ದಪ್ಪವಾದ ದೇಹ, ಅಗಲವಾದ ಮುಖ ಬರೋಬ್ಬರಿ 120 ಕೆಜಿ ತೂಕ ಇದ್ರು, ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬೇಡಿಕೆಯ ಕಾಮಿಡಿ ನಟ ಬುಲೆಟ್ ಪ್ರಕಾಶ್. ರವಿಚಂದ್ರನ್, ಶಿವರಾಜ್ ಕುಮಾರ್, ದರ್ಶನ್, ಪುನೀತ್ ಕುಮಾರ್, ಉಪೇಂದ್ರ, ಸುದೀಪ್ ಹೀಗೆ ಎಲ್ಲಾ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ಬುಲೆಟ್ ಪ್ರಕಾಶ್, ತಮ್ಮ ಜೀವನದ ಪಯಣ ಮುಗಿಸಿ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಬುಲೆಟ್ ಪ್ರಕಾಶ್ ಬಗ್ಗೆ ಅದೆಷ್ಟೋ ಗೊತ್ತಿಲ್ಲದ, ಅಚ್ಚರಿಯ ಸಂಗತಿಗಳಿವೆ.
ಬುಲೆಟ್ ಪ್ರಕಾಶ್ ಹಾಗು ನಿರ್ದೇಶಕ ರಘುರಾಮ್ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆ ಆತ್ಮೀಯ ಸ್ನೇಹಿತರು. ಈ ಸಂಗತಿ ಚಿತ್ರರಂಗದ ಕೆಲವೇ ಕೆಲವು ಜನಕ್ಕೆ ಬಿಟ್ರೆ , ಬೇರೆ ಯಾರಿಗೂ ಈ ವಿಷ್ಯ ಗೊತ್ತಿಲ್ಲ. ಬುಲೆಟ್ ಪ್ರಕಾಶ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಕೆಲವು ಅಚ್ಚರಿಯ ಸಂಗತಿಗಳನ್ನ ನಿರ್ದೇಶಕ ರಘು ರಾಮ್ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ...
ಬುಲೆಟ್ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ತಾನೊಬ್ಬ ಬೇಡಿಕೆಯ ನಟನಾಗಿದ್ರೂ ಕೂಡ, ಅವರು ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿ. ಬುಲೆಟ್ ಪ್ರಕಾಶ್ ಸಿನಿಮಾ ರಂಗಕ್ಕೆ ಬರುವುದಕ್ಕಿಂತ ಮುಂಚೆ ಶಿವರಾಜ್ ಕುಮಾರ್ ತರಹ ಹೇರ್ ಸ್ಟೈಲ್ ಮಾಡುಕೊಳ್ಳುತ್ತಿದ್ದರು ಅನ್ನೋದು ರಘುರಾಮ್ ಮಾತು. ಅಷ್ಟೇ ಅಲ್ಲದೇ ಶಿವರಾಜ್ ಕುಮಾರ್ ಜೊತೆ ಜೋಡಿ ಹಕ್ಕಿ, ಎಕೆ 47 ಹೀಗೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎಕೆ 47 ಸಿನಿಮಾದಲ್ಲಿ ಚೊಚ್ಚಲ ಬಾರಿಗೆ ಶಿವರಾಜ್ ಕುಮಾರ್ ಜೊತೆ ಬುಲೆಟ್ ಪ್ರಕಾಶ್ ಸ್ಕೀನ್ ಶೇರ್ ಮಾಡಿದ್ರು. ಆ ದಿನಗಳಲ್ಲಿ ಚಾಮರಾಜಪೇಟೆಯ ಉಮಾ ಚಿತ್ರಮಂದಿರದಲ್ಲಿ ಎಕೆ 47 ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ನೋಡೋದಿಕ್ಕೆ ಬುಲೆಟ್ ಪ್ರಕಾಶ್ ಉಮಾ ಥಿಯೇಟರ್ಗೆ ಬಂದಿದ್ರು. ಆದರೆ ಅಂದು ಶಿವರಾಜ್ ಕುಮಾರ್ ಅಭಿಮಾನಿಗಳು ಬುಲೆಟ್ ಪ್ರಕಾಶ್ ಹೊಡೆಯೋದಿಕ್ಕೆ ಹೋಗಿದ್ರಂತೆ. ಕಾರಣ ಎಕೆ47 ಚಿತ್ರದಲ್ಲಿ ಬುಲೆಟ್ ಪ್ರಕಾಶ್ ಶಿವರಾಜ್ ಕುಮಾರ್ಗೆ ಬೈಯ್ಯುವ ದೃಶ್ಯವಿತ್ತು. ಆ ದೃಶ್ಯ ನೋಡಿದ ಅಭಿಮಾನಿಗಳು ಬುಲೆಟ್ ಪ್ರಕಾಶ್ಗೆ ಬೈದು, ಹೊಡೆಯೋದಿಕ್ಕೆ ಹೋಗಿದ್ರು ಅನ್ನೋದು ರಾಘುರಾಮ್ ಮಾತು.
