ಹೈದರಾಬಾದ್: ಜನಪ್ರಿಯ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರು ತಮ್ಮ ಚೊಚ್ಚಲ ನಿರ್ಮಾಣದ 'ಜೋಡಿ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಪಂಜಾಬಿ ಭಾಷೆಯಲ್ಲಿ 'ಜೋಡಿ' ಸಿನಿಮಾ ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೆ ಅಲಿ ಅಬ್ಬಾಸ್ ಜಾಫರ್ ಅವರ ಮುಂಬರುವ ಚಿತ್ರಕ್ಕೆ ಎಂಟ್ರಿ ಕೊಡುವ ಮೂಲಕ ದಿಲ್ಜಿತ್ ದೋಸಾಂಜ್ ಮತ್ತೆ ಬಾಲಿವುಡ್‌ಗೆ ಮರಳಲು ಸಜ್ಜಾಗಿದೆ.
ಪಂಜಾಬಿ ಮತ್ತು ಬಾಲಿವುಡ್ ಚಲನಚಿತ್ರೋದ್ಯಮದಲ್ಲಿ ಹೊರಹೊಮ್ಮಿದ ಅತ್ಯುತ್ತಮ ಪ್ರತಿಭೆಗಳಲ್ಲಿ ದಿಲ್ಜಿತ್ ದೋಸಾಂಜ್ ಅವರು ಕೂಡ ಒಬ್ಬರು. ಅವರ ಭಾವಪೂರ್ಣ ಗಾಯನ, ವಿನಮ್ರ ವರ್ತನೆ, ಹಾಸ್ಯಪ್ರಜ್ಞೆ ಮತ್ತು ಪ್ರಥಮ ದರ್ಜೆಯ ನಟನೆಯಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. (2016) ರಲ್ಲಿ ಉಡ್ತಾ ಪಂಜಾಬ್ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದರು.
ಈ ತಿಂಗಳು ಫಿಲ್ಮ್ ಸಿಟಿಯಲ್ಲಿ 'ಜೋಡಿ' ಸಿನಿಮಾದ ಚಿತ್ರೀಕರಣ ನಡೆಯಲಿದೆ. ಅಂಬರ್ ದೀಪ್ ಸಿಂಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.