2020 ಮೊದಲ 3 ತಿಂಗಳು ಕರೊನಾ ಭೀತಿಯಿಂದ ಕನ್ನಡ ಚಿತ್ರ ರಂಗ 50 ಸಿನಿಮಾಗಳು ಬಿಡುಗಡೆಗೆ ಸಿದ್ದ ಮಾಡಿಕೊಂಡು ಕಾಯುತ್ತಿದೆ.
ಇಂದಿಗೆ ಮೂರು ತಿಂಗಳ ಶುಕ್ರವಾರಗಳು ಮುಗಿದಿವೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಸಿನಿಮಾಗಳ ಸುರಿಮಳೆಯೇ ಆಗಬೇಕಿತ್ತು. ಆದರೆ ಕೊರೊನಾ ವೈರಸ್ನಿಂದ ಒಂದು ದಿನಕ್ಕೆ ಒಂದು ಸಿನಿಮಾ ಅಂತೆ ಬಿಡುಗಡೆ ಕಂಡಿತ್ತು. ಏನಿಲ್ಲ ಅಂದರು 50 ಕನ್ನಡ ಸಿನಿಮಗಳು ಬಿಡುಗಡೆಗೆ ಕ್ಯೂನಲ್ಲಿ ನಿಂತಿದೆ. ಈ ಮೂರು ತಿಂಗಳಿನಲ್ಲಿ 60ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿವೆ.
ಮಾರ್ಚ್ 31 ರ ವರೆಗೆ ಅಂತ ಹೇಳಲಾದ ನಂತರ ಏಪ್ರಿಲ್ 14 ರ ವರೆಗೆ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಏಪ್ರಿಲ್ ತಿಂಗಳಿನಲ್ಲಿ ಯಾವುದೇ ಹೊಸ ಸಿನಿಮಗಳು ಬಿಡುಗಡೆ ಆಗುವುದಿಲ್ಲ. ಕಾರಣ ಮಾರ್ಚ್ 12 ಹಾಗೂ ಮಾರ್ಚ್ 13 ರಂದು ಕನ್ನಡದ ಆರು ಸಿನಿಮಾಗಳು ಬಿಡುಗಡೆ ಆದ ಒಂದು ದಿನಕ್ಕೆ ಲಾಕ್ ಡೌನ್ ಆಗಿತ್ತು.
ಈ ಸಂಕಷ್ಟದಲ್ಲಿ ಬಿಡುಗಡೆ ಆಗಿ ಸ್ಥಗಿತ ಆದ ಆರು ಚಿತ್ರಗಳಿಗೆ, ಪರಿಸ್ಥಿತಿ ಯಥಾಸ್ಥಿತಿಗೆ ಬಂದ ನಂತರ ಮೊದಲ ಆದ್ಯತೆ ನಿಡಲಾಗುವದು ಎಂದು ವಾಣಿಜ್ಯ ಮಂಡಳಿ ಸಹ ಹೇಳಿದೆ.
ಹಾಗಿದ್ದ ಮೇಲೆ ಏಪ್ರಿಲ್ 17 ಶುಕ್ರವಾರ ಹಾಗೂ ಏಪ್ರಿಲ್ 24 ಶುಕ್ರವಾರ ಹೊಸ ಸಿನಿಮಾಗಳು ಬಿಡುಗಡೆ ಸಾಧ್ಯತೆ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ.
ಇನ್ನೆನಿದ್ದರೂ ಮೇ 2020 ರಲ್ಲಿ ಹೊಸ ಸಿನಿಮಾಗಳ ಬಿಡುಗಡೆ ಸಾಧ್ಯತೆ ಇದೆ . ಕಾರಣ ಕನ್ನಡ ಚಿತ್ರಗಳು ಸ್ವಲ್ಪ ದಿನದ ಮಟ್ಟಿಗೆ ಪ್ರಚಾರ ಮಾಡಿಕೊಳ್ಳಬೇಕಿದೆ.