ಇನ್ನು ಬುಲೆಟ್ ಪ್ರಕಾಶ್ಒಂಗೆದು ವಿಕ್ನೇಸ್ ಇತ್ತಂತೆ. ಬುಲೆಟ್ ಪ್ರಕಾಶ್ ಅಜಾನುಬಾಹು ದೇಹ ಹೊಂದಿದ್ರೂ, ಮಧ್ಯ ರಾತ್ರಿ ಹೊತ್ತು ವಾಶ್ ರೂಂಗೆ ಹೋಗೋದಿಕ್ಕೆ ಹೆದರಿಕೊಳ್ಳುತ್ತಿದ್ರಂತೆ. ಸುಬ್ರಹ್ಮಣ್ಯಂಪುರದಲ್ಲಿರುವ ರವಿಚಂದ್ರನ್ ಸಹೋದರ ಬಾಲಾಜಿ ಮನೆಗೆ ಹೋದಾಗ ಬುಲೆಟ್ ಪ್ರಕಾಶ್, ಮಧ್ಯರಾತ್ರಿ ವಾಶ್ ರೂಂಗೆ ಹೋಗದಿಕ್ಕೆ ಹೆದರುತ್ತಿದ್ರಂತೆ. ಆಗ ರಘುರಾಮ್ರನ್ನು ಎಬ್ಬಿಸಿ ಮಗ ಬಾರೋ ನನ್ನ ಜೊತೆ ಅಂತಾ ಬುಲೆಟ್ ಪ್ರಕಾಶ್ ಕೇಳ್ತಾ ಇದ್ರಂತೆ. ಆ ಟೈಮಲ್ಲಿ ಬಾಲಾಜಿ ಏನೋ ಇಬ್ಬರು ಲವರ್ಸ್ಗಳ ತರ ಆಡ್ತಿರಾ ಅಂತಾ ಬೈದಿದ್ರಂತೆ.
ನೈಟ್ ಶೋ ಸಿನೆಮಾ ನೋಡೋದು, ಕಾಟನ್ ಪೇಟೆಯಲ್ಲಿ ಸಿಗೋ ಚಿತ್ರಾನ್ನ, ಕಾಲ್ ಸೂಪ್, ಬಿರಿಯಾನಿ ತಿನ್ನೋದನ್ನ ನನಗೆ ಕಲಿಸಿದ್ದು ಬುಲೆಟ್ ಪ್ರಕಾಶ್ ಎಂದು ರಘುರಾಮ್ ಹೇಳಿದ್ರು. ಬುಲೆಟ್ ಪ್ರಕಾಶ್ಗೆ ಯಾವ ಗಲ್ಲಿಯಲ್ಲಿ ಏನೇನು ಊಟ ಸಿಗುತ್ತೆ ಅನ್ನೋದು ಚೆನ್ನಾಗಿ ಗೊತ್ತಿತ್ತ.. ಊಟ ಅಂದ್ರೆ ಬುಲೆಟ್ ಪ್ರಕಾಶ್ ಪಂಚಪ್ರಾಣ ಅಂತಾ ರಾಘುರಾಮ್ ಹೇಳ್ತಾರೆ.
