ETV Bharat / sitara

Interview: 'ರತ್ನನ್ ಪ್ರಪಂಚ' ಸೃಷ್ಟಿಸಿದ ರೋಹಿತ್​ ಪದಕಿ.. ಸಿನಿರಸಿಕರಿಂದ ಅಭಿನಂದನೆ ಮಹಾಪೂರ - ರತ್ನನ್ ಪ್ರಪಂಚ ಸಿನಿಮಾ ನಿರ್ದೇಶಕ

ರತ್ನನ್ ಪ್ರಪಂಚ ಸಿನಿಮಾ, ಚಿತ್ರಮಂದಿಗಳಲ್ಲಿ ರಿಲೀಸ್ ಆಗದೇ ನೇರವಾಗಿ OTTಯಲ್ಲಿ ಬಿಡುಗಡೆ ಆಗಿ ಕೋಟ್ಯಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಒಬ್ಬ ಮಧ್ಯಮ ವರ್ಗದ ಹುಡುಗನ ಸಮಸ್ಯೆ ಜೊತೆಗೆ ಅಮ್ಮನ ಪ್ರೀತಿಯ ಕಥೆಯನ್ನ ಒಳಗೊಂಡಿರುವ ರತ್ನನ್ ಪ್ರಪಂಚ ಸಿನಿಮಾ, ಸೂಪರ್ ಹಿಟ್ ಆಗಿದೆ. ಸಿನಿಮಾ ಯಶಸ್ಸಿನ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.

ನಿರ್ದೇಶಕ ರೋಹಿತ್ ಪದಕಿ
ನಿರ್ದೇಶಕ ರೋಹಿತ್ ಪದಕಿ
author img

By

Published : Oct 25, 2021, 7:45 PM IST

Updated : Oct 26, 2021, 10:11 PM IST

ಕನ್ನಡ ಚಿತ್ರರಂಗದಲ್ಲಿ ದಯವಿಟ್ಟು ಗಮನಿಸಿ ಸಿನಿಮಾ ಮಾಡಿ ಗಮನ ಸೆಳೆದಿದ್ದ ನಿರ್ದೇಶಕ ರೋಹಿತ್ ಪದಕಿ, ಇದೀಗ ಡಾಲಿ ಧನಂಜಯ್​ ಅಭಿನಯದ ರತ್ನನ್ ಪ್ರಪಂಚ ಸಿನಿಮಾವನ್ನ ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

ರತ್ನನ್ ಪ್ರಪಂಚ ಸಿನಿಮಾ, ಚಿತ್ರಮಂದಿಗಳಲ್ಲಿ ರಿಲೀಸ್ ಆಗದೇ ನೇರವಾಗಿ OTTಯಲ್ಲಿ ಬಿಡುಗಡೆ ಆಗಿ ಕೋಟ್ಯಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಒಬ್ಬ ಮಧ್ಯಮ ವರ್ಗದ ಹುಡುಗನ ಸಮಸ್ಯೆ ಜೊತೆಗೆ ಅಮ್ಮನ ಪ್ರೀತಿಯ ಕಥೆಯನ್ನ ಒಳಗೊಂಡಿರುವ ರತ್ನನ್ ಪ್ರಪಂಚ ಸಿನಿಮಾ, ಸೂಪರ್ ಹಿಟ್ ಆಗಿದೆ. ನಿರ್ಮಾಪಕರಾಕದ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಾಣದಲ್ಲಿ ಬಂದ, ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಸಿನಿಮಾ ಇದಾಗಿದೆ. ರತ್ನನ್ ಪ್ರಪಂಚ ಸಿನಿಮಾ ಸೂತ್ರದಾರ ರೋಹಿತ್ ಪದಕಿ, ಸಿನಿಮಾ ಯಶಸ್ಸಿನ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.

