ETV Bharat / sitara

ರಾಜೇಂದ್ರಸಿಂಗ್ ಬಾಬು ಪುತ್ರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ...ರಿಷಿಕಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ - actress Rishika singh car accident

ನಟಿ ರಿಷಿಕಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕಿಡಾಗಿದ್ದು ರಿಷಿಕಾ ಹಾಗೂ ಗೆಳತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಷಿಕಾ ಸಿಂಗ್, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಪುತ್ರಿ.

Rishika sing car accident
ರಿಷಿಕಾ ಸಿಂಗ್
author img

By

Published : Jul 30, 2020, 1:17 PM IST

ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ಯಲಹಂಕ ಬಳಿ ಅಪಘಾತಕ್ಕೀಡಾಗಿದ್ದು ರಿಷಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಿಷಿಕಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು

ಅಪಘಾತದಲ್ಲಿ ರಿಷಿಕಾಗೆ ಹಾಗೂ ಗೆಳತಿ ಅರ್ಪಿತಾಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಷಿಕಾ ಪ್ರಯಾಣ ಮಾಡುತ್ತಿದ್ದ ಫಾರ್ಚೂನರ್ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ರಿಷಿಕಾ ಹಾಗೂ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಲಗಳ ಪ್ರಕಾರ ಈ ಕಾರಿನಲ್ಲಿ ಜೈ ಜಗದೀಶ್ ಪುತ್ರಿ ಕೂಡಾ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರವಾಗಿ ಮಾತನಾಡಿರುವ ನಟ ಜೈ ಜಗದೀಶ್, ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ, ಸದ್ಯಕ್ಕೆ ನಾನು ಮಡಿಕೇರಿಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

Rishika sing car accident
ರಿಷಿಕಾ ಸಿಂಗ್

ದುನಿಯಾ ವಿಜಯ್ ಅಭಿನಯದ 'ಕಂಠೀರವ' ಚಿತ್ರದ ಮೂಲಕ ಸ್ಯಾಂಡಲ್​​​​​​​​​​​ವುಡ್​​​​​​​​​​​ಗೆ ಎಂಟ್ರಿ ಕೊಟ್ಟ ರಿಷಿಕಾ ಸಿಂಗ್, ನಂತರ 'ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ ವಿಜಯ್ ರಾಘವೇಂದ್ರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿರುವ ರಿಷಿಕಾ ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.