ETV Bharat / sitara

ನಾನೇನಾದರೂ ಸತ್ತರೆ ಅದಕ್ಕೆ ಬಿಎಸ್​​​ವೈ, ವಿಜಯೇಂದ್ರ, ಸುಧಾಕರ್ ಹೊಣೆ: ನಿರ್ದೇಶಕ ಗುರುಪ್ರಸಾದ್​ - ಕೊರೊನಾ ಸುದ್ದಿ

ನಾನು ಸತ್ತರೂ ಕೂಡ ಕೊನೇ ಕ್ಷಣದವರೆಗೂ ನನ್ನ ಈ ಶಾಪ ನೋವು ಕೊಡಬೇಕು ಎಂದು ಈ ಮಾತು ಹೇಳುತ್ತಿದ್ದೇನೆ. ಒಂದೂವರೆ ವರ್ಷ ಟೈಮ್​ ತಗೊಂಡು, ಮೂರು - ನಾಲ್ಕು ತಿಂಗಳು ಲಾಕ್​ಡೌನ್ ಮಾಡಿದ್ರಲ್ಲ ಎನ್ನುವ ಮೂಲಕ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

Director Guruprasad
ನಿರ್ದೇಶಕ ಗುರುಪ್ರಸಾದ್​
author img

By

Published : Apr 19, 2021, 4:19 PM IST

ಮಠ, ಎದ್ದೇಳು ಮಂಜುನಾಥ್, ಎರಡನೇ ಸಲ. ಹೀಗೆ ವಿಭಿನ್ನ ಸಿನಿಮಾಗಳ ಮಾಡಿ ಗಮನ ಸೆಳೆದಿರೋ ನಿರ್ದೇಶಕ ಗುರು ಪ್ರಸಾದ್​​ಗೆ ಸಹ ಕೊರೊನಾ ದೃಢವಾಗಿದೆ. ಈ ಬಗ್ಗೆ ನಿರ್ದೇಶಕ ಗುರು ಪ್ರಸಾದ್ ಸೋಷಿಯಲ್ ಮೀಡಿಯಾ ಮೂಲಕ ದೃಢಪಡಿಸಿದ್ದಾರೆ. ಅಷ್ಟೇ ಅಲ್ಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಅವರ ಪುತ್ರ ಬಿ.ವೈ. ವಿಜಯೇಂದ್ರ, ಆರೋಗ್ಯ ಸಚಿವ ಸುಧಾಕರ್​, ಡಿ.ಕೆ. ಶಿವಕುಮಾರ್​ ಸೇರಿದಂತೆ ಅನೇಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ.

ಒಂದು ವೇಳೆ ನಾನು ನಿಧನರಾದರೆ ಅದಕ್ಕೆ ಯಡಿಯೂರಪ್ಪ, ವಿಜಯೇಂದ್ರ, ಸುಧಾಕರ್​ ಮುಂತಾದ ರಾಜಕಾರಣಿಗಳೇ ಕಾರಣ ಎಂದು ಗುರು ಪ್ರಸಾದ್​ ಹೇಳಿದ್ದಾರೆ.

  • " class="align-text-top noRightClick twitterSection" data="">

ಇದು ನನ್ನ ಕೊನೆ ಕ್ಷಣಗಳ ಕೊನೇ ಮಾತುಗಳು. ಕೊರೊನಾ ಪಾಸಿಟಿವ್​ ಬಂದಿದೆ. ನಮ್ಮ ಮನೆಯವರೆಗೂ ಕೊರೊನಾ ತಂದುಕೊಟ್ಟಂತಹ ಯಡಿಯೂರಪ್ಪ, ವಿಜಯೇಂದ್ರ ಇವರಿಗೆಲ್ಲ ಧನ್ಯವಾದಗಳು. ನಮ್ಮ ಸಾವಿಗೆ ಮುನ್ನುಡಿ ಬರೆದಿದ್ದೀರಿ. ಕೊರೊನಾ ಪಾಸಿಟಿವ್​ ಆಗಿದ್ದಕ್ಕೆ ನೋವಿನಲ್ಲಿ ಮಾತನಾಡುತ್ತಿದ್ದೇನೆ ಎಂದಿದ್ದಾರೆ.

ನಾನು ಸತ್ತರೂ ಕೂಡ ಕೊನೇ ಕ್ಷಣದವರೆಗೂ ನನ್ನ ಈ ಶಾಪ ನೋವು ಕೊಡಬೇಕು ಎಂದು ಈ ಮಾತು ಹೇಳುತ್ತಿದ್ದೇನೆ. ಒಂದೂವರೆ ವರ್ಷ ಟೈಮ್​ ತಗೊಂಡು, ಮೂರು - ನಾಲ್ಕು ತಿಂಗಳು ಲಾಕ್​ಡೌನ್ ಮಾಡಿದ್ರಲ್ಲ ಎನ್ನುವ ಮೂಲಕ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಇನ್ನು ನರೇಂದ್ರ ಮೋದಿ ಪ್ರಾಮಾಣಿಕ. ಆದರೆ, ಬಿಜಿಪಿಯವರೆಲ್ಲ ಪ್ರಾಮಾಣಿಕರಲ್ಲ. ಒಂದೊಂದು ರೂಪಾಯಿ ದುಡಿಯಲು ಎಲ್ಲರೂ ಕಷ್ಟ ಪಡುತ್ತಿದ್ದಾರೆ. ಒಂದೂವರೆ ವರ್ಷ ಸಮಯ ತೆಗೆದುಕೊಂಡು ಪ್ರತಿಮನೆಗೂ ವೈರಸ್​ ಕಳಿಸಿದ್ದೀರಲ್ಲ. ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಕೊರೊನಾ ಬಂದಿದೆ. ಅಕಸ್ಮಾತ್​ ಸತ್ತು ಹೋದರೆ ಇದನ್ನೆಲ್ಲ ಹೇಳೋಕೆ ಆಗಲ್ಲ ಅಂತಾ ವಿಡಿಯೋವನ್ನ‌ ಮಾಡಿದ್ದೀನಿ ಅಂತಾ ನಿರ್ದೇಶಕ ಗುರು ಪ್ರಸಾದ್ ತಮ್ಮ ನೋವು ತೋಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.