ಇನ್ನು ರಾಘುರಾಮ್ ಹೇಳುವ ಹಾಗೇ ಬುಲೆಟ್ ಪ್ರಕಾಶ್, ಸಣ್ಣ ಆಗೋದಿಕ್ಕೆ ಆಪರೇಷನ್ ಮಾಡಿಸಬೇಡ ಅಂತಾ ಸಾಕಷ್ಟು ಬಾರಿ ಹೇಳಿದ್ರೂ ಕೇಳದೇ, ಕೊನೆಗೆ ಆಪರೇಷನ್ ಮಾಡಿಸಿಕೊಂಡು ತನ್ನ ಜೀವಕ್ಕೆ ತಾನೇ ಅಪಾಯ ತಂದುಕೊಂಡ ಅನ್ನೋದು. ಬಾಡಿ ಪ್ಲಾಂಟೇಷನ್ ಮಾಡಿಸಿದಾಗ 120 ಕೆಜಿ ಇದ್ದ, ಮನುಷ್ಯ 35 ಕೆಜಿ ಸಣ್ಣ ಆದ.
ಆದರೆ ಈ ಆಪರೇಷನ್ ಮಾಡಿಸಿದಾಗ ಫುಡ್ ಡಯಟ್ ಅನ್ನೋದು ಇರುತ್ತೆ, ಅದನ್ನ ಬುಲೆಟ್ ಪ್ರಕಾಶ್ ನಿಭಾಯಿಸೋದ್ರಲ್ಲಿ ಕಷ್ಟ ಆಗಿದೆ. ಹಾಗೇ ಸಣ್ಣ ಆದಾಗ ಬುಲೆಟ್ ಪ್ರಕಾಶ್ ಜಾಂಡಿಸ್ ಬಂದು, ಪದೇ ಪದೇ ಆಸ್ಪತ್ರೆಗೆ ಹೋಗಿ ಬರ್ತಾನೇ ಇದ್ದು, ಹುಷಾರ್ ಆಗ್ತಾನೆ ಅಂತಾ ನಾವು ಕೂಡ ಅಂದು ಕೊಂಡಿದ್ವಿ. ಮೊನ್ನೆ ಏಪ್ರಿಲ್ 2ಕ್ಕೆ ಬುಲೆಟ್ ಪ್ರಕಾಶ್ ಹುಟ್ಟ ಹಬ್ಬ. ವಿಶ್ ಮಾಡೋಣ ಅಂತಾ ಪೋನ್ ಮಾಡಿದಾಗ್ಲೇ, ಬುಲೆಟ್ ಪ್ರಕಾಶ್ ಮತ್ತೆ ಆಸ್ಪತ್ರೆಗೆ ಸೇರಿಕೊಂಡಿದ್ದಾನೆ ಅಂತಾ ಗೊತ್ತಾಗಿದ್ದು, ಆದರೆ ಸಣ್ಣ ಆಗೋದಿಕ್ಕೆ ಹೋಗಿ ಸಾವನ್ನ ಇವನೇ ಮೈ ಮೇಲೆ ಎಳೆದುಕೊಂಡ ಅಂತಾ ಬುಲೆಟ್ ಪ್ರಕಾಶ್ ಆತ್ಮೀಯ ಸ್ನೇಹಿತನಾಗಿದ್ದ ರಘುರಾಮ್ ಕೆಲವು ಅಚ್ಚರಿ ಸಂಗತಿಗಳನ್ನು ಹೇಳಿಕೊಂಡ್ರು.