ETV Bharat / sitara

ಮದುವೆಯಾದ ನಂತರ ಸಿಗರೇಟ್​ ಸೇದುವಷ್ಟು ಬದಲಾಗಿಬಿಟ್ರಾ ಕಾಜಲ್​ ಅಗರ್​ವಾಲ್​​​...? - Kajal Agarwal in live telecast

ಕಾಜಲ್ ಅಗರ್​​ವಾಲ್ ಸಿಗರೇಟ್ ಸೇದುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಇದು ವೆಬ್​ ಸೀರೀಸ್​​​ ಒಂದರ ದೃಶ್ಯ ಎಂಬ ನಿಜಾಂಶ ತಿಳಿದ ನಂತರ ನಿಟ್ಟುಸಿರುಬಿಟ್ಟಿದ್ದಾರೆ.

Kajal
ಕಾಜಲ್​ ಅಗರ್​ವಾಲ್​​​
author img

By

Published : Feb 13, 2021, 12:44 PM IST

ಗೌತಮ್ ಕಿಚ್ಲು ಅವರನ್ನು ಮದುವೆಯಾದ ನಂತರ ಕೂಡಾ ನಟಿ ಕಾಜಲ್ ಅಗರ್​​​ವಾಲ್ ಮೊದಲಿನಂತೆಯೇ ಸಿನಿ ಕರಿಯರನ್ನು ಮತ್ತೆ ಆರಂಭಿಸಿದ್ದಾರೆ. ತೆಲುಗಿನಲ್ಲಿ ಆಚಾರ್ಯ, ಮೋಸಗಾಳ್ಲು, ತಮಿಳಿನಲ್ಲಿ ಕಮಲ್ ಹಾಸನ್​​ ಜೊತೆ ಇಂಡಿಯನ್ 2, ಹಿಂದಿಯಲ್ಲಿ ಮುಂಬೈ ಸಾಗಾ ಚಿತ್ರದಲ್ಲಿ ಕಾಜಲ್ ನಟಿಸುತ್ತಿದ್ದು ಕರಿಯರ್​​​​​​​​ನಲ್ಲಿ ಬಹಳ ಬ್ಯುಸಿ ಇದ್ದಾರೆ.

Kajal Agarwal
'ಲೈವ್​ ಟೆಲಿಕಾಸ್ಟ್​​' ಸೀರೀಸ್​​ನಲ್ಲಿ ಕಾಜಲ್ ಅಗರ್​ವಾಲ್ (ಧೂಮಪಾನ ಆರೋಗ್ಯಕ್ಕೆ ಹಾನಿಕರ)

ಇದನ್ನೂ ಓದಿ: ಚರ್ಚೆಗೆ ಎಡೆ ಮಾಡಿಕೊಟ್ಟ ನಿರ್ದೇಶಕ ಪ್ರೇಮ್ ಟ್ವೀಟ್​​​​...ಅಸಲಿ ವಿಚಾರ ಏನು...?

ಇತ್ತೀಚೆಗೆ ಕಾಜಲ್ ಅಗರ್​​ವಾಲ್ ಸಿಗರೇಟ್ ಸೇದುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಮದುವೆ ಆದ ನಂತರ ಕಾಜಲ್ ಇಷ್ಟು ಬದಲಾಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಸತ್ಯ ಸಂಗತಿ ಎಂದರೆ ಕಾಜಲ್ ಅಗರ್​ವಾಲ್ ವೆಬ್​​ ಸೀರೀಸ್​​​​​​​​ವೊಂದಕ್ಕಾಗಿ ಸಿಗರೇಟ್ ಸೇದುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜಲ್ ಲೈವ್​ ಟೆಲಿಕಾಸ್ಟ್ ಎಂಬ ಹಾರರ್ ವೆಬ್ ಸೀರೀಸ್​​​​​ನಲ್ಲಿ ನಟಿಸಿದ್ದು ಫೆಬ್ರವರಿ 12 ರಂದು ಈ ಸೀರಿಸ್​​​​​​ ಡಿಸ್ನಿ ಪ್ಲಸ್​​​​ನಲ್ಲಿ ಸ್ಟ್ರೀಮಿಂಗ್ ಆಗಿದೆ. ಇದೊಂದು ಹಾರರ್ ವೆಬ್ ಸೀರಿಸ್ ಆಗಿದ್ದು ಈ ಸಿಗರೇಟ್ ಸೇದುವ ದೃಶ್ಯ ಕೂಡಾ ಈ ವೆಬ್ ಸೀರಿಸ್​​​ನದ್ದೇ ಎಂಬ ವಿಚಾರ ತಿಳಿದುಬಂದಿದೆ. ಇದು ಕಾಜಲ್ ಅಭಿನಯದ ಮೊದಲ ಸೀರೀಸ್ ಆಗಿದ್ದು ಇದರಲ್ಲಿ ಮಗಧೀರ ಚೆಲುವೆ ಪತ್ರಕರ್ತೆ ಪಾತ್ರದಲ್ಲಿ ನಟಿಸಿದ್ದಾರೆ. ನಿಜ ವಿಚಾರ ತಿಳಿದ ಅಭಿಮಾನಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. ವೆಬ್ ಸೀರೀಸ್ ಆದರೇನು..? ಸಿನಿಮಾ ಆದರೇನು..? ನೀವು ಸಿಗರೇಟ್ ಸೇದುವುದು ಚೆನ್ನಾಗಿರುವುದಿಲ್ಲ ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.