ನಿರ್ದೇಶಕ ರೋಹಿತ್ ಪದಕಿ

ನಿರ್ದೇಶಕ ರೋಹಿತ್ ಪದಕಿ ಹೇಳುವ ಹಾಗೇ, ಈ ಸಿನಿಮಾದ ಕಥೆಯನ್ನ ಮಾಡಿದ ಬಳಿಕ ಆಯಾ ಪಾತ್ರಕ್ಕೆ ಕಲಾವಿದರನ್ನ ಆಯ್ಕೆ ಮಾಡಿದ್ರಂತೆ. ಇನ್ನು ಡಾಲಿ ಧನಂಜಯ್ ಅವರನ್ನ ರಗಡ್ ಹಾಗೂ ಲವರ್ ಬಾಯ್ ಪಾತ್ರದಲ್ಲಿ ನೋಡಿದ್ವಿ. ಆದರೆ, ಧನಂಜಯ್ ಒಳಗೆ ಒಂದು ಮುಗ್ಧತೆ ಇದೆ. ಆ ಮುಗ್ಧತನದ ಮೇಲೆ ರತ್ನನ್ ಪ್ರಪಂಚ ಸಿನಿಮಾ ಕ್ಯಾರೀ ಆಗುತ್ತೆ ಎಂದು ಹೇಳಿದರು.

OTTಯಲ್ಲಿ ಸಿನಿಮಾ ನೋಡಿದ ಸಾವಿರಾರು ಅಭಿಮಾನಿಗಳು, ನಿರ್ದೇಶಕ ರೋಹಿತ್ ಪದಕಿ ಫೋನ್ ಮಾಡಿ, ಯಾಕೇ ಈ ಸಿನಿಮಾವನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿಲ್ಲ ಅಂತಾ ಪ್ರಶ್ನೆ ಕೇಳಿದರಂತೆ. ಕನ್ನಡದಲ್ಲಿ ಸ್ಟಾರ್ ನಟರು ಜೊತೆಗೆ ಬೇರೆ ಬೇರೆಯವರ ಸಿನಿಮಾಗಳು ಬಿಡುಗಡೆ ಆಗೋದಕ್ಕೆ ಥಿಯೇಟರ್ ಸಮಸ್ಯೆ ಎದುರಾಗುತ್ತಿದೆ. ಈ ಕಾರಣಕ್ಕೆ ನಾವು ರತ್ನನ್ ಪ್ರಪಂಚ ಸಿನಿಮಾವನ್ನ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಬಿಡುಗಡೆ ಮಾಡಿದ್ವಿ ಎಂದು ಪದಕಿ ತಿಳಿಸಿದ್ದಾರೆ.

ರತ್ನನ್ ಪ್ರಪಂಚ ಸಿನಿಮಾ ಸಕ್ಸಸ್ ಮೂಡ್​ನಲ್ಲಿರುವ ರೋಹಿತ್ ಪದಕಿ ಅವರಿಗೆ ಕನ್ನಡದ ಎಲ್ಲ ಸ್ಟಾರ್ ನಟರಿಗೆ ಸಿನಿಮಾ ಮಾಡುವ ಕನಸು ಇದೆ. ಅದರಲ್ಲಿ ದೊಡ್ಮನೆ ಮಕ್ಕಳಾದ ಶಿವರಾಜ್​ಕುಮಾರ್ ಹಾಗೂ ಪುನಿತ್ ರಾಜ್​ಕುಮಾರ್ ಸಿನಿಮಾಗಳಿಗೆ ನಿರ್ದೇಶನ ಮಾಡುವ ಕನಸು ಕಂಡಿದ್ದಾರೆ.

ಓದಿ:ಡಾಲಿ ಧನಂಜಯ್‌ ಅಭಿನಯದ 'ರತ್ನನ್‌ ಪ್ರಪಂಚ' ಮನೆಯಲ್ಲೇ ಕೂತು ನೋಡುವ ಅವಕಾಶ; ಇದೇ 22ಕ್ಕೆ ಒಟಿಟಿಯಲ್ಲಿ ಚಿತ್ರ ರಿಲೀಸ್‌

Last Updated : Oct 26, 2021, 10:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.