ಉಗ್ರಂ ಹಾಗೂ ಕೆಜಿಎಫ್ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹುಟ್ಟು ಹಬ್ಬಕ್ಕೆ ತೆಲುಗು ಸಿನಿಮಾ ನಿರ್ಮಾಪಕರು ಶುಭಾಶಯ ಕೋರಿದ್ದಾರೆ.
ರಾಜಮೌಳಿ ನಿರ್ದೇಶಿಸುತ್ತಿರುವ ಆರ್ಆರ್ಆರ್ ಚಿತ್ರ ನಿರ್ಮಾಪಕ ಡಿವಿ ದಾನಯ್ಯ, ಪ್ರಶಾಂತ್ ನೀಲ್ಗೆ ಜನುಮ ದಿನದ ಶುಭಾಶಯ ತಿಳಿಸಿದ್ದಾರೆ. ಇವರಲ್ಲದೇ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರುಗಳಾದ ನವೀನ್ ಯೇರಿನೇನಿ ಹಾಗೂ ರವಿ ಶಂಕರ್ ಸಹ ಪ್ರಶಾಂತ್ ನೀಲ್ಗೆ ಶುಭಾಶಯ ತಿಳಿಸಿದ್ದಾರೆ.
ಕೆಜಿಎಫ್ ನಂತರ ಪ್ರಶಾಂತ್ ನೀಲ್ ತೆಲುಗು ಚಿತ್ರ ನಿದೇರ್ಶನ ಮಾಡುತ್ತಾರೆ ಎಂಬ ಸುದ್ದಿಗಳು ಬಹು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ತೆಲುಗು ನಿರ್ಮಾಪಕರುಗಳು ಅವರ ಹುಟ್ಟು ಹಬ್ಬಕ್ಕೆ ಶುಭಕೋರಿರುವುದನ್ನು ನೋಡಿದರೆ ಪ್ರಶಾಂತ್ ನೀಲ್ ಟಾಲಿವುಡ್ಗೆ ಕಾಲಿಡುವುದು ಪಕ್ಕಾ ಅನ್ನಿಸುತ್ತಿದೆ.