ಕನ್ನಡದಲ್ಲಿ '9 ಸುಳ್ಳುಗಳು' ಎಂಬ ಸಿನಿಮಾ ಬರುತ್ತಿದ್ದು, ಸಖತ್ ಸುದ್ದಿಯಲ್ಲಿದೆ. ಈ ಸಿನಿಮಾ ಹವಾ ಎಬ್ಬಿಸಲು ಕಾರಣ ಅಂದ್ರೆ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾದ 'ಎನೋ ಬಡವ ರಾಸ್ಕಲ್ ನಿಂಗ್ ಕನ್ನಡ ಬರಲ್ವಾ' ಅನ್ನೋ ಹಾಡು.
ಹೌದು, ಈ ಹಾಡಿಗೆ ವಿಕ್ರಮ್ ವಸಿಷ್ಠ ಲಿರಿಕ್ ಬರೆದಿದ್ದು, ಕಿರಿಕ್ ನಿರ್ದೇಶಕ ರಿಷಭ್ ಶೆಟ್ಟಿ ಧ್ವನಿ ನೀಡಿದ್ದಾರೆ. ಈ ಸಿನಿಮಾಕ್ಕೆ ಮಂಜುನಾಥ್ ಮುನಿಯಪ್ಪ ಆಕ್ಷನ್ ಕಟ್ ಹೇಳಿದ್ದಾರೆ.
ಈ ಹಾಡು ಹಿಟ್ ಆಗಿದ್ದೇನೋ ನಿಜ. ಆದ್ರೆ ಈ ಸಾಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಡಾಲಿ ಧನಂಜಯ್ ಈಗಾಗಲೇ 'ಬಡವ ರಾಸ್ಕಲ್' ಅಂತ ಟೈಟಲ್ ಇರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದ್ರಿಂದ ಈಗಾಗಲೇ ಈ ಟೈಟಲ್ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದ್ದು, ಮತ್ತೆ ಇದೇ ಟೈಟಲ್ ಬಳಸಿಕೊಂಡು ಹಾಡು ಮಾಡುವುದು ಎಷ್ಟು ಸರಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
![daki fan tweet](https://etvbharatimages.akamaized.net/etvbharat/prod-images/4955030_thumb.jpg)
ಆದ್ರೆ ಈ ಬಗ್ಗೆ ಖುಷಿಯಿಂದಲೇ ಟ್ವೀಟ್ ಮಾಡಿರುವ ಡಾಲಿ ಧನಂಜಯ್, ನಮ್ಮ ‘ಬಡವ ರಾಸ್ಕಲ್’ ಸಿನಿಮಾಗೂ, ನಿರ್ದೇಶಕ @shetty_rishab ಅವರು ಅತ್ಯದ್ಭುತವಾಗಿ ಹಾಡಿರುವ ಈ ಹಾಡಿಗೂ ಯಾವುದೇ ಸಂಬಂಧವಿಲ್ಲ. ಯಾವ ಸಿನಿಮಾ ಹಾಡು ಅಂತ ನನಗೂ ಗೊತ್ತಿಲ್ಲ. All the very best to the team. Anyways, thanks for promoting my film ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆ ಸಿನಿಮಾದ ನಾಯಕನಿಗೆ ಈ ಹಾಡಿನ ಬಗ್ಗೆ ಬೇಸರ ಇಲ್ಲದಿದ್ರೂ ಡಾಲಿ ಧನಂಜಯ್ ಅಭಿಮಾನಿಗಳು ಈ ಹಾಡಿನ ಬಗ್ಗೆ ಅಸಮಾಧಾನ ಹೊರ ಹಾಕಿರೋದು ಸುಳ್ಳಲ್ಲ.
- " class="align-text-top noRightClick twitterSection" data="">