ಸೆಲಬ್ರಿಟಿಗಳು, ಅವರ ಮಕ್ಕಳು ಏನೇ ಮಾಡಿದರೂ ಅದು ಬಹಳ ಬೇಗ ಸುದ್ದಿಯಾಗಿಬಿಡುತ್ತದೆ. ಇನ್ನು ಸೆಲಬ್ರಿಟಿಗಳು ಏನೇ ಮಾಡಿದರೂ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇದ್ದೇ ಇರುತ್ತದೆ.
ಇತ್ತೀಚೆಗೆ ಬಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 92 ಅಂಕಗಳನ್ನು ಗಳಿಸುವ ಮೂಲಕ ನಿರ್ದೇಶಕ ರಘುರಾಮ್ ಪುತ್ರಿ ನನಸು ತಂದೆ-ತಾಯಿಗೆ ಕೀರ್ತಿ ತಂದಿದ್ದರು. ಈ ಬಗ್ಗೆ ರಘುರಾಮ್ ಕೂಡಾ ಸಂತೋಷ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಮಗಳ ಸಾಧನೆಯ ಖುಷಿ ಹಂಚಿಕೊಂಡಿದ್ದರು. ಆದರೆ ನನಸು ಕೇವಲ ಓದಿನಲ್ಲಿ ಮಾತ್ರವಲ್ಲ ನಾನು ಹಾಡಲೂ ಕೂಡಾ ಸೈ ಎಂದಿದ್ದಾರೆ.
-
ನಗಿಸಲು ನೀನು ಹಾಡನ್ನು ಹಾಡಲು ನನ್ನ ಮಗಳು ನನಸು ಒಂದು ಸಣ್ಣ ಪ್ರಯತ್ನ..ನಿಮ್ಮ ಪ್ರೀತಿ ಆಶೀರ್ವಾದ ವಿರಲಿ .. Small attempt to sing nagesalu neenu song from #Nanasu @nanasuraghuram pic.twitter.com/8k5kvRS0Dw
— Raghuram (@raghuram9777) May 7, 2019 " class="align-text-top noRightClick twitterSection" data="
">ನಗಿಸಲು ನೀನು ಹಾಡನ್ನು ಹಾಡಲು ನನ್ನ ಮಗಳು ನನಸು ಒಂದು ಸಣ್ಣ ಪ್ರಯತ್ನ..ನಿಮ್ಮ ಪ್ರೀತಿ ಆಶೀರ್ವಾದ ವಿರಲಿ .. Small attempt to sing nagesalu neenu song from #Nanasu @nanasuraghuram pic.twitter.com/8k5kvRS0Dw
— Raghuram (@raghuram9777) May 7, 2019ನಗಿಸಲು ನೀನು ಹಾಡನ್ನು ಹಾಡಲು ನನ್ನ ಮಗಳು ನನಸು ಒಂದು ಸಣ್ಣ ಪ್ರಯತ್ನ..ನಿಮ್ಮ ಪ್ರೀತಿ ಆಶೀರ್ವಾದ ವಿರಲಿ .. Small attempt to sing nagesalu neenu song from #Nanasu @nanasuraghuram pic.twitter.com/8k5kvRS0Dw
— Raghuram (@raghuram9777) May 7, 2019
ನನಸು ಮೈಕ್ ಹಿಡಿದು ನಟಿ ಲಕ್ಷ್ಮಿ ಅಭಿನಯದ 'ಗಾಳಿಮಾತು' ಸಿನಿಮಾದ 'ನಗಿಸಲು ನೀನು ನಗುವೆನು ನಾನು' ಹಾಡನ್ನು ಬಹಳ ಸುಮಧುರವಾಗಿ ಹಾಡಿದ್ದಾರೆ. ಈ ವಿಡಿಯೋವನ್ನು ರಘುರಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ 'ನನ್ನ ಮಗಳು ನನಸು ಒಂದು ಸಣ್ಣ ಪ್ರಯತ್ನ..ನಿಮ್ಮ ಪ್ರೀತಿ ಆಶೀರ್ವಾದವಿರಲಿ' ಎಂದು ಮನವಿ ಮಾಡಿದ್ದಾರೆ. ಹಾಡು ಕೇಳಿದವರು ನನಸು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸೆಲಬ್ರಿಟಿಗಳು ಮಕ್ಕಳು ಕೂಡಾ ಅವರಷ್ಟೇ ಪ್ರತಿಭಾವಂತರು ಎಂಬುದನ್ನು ನನಸು ತೋರಿಸಿದ್ದಾರೆ.