ಕೊರೊನಾದಿಂದಾಗಿ ಕನ್ನಡ ಚಿತ್ರರಂಗದಲ್ಲಿ ಸತತ ಆರು ತಿಂಗಳು ಸ್ತಬ್ಧ ಆಗಿತ್ತು. ಸಿನಿಮಾ ಶೂಟಿಂಗ್, ಪ್ರಮೋಷನ್ ಹಾಗೂ ಅಭಿಮಾನಿಗಳ ಭೇಟಿ ಇಲ್ಲದೇ, ನಟ, ನಟಿಯರು ಮನೆಯಲ್ಲೇ ಕಾಲ ಕಳೆಯುವಂತೆ ಮಾಡಿತ್ತು. ಆ ಸಂದರ್ಭದಲ್ಲಿ ಕೆಲ ನಟರು, ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಆಸಕ್ತಿ ಹೊಂದಿದ್ರು. ಶಿವರಾಜ್ ಕುಮಾರ್ ಉಪೇಂದ್ರ, ದರ್ಶನ್, ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೃಷಿ ಕಡೆ ಒಲವು ತೋರಿದ್ರು.
ಈಗ ಜೋಗಿ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರೇಮ್ ಕೂಡ, ನಿರ್ದೇಶನದ ಜೊತೆ ಜೊತೆಗೆ, ವ್ಯವಸಾಯ ಮಾಡುವ ಮನಸ್ಸು ಮಾಡಿದ್ದಾರೆ. ತಮ್ಮ ತಾಯಿ ವ್ಯವಸಾಯ ಮಾಡುತ್ತಿದ್ದ ಭೂಮಿಯಲ್ಲಿ, ಪ್ರೇಮ್ ಟ್ರಾಕ್ಟರ್ನಲ್ಲಿ ಉಳುಮೆ ಮಾಡ್ತಾ ಇದ್ದಾರೆ.
ಶೂಟಿಂಗ್ ಇಲ್ಲದ ಕಾರಣ ತಮ್ಮ ಹುಟ್ಟೂರು ಆದ ಮಂಡ್ಯ ಹತ್ತಿರವಿರುವ ಮದ್ದೂರಿನ ಜಮೀನಿನಲ್ಲಿ ಉಳುಮೆ ಕೆಲಸ ಮಾಡ್ತಾ ಇದ್ದಾರೆ. ನಿನ್ನೆಯಷ್ಟೇ ಸಾವಿರಾರು ರೈತರು ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ಮಾಡಿದ್ರು. ಅದಕ್ಕೆ ಪೂರಕವಾಗಿ ಪ್ರೇಮ್ ರೈತರ ಬಗ್ಗೆ ಕಾಳಜಿ ಮಾತುಗಳನ್ನ ಆಡಿದ್ದಾರೆ. ಮಳೆ, ಗಾಳಿ ಅಂತಾ ಲೆಕ್ಕಿಸದೇ ನಿತ್ಯ ರೈತರು ದುಡಿಯುತ್ತಿದ್ದಾರೆ. ಅಂತವರನ್ನ ಕರೆದುಕೊಂಡು ಬೀದಿಯಲ್ಲಿ ನಿಲ್ಲಿಸಬೇಡಿ, ರೈತರ ಹೆಸರಲ್ಲಿ ರಾಜಕೀಯ ಮಾಡಬೇಡಿ ಅಂತಾ ಕೇಳಿಕೊಂಡಿದ್ದಾರೆ.
ಆದರೆ, ಈ ಕೊರೊನಾ ಹಾವಳಿ ಹೀಗೆ ಇದ್ರೆ, ನಿರ್ದೇಶಕ ಪ್ರೇಮ್ ಕೂಡ ನಿರ್ದೇಶನ ಬಿಟ್ಟು ವ್ಯವಸಾಯ ಮಾಡೋದಕ್ಕೆ ಹೋದ್ರು ಅಚ್ಚರಿ ಇಲ್ಲಾ.