ETV Bharat / sitara

ಬರ್ತಡೇ ಸಂಭ್ರಮದಲ್ಲಿ ನಿರ್ದೇಶಕ ರಘುರಾಮ್​​: ಗೆಳೆಯನಿಗೆ ಕಿಚ್ಚ ವಿಶ್​​​ - undefined

'ಮಿಸ್ಸಿಂಗ್ ಬಾಯ್' ಚಿತ್ರದ ನಿರ್ದೇಶಕ ರಘುರಾಮ್ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸುದೀಪ್, ಗಣೇಶ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಸ್ಯಾಂಡಲ್​​ವುಡ್​​ನ​​​ ಬಹುತೇಕ ಸೆಲಬ್ರಿಟಿಗಳು ರಘುರಾಮ್​ಗೆ ಶುಭ ಕೋರಿದ್ದಾರೆ.

ರಘುರಾಮ್
author img

By

Published : Jul 9, 2019, 4:57 PM IST

ಸ್ಯಾಂಡಲ್​ವುಡ್ ನಟ, ನಿರ್ದೇಶಕ ರಘುರಾಮ್​​ಗೆ ಇಂದು ಜನ್ಮದಿನದ ಸಂಭ್ರಮ. 'ಚೆಲುವೆಯೇ ನಿನ್ನೇ ನೋಡಲು', 'ಮಿಸ್ಸಿಂಗ್​ ಬಾಯ್​​​' ಹಾಗೂ ಇನ್ನಿತರ ಸಿನಿಮಾಗಳನ್ನು ರಘುರಾಮ್ ನಿರ್ದೇಶಿಸಿದ್ದಾರೆ. ಜೊತೆಗೆ ಸಾಕಷ್ಟು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

ರಘುರಾಮ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್​​​ವುಡ್​​ನ ಬಹುತೇಕ ಗಣ್ಯರು ಶುಭ ಕೋರಿದ್ದಾರೆ. ಕಿಚ್ಚ ಸುದೀಪ್​​, ಗೋಲ್ಡನ್ ಸ್ಟಾರ್ ಗಣೇಶ್​, ನಿರ್ದೇಶಕ ಪವನ್ ಒಡೆಯರ್ ಹಾಗೂ ಇನ್ನಿತರರು ರಘುರಾಮ್​​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಸಿನಿ ಕರಿಯರ್ ಆರಂಭಿಸಿದ ರಘುರಾಮ್​ ಈಗ ಸಿನಿಮಾಗಳನ್ನು ನಿರ್ದೇಶನ ಮಾಡುವ ಮಟ್ಟಿಗೆ ಬೆಳೆದಿದ್ದಾರೆ​​​. ಶಿವರಾಜ್​​ಕುಮಾರ್ ಅಭಿನಯದ 'ಜೋಗಿ' ಚಿತ್ರದಲ್ಲಿ ಯೋಗೀಶ ಪಾತ್ರದ ಮೂಲಕ ಮನೆಮಾತಾದವರು ನಿರ್ದೇಶಕ ರಘುರಾಮ್​. ಇವರ ಪುತ್ರಿ ನನಸು ಕೂಡಾ ಒಳ್ಳೆಯ ಗಾಯಕಿ. ರಘುರಾಮ್ ಒಳ್ಳೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಲಿ. ಅವರ ಆಸೆಗಳು ಈಡೇರಲಿ ಎಂಬುದು ನಮ್ಮ ಹಾರೈಕೆ.

Intro:Body:

Director Raghuram

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.