ದರ್ಶನ್ ಅಭಿನಯದ ‘ರಾಬರ್ಟ್’, ಮನು ರವಿಚಂದ್ರನ್ ಅಭಿನಯದ ‘ಪ್ರಾರಂಭ’, ರಾಣಾ ಸುನಿಲ್ ಕುಮಾರ್ ಸಿಂಗ್ ‘ಮೀನಾ ಬಜಾರ್.ಕಾಂ’, ಹರಿ ಅಭಿನಯದ ಎಂ ಆರ್ ಪಿ, ದುನಿಯ ವಿಜಯ್ ನಟನೆ ಹಾಗೂ ಮೊದಲ ನಿರ್ದೇಶನದ ಸಲಗ, ವಿಶ್ವ ಬಾಡಿ ಬಿಲ್ಡರ್ ಚಾಂಪಿಯನ್ ಪವನ್ ಶೆಟ್ಟಿ ರನ್ 2, ಡಾರ್ಲಿಂಗ್ ಕೃಷ್ಣ ಅಭಿನಯದ ಲೊಕಲ್ ಟ್ರೈನ್ ಕನ್ನಡ ಸಿನಿಮಾಗಳು ಬಿಡುಗಡೆ ಆಗಲು ಸರಣಿಯಲ್ಲಿವೆ.
ದೊಡ್ಡ ಸ್ಟಾರ್ ಸಿನಿಮಾಗಳ ಪೈಕಿ ಯಶ್ ಅಭಿನಯದ ಕೆ ಜಿ ಎಫ್ ಚಾಪ್ಟರ್ 2, ಪುನೀತ್ ರಾಜಕುಮಾರ್ ಯುವರತ್ನ, ವಿ. ರವಿಚಂದ್ರನ್ ಅಭಿನಯದ ‘ರವಿ ಬೋಪಣ್ಣ’, ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’, ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಮುಂದಿನ ಎರಡು ಮೂರು ತಿಂಗಳಲ್ಲಿ ಬಿಡುಗಡೆ ಆಗಲಿವೆ. ಆದರೆ 50 ಕನ್ನಡ ಚಿತ್ರಗಳು ಅಂತಿಮ ಘಟ್ಟದಲ್ಲಿದ್ದು ಅವೆಲ್ಲ ಒಂದು-ಎರಡು ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಹೊಂದಿವೆ.
ಇಷ್ಟೇ ಅಲ್ಲದೆ ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾಗಳಲ್ಲಿ ತುರ್ತು ನಿರ್ಗಮನ, ಒಂದು ಗಂಟೆಯ ಕಥೆ, ಟಕ್ಕರ್, ಕುಷ್ಕ, ನಿನ್ನ ಸನಿಹಕೆ, ಘಾರ್ಘ, ಗೋರಿ, ಎಲ್ಲಿ ನಿನ್ನ ವಿಳಾಸ, ಸೇಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ಏಕ್ ಲವ್ ಯಾ, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ರೈಮ್, ಗೋದ್ರಾ, ಟಾಮ್ ಅಂಡ್ ಜೆರ್ರಿ, ಕಲಿವೀರ, ಗೋವಿಂದ ಗೋವಿಂದ, ಕೊಡೆಮುರುಗ, ಅಭ್ಯಂಜನ, ಸಿಲ್ವರ್ ಫಿಶ್, ಮೇಲೊಬ್ಬ ಮಾಯಾವಿ, ಕನ್ನೇರಿ, ಕುತಸ್ಥ, ಅಮೃತ ಅಪಾರ್ಟ್ಮೆಂಟ್, ಭೈರಾದೇವಿ, 100, ಕೃಷ್ಣ ಟಾಕೀಸ್, ಶೋಕಿವಾಲ, ತ್ರಿಪುರ, ರಮಾರ್ಜುನ, ತಮಟೆ, ಝಾನ್ಸಿ, ಸಾರಾ ವಜ್ರ, ಬಯಲಾಟದ ಭೀಮಣ್ಣ, ಕಾಫಿ ಕಟ್ಟೆ, ಧೂಮ್ ಅಗೈನ್, ಇನ್ಸ್ಪೆಕ್ಟರ್ ವಿಕ್ರಮ್, ತಾಜ್ ಮಹಲ್ 2, ನಟ ಭಯಂಕರ, ಒಂಬತ್ತನೇ ಅದ್ಭುತ, ಶ್ರೀಮಂತ ಹಾಗೂ ಇನ್ನಿತರ ಸಿನಿಮಾಗಳು ಪಟ್ಟಿಯಲ್ಲಿ ಇವೆ.