಕಂದ್ರೆ ಇಲ್ಲೊಂದು ನಾಯಿ ರಾನು ಮಂಡಲ್ ಹಾಡಿದ್ದ ತೇರಿ ಮೇರಿ ಹಾಡಿಗೆ ದನಿಗೂಡಿಸಿದೆ.
ಹೌದು ಬಾರಕ್ಪುರದ ನಿವಾಸಿ ಸುಬೀರ್ ಖಾನ್ ತೇರಿ ಮೇರಿ ಹಾಡನ್ನು ಅಭ್ಯಾಸ ಮಾಡುವಾಗ, ಆತನ 'ಬೇಗಾ' ಹೆಸರಿನ ನಾಯಿ ದನಿಗೂಡಿಸಿದೆ. ಸುಬೀರ್ ಹಾರ್ಮೋನಿಯಂ ನುಡಿಸುತ್ತಾ ಹಾಡೇಳುತ್ತಿದ್ದರೆ, ಪಕ್ಕದಲ್ಲೇ ಇದ್ದ ನಾಯಿ ಕೂಡ ಓ... ಎಂದು ಧ್ವನಿಯಾಗಿದೆ.
- " class="align-text-top noRightClick twitterSection" data="">
ಈ ವಿಡಿಯೋವನ್ನು ಸುಬೀರ್ ಖಾನ್ ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ. ಸದ್ಯ ಆ ವಿಡಿಯೋ ಎರಡು ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಅಲ್ಲದೆ 59,000 ಶೇರ್ ಅಗಿದೆ.
ಇನ್ನು ಈ ಹಿಂದೆ ರಾನು ಮಂಡಲ್ ತೇರಿ ಮೇರಿ ಹಾಡಿಗೆ ಧ್ವನಿಯಾಗಿದ್ದು, ಇಂಟರ್ನೆಟ್ನಲ್ಲಿ ರಾತ್ರೋ ರಾತ್ರಿ ಸುದ್ದಿಯಾಗಿದ್ರು.