ETV Bharat / sitara

ಕನ್ನಡ ಮರೆತರಾ ನಟಿ ರಶ್ಮಿಕಾ ಮಂದಣ್ಣ? - ಪುಷ್ಪ ಸಿನಿಮಾ ಪ್ರಚಾರ

ನಾನು ಬೆಂಗಳೂರಿಗೆ ಬರದೇ, ನಮ್ಮೂರಿಗೆ ಹೋಗದೇ ತುಂಬಾ ದಿನಗಳು ಆಗಿದೆ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅಷ್ಟೇ ಅಲ್ಲ ತೆಲುಗು, ತಮಿಳು, ಹಿಂದಿ ಮಾತನಾಡಿ ಅದೇ ಭಾಷೆ ಬಂದು ಬಿಡುತ್ತದೆ ಎಂದು ಹೇಳುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಕನ್ನಡ ಮರೆತಿರುವುದಾಗಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ..

actress Rashmika Mandanna
ನಟಿ ರಶ್ಮಿಕಾ ಮಂದಣ್ಣ
author img

By

Published : Dec 15, 2021, 6:47 PM IST

ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಸ್ಟಾರ್ ಡಮ್ ಜೊತೆಗೆ ಆಸ್ತಿ, ಅಂತಸ್ತು ಬಂದ್ರೆ ತಾರೆಯರು ಬದಲಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತವೆ. ಆದ್ರೀಗ ಕರ್ನಾಟಕದ ಕ್ರಶ್ ಅಂತ ಕರೆಸಿಕೊಂಡಿರುವ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ನಡವಳಿಕೆಯಲ್ಲಿ ನಿಜವಾಗುತ್ತಿದೆ ಎನ್ನೋ ಮಾತುಗಳು ಕೇಳಿ ಬರುತ್ತಿದೆ.

ಹೌದು, ಕಿರಿಕ್ ಪಾರ್ಟಿ ಸಿನಿಮಾ ನಂತರ ಬಹುಭಾಷಾ ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ ಅನ್ನೋದು ಆಗಾಗ ಪ್ರೂವ್​​ ಆಗುತ್ತಿರುತ್ತದೆ. ಸದ್ಯ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಅಭಿನಯಿಸಿರೋ ರಶ್ಮಿಕಾ ಮಂದಣ್ಣ, ಈ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು.

ಈ ವೇಳೆ ಮಾತನಾಡಿದ ರಶ್ಮಿಕಾ ಮಂದಣ್ಣ, ನಾನು ಬೆಂಗಳೂರಿಗೆ ಬರದೇ, ನಮ್ಮೂರಿಗೆ ಹೋಗದೆ ತುಂಬಾ ದಿನಗಳು ಆಗಿದೆ ಎಂದರು. ಅಷ್ಟೇ ಅಲ್ಲ ತೆಲುಗು, ತಮಿಳು, ಹಿಂದಿ ಮಾತನಾಡಿ ಅದೇ ಭಾಷೆ ಬಂದು ಬಿಡುತ್ತದೆ ಎಂದು ಹೇಳುವ ಮೂಲಕ ಕನ್ನಡ ಮರೆತಿರುವುದಾಗಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ..

ಪುಷ್ಪ ಸಿನಿಮಾ 17ರಂದು ಬಿಡುಗಡೆ ಆಗುತ್ತಿದೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಕ್ಯಾರೆಕ್ಟರ್ ಅನ್ನು ಮಾಡಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ಅಲ್ಲು ಅರ್ಜುನ್ ಬಗ್ಗೆ ರಶ್ಮಿಕಾ ಮಂದಣ್ಣ ಕೊಂಡಾಡಿದರು. ಕೊನೆಗೆ ಪುಷ್ಪ ಸಿನಿಮಾದಲ್ಲಿ ಬರುವ ಒಂದು ಡೈಲಾಗ್ ಹೊಡೆಯುವ ಮೂಲಕ ನಾಚಿ ನೀರಾಗುತ್ತಾರೆ.

ಇದನ್ನೂ ಓದಿ: ನಾನೀಗ ಅಪ್ಪು ಸಾರ್ ಮನೆಗೆ ಹೋಗುವುದಿಲ್ಲ: ಅಲ್ಲು ಅರ್ಜುನ್​ ಹಾಗೆ ಹೇಳಿದ್ಯಾಕೆ?

ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಸಿನಿಮಾ ಮಾಡಿ ನಂತರ ಪರ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುತ್ತಿರೋದು ಖುಷಿಯ ವಿಚಾರ. ಆದರೆ, ಕನ್ನಡದ ಹುಡುಗಿಯಾಗಿರೋ ರಶ್ಮಿಕಾ ಮಂದಣ್ಣನಿಗೆ ಕನ್ನಡ ಮರೆತು ಹೋಗಿದೆಯಾ ಎನ್ನೋ ಅನುಮಾನ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.