ಇಂದು ಮದರ್ಸ್ ಡೇ.. ಹೆತ್ತ ತಾಯಿಗೆ ಈ ದಿನ ಮೀಸಲಿಟ್ಟಿರುವ ಮಕ್ಕಳು ತಾಯಂದಿರ ದಿನವನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಕೆಲವೆಡೆ ಅಮ್ಮಂದಿರ ಪಾದ ತೊಳೆದು ಪೂಜೆ ಮಾಡಿ ತಾಯಂದಿರ ದಿನವನ್ನು ಅವಿಸ್ಮರಣೀಯಗೊಳಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕ, ನಟ ಜೋಗಿ ಪ್ರೇಮ್ ಕೂಡಾ ಅಮ್ಮಂದಿರ ದಿನಕ್ಕೆ ವಿಷ್ ಮಾಡಿದ್ದಾರೆ. 'ದಿ ವಿಲನ್' ಸಿನಿಮಾದಲ್ಲಿ ತಾಯಿ ಬಗ್ಗೆ ಬರುವ ಹಾಡೊಂದನ್ನು ಪ್ರೇಮ್ ಹಾಡುವ ಮೂಲಕ ಎಲ್ಲಾ ಅಮ್ಮಂದಿರಿಗೂ ವಿಷ್ ಮಾಡಿದ್ದಾರೆ. ಬಹುತೇಕ ಪ್ರೇಮ್ ಅವರ ಎಲ್ಲಾ ಸಿನಿಮಾಗಳಲ್ಲೂ ತಾಯಿ ಬಗ್ಗೆ ಒಂದು ಭಾವಪೂರ್ಣ ಹಾಡನ್ನು ಅಳವಡಿಸಿರುತ್ತಾರೆ. ಅವರ ಇತರ ಸಿನಿಮಾಗಳಿಗಿಂತ 'ಎಕ್ಸ್ಕ್ಯೂಜ್ ಮಿ' ಚಿತ್ರದ ಅವರೇ ಬರೆದಿರುವ 'ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರು' ಹಾಡು ಇಂದಿಗೂ ಬಹಳ ಫೇಮಸ್.
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ 'ಜೋಗಿ' ಸಿನಿಮಾದ 'ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು' ಹಾಡು ಕೂಡಾ ಎಲ್ಲರ ಮೋಸ್ಟ್ ಫೇವರೆಟ್. ಸದ್ಯಕ್ಕೆ ಪ್ರೇಮ್ ತಮ್ಮ ಬಾಮೈದ, ರಕ್ಷಿತಾ ಸಹೋದರನ ಚೊಚ್ಚಲ 'ಏಕ್ ಲವ್ ಯಾ' ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.