ETV Bharat / sitara

ಟೈಟಲ್​ನಿಂದಲೇ ಸಿನಿರಸಿಕರ ಕುತೂಹಲ ಕೆರಳಿಸಿದ ‘ಧೀರ ಸಾಮ್ರಾಟ್’ - Sandalwood news films

ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ ‘ಧೀರ ಸಾಮ್ರಾಟ್’ ಟೈಟಲ್​ನಿಂದಲೇ ಸಿನಿರಸಿಕರ ಕುತೂಹಲ ಕೆರಳಿಸಿದೆ. ಎಲ್ಲ ಅಂದು ಕೊಂಡಂತಾದರೆ ಈ ವರ್ಷದ ಕೊನೆಯಲ್ಲಿ ‘ಧೀರ ಸಾಮ್ರಾಟ’ ಬೆಳ್ಳಿ ಪರದೆಗೆ ಎಂಟ್ರಿಕೊಡಲಿದ್ದಾನೆ.

author img

By

Published : Jun 21, 2020, 5:54 PM IST

Updated : Jun 21, 2020, 6:07 PM IST

‘ಧೀರ ಸಾಮ್ರಾಟ್’ ಪವನ್ ಕುಮಾರ್ ಅವರ ಮೊದಲ ಪ್ರಯತ್ನವಾದರೂ, ಟೈಟಲ್​ನಿಂದಲೇ ಸಿನಿರಸಿಕರ ಕುತೂಹಲ ಕೆರಳಿಸಿರುವ ಚಿತ್ರ. ಕಿರುತೆರೆಯಲ್ಲಿ ನಿರೂಪಕರಾಗಿ ಕೆಲಸ ಮಾಡಿದ ಅನುಭವವಿರುವ ಪವನ್ ಕುಮಾರ್ ಮೊದಲ ಬಾರಿಗೆ ‘ಧೀರ ಸಾಮ್ರಾಟ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಚಿತ್ರ ತಂಡ
ಚಿತ್ರ ತಂಡ

ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾದಲ್ಲಿ ರಾಕೇಶ್ ಬಿರಾದಾರ್ ನಾಯಕನಾಗಿ, ನಾಯಕಿಯಾಗಿ ಅದ್ವಿತಿ ‌ಶೆಟ್ಟಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಮುಗಿದ್ದಿದ್ದು, ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ.

ಸದ್ಯ ಸರ್ಕಾರ ಶೂಟಿಂಗ್ ಗೆ ಪರ್ಮಿಷನ್ ಕೊಟ್ಟಿದ್ದು, ಜುಲೈ ತಿಂಗಳಿನಲ್ಲಿ ಮತ್ತೆ ಶೂಟಿಂಗ್ ಮುಂದುವರೆಯುವ ಸಾಧ್ಯತೆಯಿದೆ. ಬಾಕಿಯಿರುವ ಎರಡು ಫೈಟ್ ಹಾಗೂ ಮೂರು ಹಾಡುಗಳ ಶೂಟಿಂಗ್ ಬಾಕಿಯಿದೆ.

ಸಿನಿರಸಿಕರ ಕುತೂಹಲ ಕೆರಳಿಸಿದ ‘ಧೀರ ಸಾಮ್ರಾಟ್’

ಚಿತ್ರದಲ್ಲಿಬಹುದೊಡ್ಡ ತಾರಾಗಣವಿದ್ದು ನಾಗೇಂದ್ರ ಅರಸ್, ಬಲರಾಜ್, ಸಂಕಲ್ಪ ಪಾಟೀಲ್, ಹರೀಶ್ ಅರಸು, ರಮೇಶ್ ಭಟ್, ಶೋಭರಾಜ್, ಯತಿರಾಜ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತನ್ವಿ ಪ್ರೊಡಕ್ಷನ್ ಹೌಸ್​ನಲ್ಲಿ ಗುರು ಬಂಡಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆರಾಘವ್​ ಸುಭಾಷ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಭರ್ಜರಿ ಚೇತನ್ ಕುಮಾರ್, ನಾಗೇಂದ್ರ ಪ್ರಸಾದ್ ಹಾಗೂ ನಿರ್ದೇಶಕ ಪವನ್ ಕುಮಾರ್​ ಸಾಹಿತ್ಯ ಚಿತ್ರಕ್ಕಿದೆ‌. ಎಲ್ಲ ಅಂದು ಕೊಂಡಂತಾದರೆ ಈ ವರ್ಷದ ಕೊನೆಯಲ್ಲಿ ‘ಧೀರ ಸಾಮ್ರಾಟ್​’ ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದ್ದಾನೆ.

Last Updated : Jun 21, 2020, 6:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.